ನಗರ ಪ್ರದೇಶದ ಶಾಲೆಗಳಿಗೆ ಹೋಲಿಸಿದರೆ ಹಳ್ಳಿಯ ಶಾಲೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಭಿನ್ನವಾಗಿದ್ದು ಹಳ್ಳಿಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಎಲ್.ಹೆಚ್.ಮಂಜುನಾಥ್ ತಿಳಿಸಿದರು.
ಹುಳಿಯಾರು ಸಮೀಪದ ಲಕ್ಷ್ಮಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಎಸ್.ಡಿ.ಎಂ.ಸಿ.ಅಧ್ಯಕ್ಷ ಮಂಜುನಾಥ್ ಉದ್ಟಾಟಿಸಿದರು. |
ಹುಳಿಯಾರು ಸಮೀಪದ ಲಕ್ಷ್ಮಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೨೦೧೪-೧೫ನೇ ಸಾಲಿನ ಶಾಲಾವಾರ್ಷಿಕೋತ್ಸವ ಸಮಾರಂಭ ಉದ್ಟಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಶಾಲೆಗಳಲ್ಲೂ ಸಹ ಉತ್ತಮ ಪ್ರತಿಭೆ ಹೊಂದಿದೆ ಮಕ್ಕಳಿದ್ದಾರೆ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಮೂಲಕ ಅವರಲ್ಲಿನ ಪ್ರತಿಭೆಯನ್ನು ಹೊರತರುವ ಕಾರ್ಯವಾಗಬೇಕಿದೆ ಎಂದರು. ಪಟ್ಟಣದಲ್ಲಿ ಸಿಗುವಂತಹ ಅನೇಕ ಸೌಲಭ್ಯಗಳು ದೊರೆಯದಿದ್ದರೂ ಸಹ ತಮ್ಮಲ್ಲೇ ಸಿಗುವ ಪರಿಕರಗಳನ್ನು ಬಳಸಿ ಸಿದ್ದತೆ ಮಾಡಿಕೊಂಡು ಹಾಡು.ನೃತ್ಯ,ನಾಟಕಗಳನ್ನು ಶ್ರದ್ಧೆಯಿಂದ ಮಕ್ಕಳು ಕಲಿತು ಅಭಿನಯಿಸುತ್ತಿರುವುದು ಶ್ಲಾಘನೀಯ ಎಂದರು.
ಈ ವೇಳೆ ಎಸ್.ಡಿ.ಎಂ.ಸಿ ಸದಸ್ಯರಾದ ತನುಜಾಕ್ಷಿ, ನಟರಾಜ್, ಸಲ್ಮಬಾನು,ಲಕ್ಷಣ್,ರಂಗನಾಥ ಶೆಟ್ರು, ರವೀಶ್, ಗ್ರಾ.ಪಂ.ಅಧ್ಯಕ್ಷೆ ಗುಲ್ಜರ್ ಖಾನ್ ,ಸದಸ್ಯ ಶಂಕರ್, ಊರಿನ ಗೌಡರಾದ ಹನುಮರಾಜ್, ಶಾಲೆಯ ಮುಖ್ಯಶಿಕ್ಷಕ ರಮೇಶ್ ಸೆರಿದಂತೆ ಶಾಲಾ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ