ಸ್ವಾತಂತ್ರ್ಯದಿನಾಚರಣೆ,ಗಣರಾಜ್ಯೋತ್ಸವ ಸೇರಿದಂತೆ ಇತರ ರಾಷ್ಟ್ರೀಯ ಹಬ್ಬಗಳನ್ನು ನಾವು ರಜೆಯ ಹಬ್ಬಗಳಾಗಿ ಆಚರಿಸುವ ಬದಲು ಅಂದು ರಾಷ್ಟ್ರೀಯ ಹಬ್ಬಗಳ ಮಹತ್ವ ಹಾಗೂ ದೇಶಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದು ಆ ನಿಟ್ಟಿನಲ್ಲಿ ದೇಶಸೇವೆಗೆ ಮುಂದಾಗಬೇಕೆಂದು ಸಾಹಿತಿ ಹಾಗೂ ಪ್ರಾಂಶುಪಾಲರಾದ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದಲ್ಲಿ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಅವರು ಮಾತನಾಡಿದರು. |
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಪ್ರಸುತದಲ್ಲಿ ಅನೇಕ ಶಾಲಾ-ಕಾಲೇಜು,ಸರ್ಕಾರಿ ಕಛೇರಿಗಳಲ್ಲಿ ರಾಷ್ಟ್ರೀಯ ಹಬ್ಬಗಳ ದಿನದಂದು ಧ್ವಜಾರೋಹಣ ನೆರವೇರಿಸಿ ಸಿಹಿ ಹಂಚಿ, ಮನೆಗಳಿಗೆ ತೆರಳುತ್ತಾರೆ ಹೊರತು ಆ ದಿನದ ಮಹತ್ವವನ್ನು ತಿಳಿಯುವುದಾಗಲಿ ಅಥವಾ ಹೊಸಹೊಸ ವಿಚಾರಗಳನ್ನು ತಿಳಿಯುವ ಯಾವುದೇ ಕಾರ್ಯವನ್ನು ಮಾಡುವಲ್ಲಿ ಮುಂದಾಗುತ್ತಿಲ್ಲ ಎಂದರು. ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಪಾಳ್ಗೊಳ್ಳುವುದು ಎಲ್ಲಾ ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದರು. ಈ ಬಾರಿ ಗಣರಾಜ್ಯೋತ್ಸವದ ಅಂಗವಾಗಿ ಪ್ರತಿ ವಿಭಾಗಕ್ಕೆ ಸಂಬಂಧಿಸಿದ ಸೆಮಿನಾರ್ ಗಳನ್ನು ಅಯೋಜಿಸಿದ್ದು ಗಣರಾಜ್ಯೋತ್ಸವದ ಮಹತ್ವವನ್ನು ತಿಳಿಸುವ ಕಾರ್ಯ ಮಾಡುತ್ತಿರುವುದಾಗಿ ತಿಳಿಸಿದರು.
ಈ ವೇಳೆ ದೈಹಿಕ ಸಂಯೋಜಕ ಶಿವಯ್ಯ,ಉಪನ್ಯಾಸಕರಾದ ಶ್ರೀನಿವಾಸಪ್ಪ,ಅಶೋಕ್,ಹನುಮಂತಪ್ಪ,ಚಂದ್ರಮೌಳಿ, ಗ್ರಂಥಪಾಲಕ ಲೋಕೇಶ್ ಸೇರಿದಂತೆ ಸಿಬ್ಬಂದಿಯವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ