ದೇವಾಂಗ ಮಂಡಳಿ, ಬನದ ಹುಣ್ಣಿಮೆ ದೇವಾಂಗ ಯುವಕ ಸಂಘ, ಬನಶಂಕರಿ ದೇವಸ್ಥಾನ ಸಮಿತಿವತಿಯಿಂದ ೪ ನೇ ವರ್ಷದ ಬನದ ಹುಣ್ಣಿಮೆ ಕಾರ್ಯಕ್ರಮವು ಬನಶಂಕರಿ ಅಮ್ಮನವರ ದೇವಾಲಯದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಅಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ನಡೆಯಿತು.
![]() |
ಹುಳಿಯಾರಿನ ಬನಶಂಕರಿ ದೇವಾಲಯದಲ್ಲಿ ಬನದಹುಣ್ಣಿಮೆ ಅಂಗವಾಗಿ ದೇವಾಂಗ ಮಂಡಳಿವತಿಯಿಂದ ಹೋಮಕಾರ್ಯ ನಡೆಸಲಾಯಿತು. |
ಪೌರಾಣಿಕೆ ಹಿನ್ನೆಲೆ: ಪುಷ್ಯಮಾಸದ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರಿ ಹುಣ್ಣಿಮೆ ಎನ್ನುವರು. ಶಕ್ತಿ ದೇವಿಯಾದ ಬನಶಂಕರಿದೇವಿಯನ್ನು ಬನಸಿರಿದೇವಿ ಎನ್ನಲಾಗುವುದಿದ್ದು ಮಳೆ ಬೆಳೆಗಲ್ಲದೆ ನಾಡು ದುರ್ಭಿಕ್ಷೆಯಲಿದ್ದ ಸಂದರ್ಭದಲ್ಲಿ ಎಲ್ಲಾ ದೇವತೆಗಳ ಪ್ರಾರ್ಥನೆ ಫಲವಾಗಿ ಬನಶಂಕರಿ ದೇವಿ ತನ್ನ ಶರೀರದಿಂದ ಉತ್ಪತ್ತಿಯಾದ ಶಾಖದಿಂದ ಮೂರು ಲೋಕಗಳನ್ನು ರಕ್ಷಿಸಿದಳು. ಇದರಿಂದ ಭೂಮಿಯು ಜಲದಿಂದ ಸಮೃದ್ಧಿಗೊಂಡು ಸಕಲ ಜೀವರಾಶಿಗಳು ಸಂತುಷ್ಟವಾದವು ಎಂಬ ಪ್ರತೀತಿ ದೇವಿಯ ಬಗ್ಗೆ ಇದೆ.ಪೂರ್ಣಾನಂದ ಪ್ರದಾಯಕಳಾದ ಬನಶಂಕರಿ ದೇವಿಯು ನಾಡಿಗೆ ಸುಭೀಕ್ಷೆ ಹಾಗೂ ಜೀವರಾಶಿಗಳಿಗೆ ಸಮೃದ್ಧಿಯನ್ನು ಪಾಲಿಸಿದ ಪ್ರತೀಕವಾಗಿ ಬನದ ಹುಣ್ಣಿಮೆ ಆಚರಿಸಲಾಗುತ್ತಿದೆ.
![]() |
ಹುಳಿಯಾರಿನ ಬನಶಂಕರಿ ದೇವಾಲಯದಲ್ಲಿ ಬನದಹುಣ್ಣಿಮೆ ಅಂಗವಾಗಿ ಕನ್ಯೆಯೊಬ್ಬಳನ್ನು ಮುತೈದೆಯರು ನಡೆಮುಡಿಯಲ್ಲಿ ದೇವಾಲಯಕ್ಕೆ ಕರೆದುಕೊಂಡು ಬರುತ್ತಿರುವುದು. |
ಅಂತೆಯೇ ಬನಶಂಕರಿ ದೇವಾಲಯದಲ್ಲಿ ಭಾನುವಾರ ಸಂಜೆ ಅರ್ಚಕರಾದ ಶ್ರೀಧರ್ ಗುಪ್ತಾ,ಸತೀಶ್ ಹಾಗೂ ಗಣೇಶ್ ಪೂಜಾರಿ ಅವರ ನೇತೃತ್ವದಲ್ಲಿ ಗಣಪತಿ ಹೋಮ, ನವಗ್ರಹ,ಮೃತ್ಯುಂಜಯ ಹೋಮ ನಡೆಸಿದ್ದು, ಸೋಮವಾರ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಪಂಚದ್ರವ್ಯಗಳಿಂದ ಅಮ್ಮನವರಿಗೆ ಅಭಿಷೇಕ ಹಾಗೂ ಅಲಂಕಾರವನ್ನು ಮಾಡಲಾಗಿತ್ತು. ಮುತ್ತೈದೆಯರಿಗೆ ಹಾಗೂ ಪುಟ್ಟ ಹೆಣ್ಣು ಮಗುವಿಗೆ ಬಾಗಿನ ಕೊಟ್ಟು, ಅಮ್ಮನವರಿಗೆ ಆರತಿ ಸೇವೆ, ಮಡಿಲಕ್ಕಿ ಸೇವೆ ಹಾಗೂ ಉಯ್ಯಾಲೋತ್ಸವವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಬನದಹುಣ್ಣಿಮೆ ಸಂಘದ ಅಧ್ಯಕ್ಷ ನವೀನ್ ಕುಮಾರ್, ಶಂಕರ್, ದೇವಾಂಗ ಮಂಡಳಿಯ ಅನಂತಕುಮಾರ್,ದಾಸಪ್ಪ, ಲೋಕೇಶ್, ಕೇಶವ ಮೂರ್ತಿ,ರಂಗನಾಥ್, ಕಲಾವಿದ ಗೌಡಿರಂಗನಾಥ್ ಸೇರಿದಂತೆ ದೇವಾಂಗ ಸಮುದಾಯದವರು ಹಾಗೂ ಭಕ್ತಾದಿಗಳು ಆಗಮಿಸಿದ್ದು ಅನ್ನಸಂತರ್ಪಣೆ ನಡೆಯಿತು.
ಬಸ್ ಏಜೆಂಟ್ ಲೋಕೇಶಣ್ಣನವರ ಮನೆಯಲ್ಲಿ ಬನಶಂಕರಿ ಅಮ್ಮನವರ ಅಷ್ಟಾವಧಾನ ಸೇವೆ,ಪಂಚಾಮೃತ ಸೇವೆ ನಡೆದು ಅನ್ನಸಂತರ್ಪಣೆ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ