ಕನ್ನಡ ಸಾಹಿತ್ಯ ಮಹಾನ್ ಸಾಹಿತಿಗಳಲ್ಲಿ ತಮ್ಮದೇ ಆದ ಅದ್ವಿತೀಯ ಛಾಪು ಮೂಡಿಸಿದವರು ಕುವೆಂಪು ಅವರಾಗಿದ್ದು, ಅವರು ಅಂದು ರಚಿಸಿದ ಅನೇಕ ಕೃತಿ, ಕವನ,ನಾಟಕಗಳು ಇಂದಿನ ಯುವಪೀಳಿಗೆಗೆ ಆದರ್ಶವಾಗುವಲ್ಲಿ ಪ್ರಮುಖಪಾತ್ರವಹಿಸುತ್ತದೆ ಎಂದು ತುಮಕೂರಿನ ಕವಿ ಹಾಗೂ ಚಿಂತಕರಾದ ಕೆ.ಪಿ.ನಟರಾಜ್ ಅಭಿಮತವ್ಯಕ್ತಪಡಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ "ಕುವೆಂಪು ಓದಿನ ಕಮ್ಮಟ" ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳಿಗೆ "ಕುವೆಂಪು ಓದು" ಹೊತ್ತಿಗೆಯನ್ನು ವಿತರಿಸಲಾಯಿತು. |
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ "ಕುವೆಂಪು ಓದಿನ ಕಮ್ಮಟ" ಕಾರ್ಯಕ್ರಮದಲ್ಲಿ ಕವಿಗಳಾದ ಕೆ.ಪಿ.ನಟರಾಜ್ ಮಾತನಾಡಿದರು. |
ಪದವಿ ವಿದ್ಯಾರ್ಥಿಗಳಿಗಾಗಿ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಅವರ ಸಹಯೋಗದಲ್ಲಿ ಶುಕ್ರವಾರ ನಡೆದ "ಕುವೆಂಪು ಓದಿನ ಕಮ್ಮಟ" ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುವೆಂಪು ಅವರು ಯಾವುದೇ ಒಬ್ಬ ವ್ಯಕ್ತಿಯ,ಜಾತಿಯ,ಸಮಾಜದ,ಧರ್ಮದ ಪರವಾಗಿ ಸಾಹಿತ್ಯ ರಚಿಸಿದವರಲ್ಲ, ಬದಲಾಗಿ ಸಮಾಜದ ಎಲ್ಲಾ ಸ್ಥರಗಳನ್ನು ಒಗ್ಗೂಡಿಸಿ ಎಲ್ಲರೂ ಒಂದೇ ಎಂಬ ವಿಶಾಲ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯ ರಚಿಸಿದ್ದಾರೆ ಎಂದರು. ಇವರ ಸಾಹಿತ್ಯವನ್ನು ಓದುವುದರ ಜೊತೆಗೆ ಅರ್ಥೈಸಿಕೊಂಡಾಗ ಅಂದಿನ ಸಮಾಜದ ವ್ಯವಸ್ಥೆಯೂ ಪ್ರಸ್ತುತದ ಸಮಾಜದ ವ್ಯವಸ್ಥೆಯ ಬಗ್ಗೆ ತಿಳಿಯುತ್ತದೆ ಎಂದರು. ಕುವೆಂಪು ಅವರ ಆತ್ಮಚರಿತ್ರೆ ನೆನಪಿನ ದೋಣಿಯಲಿ ಪುಸ್ತಕವನ್ನು ಓದುವುದರಿಂದ ಅವರು ತಮ್ಮ ಜೀವನವನ್ನು ಯಾವರೀತಿ ಕಟ್ಟಿಕೊಂಡರು ಎಂಬುದರ ಬಗ್ಗೆ ತಿಳಿಯುತ್ತದೆ ಹಾಗೂ ಆ ರೀತಿ ಇದ್ದರ ಎಂಬ ಅಶ್ವರ್ಯವೂ ಸಹ ಮೂಡುತ್ತದೆ ಎಂದು ತಿಳಿಸಿದರು.
ಪ್ರಾಂಶುಪಾಲ ಬಿಳಿಗೆರೆ ಕೃಷ್ಣಮೂರ್ತಿ ಅಶಯ ನುಡಿಗಳನ್ನಾಡುತ್ತಾ, ಪ್ರಸ್ತುತದಲ್ಲಿ ಹೆಚ್ಚು ಜನ ಓದಿನತ್ತ ಗಮನ ಕೊಡದ ಹಿನ್ನಲೆಯಲ್ಲಿ ಓದುವ ಹವ್ಯಾಸ ಕ್ಷೀಣಿಸುತ್ತಿದ್ದು, ಅನೇಕ ಮಹಾನ್ ವ್ಯಕ್ತಿಗಳ ನಿಲುವುಗಳು ನಮಗೆ ತಿಳಿಯದಂತಾಗಿವೆ ಎಂದು ವಿಷಾಧಿಸಿದರು. ಓದು ಎನ್ನುವುದು ನಿರಂತರವಾಗಿದ್ದು, ಸದಾ ಓದುವುದರಿಂದ ನಮ್ಮ ಜ್ಞಾನಭಂಡಾರ ವೃದ್ಧಿಯಾಗುತ್ತದೆ ಎಂದರು. ಕನ್ನಡ ಸಾಹಿತ್ಯದಲ್ಲಿನ ಕವಿಗಳ,ನಾಟಕರಾರ, ವಿಮರ್ಷಕರ ಸಂಪೂರ್ಣ ಪರಿಚಯ ಮಾಡುವ ನಿಟ್ಟಿನಲ್ಲಿ ಈ ಕಾರ್ಯ ನಡೆಯುತ್ತಿದ್ದು ಅದರ ಮೊದಲ ಹೆಜ್ಜೆ ಕುವೆಂಪು ಅವರ ಓದಿನ ಕಮ್ಮಟ ಎಂದರು.
ಕನ್ನಡ ಉಪನ್ಯಾಸಕ ಶಂಕರಲಿಂಗಯ್ಯ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದು, ಉಪನ್ಯಾಸಕರಾದ ಶ್ರೀನಿವಾಸಪ್ಪ,ಇಬ್ರಾಹಿಂ,ಶಿವಯ್ಯ,ಚಂದ್ರಮೌಳಿ,ಗ್ರಂಥಪಾಲಕ ಲೋಕೇಶ್ ನಾಯಕ್ ಉಪಸ್ಥಿತರಿದ್ದು, ತನಿಜಾ ಪ್ರಾರ್ಥಿಸಿ, ಕುಮಾರಸ್ವಾಮಿ ಸ್ವಾಗತಿಸಿ,ಬಸವರಾಜು ನಿರೂಪಿಸಿ,ವಂದಿಸಿದರು. ಇದೇ ವೇಳೆ ಕಮ್ಮಟದಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳಿಗೆ ಕುವೆಂಪು ಓದು ಪುಸ್ತಕವನ್ನು ವಿತರಿಸಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ