ಇಲ್ಲಿನ ಗ್ರಾಮದೇವತೆ ಶ್ರೀ ಹುಳಿಯಾರಮ್ಮದೇವಿಯ ಎರಡನೇ ವರ್ಷದ ಜಾತ್ರಾಮಹೋತ್ಸವ ತಾ.೩೧ರ ಶನಿವಾರದಿಂದ ತಾ.೭ರ ಶನಿವಾರದವರೆಗೆ ಒಂದುವಾರದ ಕಾಲ ನಡೆಯಲಿದೆ.
ತಾ.೩೧ರ ಶನಿವಾರ ಕೋಡಿಪಾಳ್ಯ,ಲಿಂಗಪ್ಪನಪಾಳ್ಯದ ಭಕ್ತಾಧಿಗಳಿಂದ ಮಡಲಕ್ಕಿಸೇವೆ,ತಾ.೧ರ ಭಾನುವಾರ ಕಾಮಶೆಟ್ಟಿಪಾಳ್ಯ, ಸೋಮಜ್ಜನಪಾಳ್ಯದ ಭಕ್ತರಿಂದ ಮಡಲಕ್ಕಿ ಸೇವೆ,ತಾ.೨ರ ಸೋಮವಾರ ಅಮ್ಮನವರ ಮಧುವಣಗಿತ್ತಿ ಕಾರ್ಯ,ಧ್ವಜಾರೋಹಣ ಮತ್ತು ಅಂಕುರಾರ್ಪಣೆಕಾರ್ಯ ನಡೆಯಲಿದೆ. ತಾ.೩ರ ಮಂಗಳವಾರ ಆರತಿಬಾನ ಹಾಗೂ ಎಡೆಸೇವೆ,ತಾ.೪ರ ಬುಧವಾರ ರಾತ್ರಿ ಗ್ರಾಮದೇವತೆಗಳಾದ ದುರ್ಗಮ್ಮ, ಕೆಂಚಮ್ಮ,ದೊಡ್ಡಬಿದರೆಕರಿಯಮ್ಮ ದೇವರುಗಳ ಆಗಮನ ಹಾಗೂ ಕೂಡುಭೇಟಿ ಕಾರ್ಯ ನಡೆಯಲಿದೆ.ತಾ.೫ರ ಗುರುವಾರ ಬೆಳಿಗ್ಗೆ ಅಮ್ಮನವರಪಟ್ಟದ ಕಳಸ ಮಹೋತ್ಸವ ಹಾಗೂ ಸಂಜೆ ಅಮ್ಮನವರ ವೈಭವಯುತ ಉಯ್ಯಾಲೋತ್ಸವ ನಡೆಯಲಿದೆ ಹಾಗೂ ತಾ.೬ರ ಶುಕ್ರವಾರ ರಾತ್ರಿ ಅಮ್ಮನವರನ್ನು ಪುಷ್ಪವಾಹನದಲ್ಲಿ ಕುಳ್ಳಿರಿಸಿ ರಾಜಬೀದಿ ಉತ್ಸವ ಹಾಗೂ ವಿವಿಧ ಭಜನಾ ಮಂಡಳಿಯವರಿಂದ ಭಜನಾಕಾರ್ಯ,ತಾ.೭ರ ಶನಿವಾರ ಕಂಕಣ ವಿಸರ್ಜನೆ,ಓಕಳಿ ಸೇವೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ