ಪ್ರಸ್ತುತದಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಶಾಲಾಮಕ್ಕಳು ಸೇರಿದಂತೆ ಸಾರ್ವಜನಿಕರು,ಪೋಷಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಸಿಪಿಐ ಜಯಕುಮಾರ್ ತಿಳಿಸಿದರು.
ಹುಳಿಯಾರಿನ ವಿದ್ಯಾವಾರಿಧಿ ಶಾಲೆಯಲ್ಲಿ ನಡೆದ ಅಪರಾಧ ತಡೆ ಕುರಿತ ಕಾರ್ಯಕ್ರಮದಲಿ ಸಿಪಿಐ ಜಯಕುಮಾರ್ ಮಾತನಾಡಿದರು. |
ಹುಳಿಯಾರು ಪೊಲೀಸ್ ಠಾಣೆಯವತಿಯಿಂದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಅಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಹಾಗೂ ಅಪರಾಧ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲಾ ಮಕ್ಕಳು ಶಾಲೆಗೆ ಬರುವಾಗ ಹಾಗೂ ಹೋಗುವಾಗ ಯಾವುದೆ ಅಪರಿಚಿತ ವ್ಯಕ್ತಿಗಳೊಂದಿಗೆ ಹೆಚ್ಚು ಮಾತನಾಡಲು ಹೋಗಬೇಡಿ ಹಾಗೂ ತಮ್ಮ ವಿವರವನ್ನು ಯಾವುದೇ ಕಾರಣಕ್ಕೂ ಅವರಿಗೆ ನೀಡಬೇಡಿ ಎಂದರು. ಶಾಲೆಯಲ್ಲೂ ಸಹ ಕೆಲ ಅಪರಾಧ ಪ್ರಕರಣಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಶಾಲಾ ಆಡಳಿತ ಮಂಡಳಿ ಶಾಲೆಯ ಸಿಬ್ಬಂದಿಯವರ ಮೇಲೆ ಎಚ್ಚರವಹಿಸಿಸುವುದಲ್ಲದೆ ಮಕ್ಕಳಿಗೆ ಹೆಚ್ಚಿನ ಸುರಕ್ಷತೆ ನೀಡುವಲ್ಲಿ ಮುಂದಾಗಬೇಕಿದೆ ಎಂದರು. ವಿದ್ಯಾರ್ಥಿನಿಯರು ಒಬ್ಬರೆ ಶಾಲೆಗೆ ಬರುವ ಬದಲು ತಮ್ಮ ಶಾಲಾ ವಾಹನ ಅಥವಾ ಪೋಷಕರಜೊತೆ ಶಾಲೆಗೆ ಬರುವಂತೆ ತಿಳಿಸಿದರು.ಶಾಲಾಮಕ್ಕಳು ಯಾವುದೇ ಕಾರಣಕ್ಕೂ ಹೆಚ್ಚಾಗಿ ಮೊಬೈಲ್ ಉಪಯೋಗಿಸ ಬೇಡಿ ಎಂದು ಎಚ್ಚರಿಸಿದರು.
ಪಿಎಸೈ ಘೋರ್ಪಡೆ ಮಾತನಾಡಿ,ಮಕ್ಕಳ ಮನಸ್ಸು ಸೂಕ್ಷವಾಗಿದ್ದು ಸಣ್ಣ ಅಘಾತಗಳು ಸಹ ಅವರ ಮನಸ್ಸಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ ಎಂದರು. ಪೋಷಕರು ಮಕ್ಕಳಿಗೆ ದ್ವಿಚಕ್ರವಾಹನ ಚಾಲನೆ ಮಾಡಲು ಕೊಡಬೇಡಿ ಹಾಗೂ ಮಕ್ಕಳು ಸಹ ೧೮ ವರ್ಷ ತುಂಬಿದ ಬಳಿಕ ಚಾಲನ ಪರವಾನಿಗೆ ಪಡೆದು ದ್ವಿಚಕ್ರವಾಹನ ಚಲಾಯಿಸುವಂತೆ ತಿಳಿಸಿದರು.
ಅಪರಾಧ ತಡೆ ಬಗ್ಗೆ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ನಡೆಸಿ ವಿಜೇತರಾದವರಿಗೆ ಭಗವದ್ಗೀತೆ ಪುಸ್ತಕವನ್ನು ವಿತರಿಸಲಾಯಿತು. ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್, ಪ್ರಾಚಾರ್ಯ ರವಿ ,ತಾ.ಪಂಸದಸ್ಯ ವಸಂತಯ್ಯ ಸೇರಿದಂತೆ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ