ಹುಳಿಯಾರು ಪಟ್ಟಣದ ಬ್ರಾಹ್ಮಣ ಬೀದಿಯ ಹು.ಕೃ.ವೆಂಕಟರಾಯರ ಮನೆಯಲ್ಲಿ ಹೋಬಳಿ ಕನ್ನಡ ಸಾಹಿತ್ಯಪರಿಷತ್ ವತಿಯಿಂದ ಅಯೋಜಿಸಿದ್ದ ಮನೆಮನೆಗಳಲ್ಲಿ ಕನ್ನಡಕವಿಕಾವ್ಯಗೋಷ್ಠಿ ಕಾರ್ಯಕ್ರಮದಲ್ಲಿ ಬಡಕೆಗುಡ್ಲು ಸರ್ಕಾರಿ ಶಾಲೆಯ ಶಿಕ್ಷಕ ಹೆಚ್.ಪಿ.ನಟರಾಜ್ ಜಾನಪದ ಸಾಹಿತ್ಯ ಕುರಿತ ಉಪನ್ಯಾಸ ನೀಡಿದರು.
ಹುಳಿಯಾರಿನ ಹು.ಕೃ.ವೆಂಕಟರಾಯರ ಮನೆಯಲ್ಲಿ ಹೋಬಳಿ ಕಸಾಪ ವತಿಯಿಂದ ನಡೆದ ಕನ್ನಡಕವಿಕಾವ್ಯಗೋಷ್ಠಿಯಲ್ಲಿ ನಿವೃತ್ತ ಶಿಕ್ಷಕ ಹು.ಲ.ವೆಂಕಟೇಶ್ ಮಾತನಾಡಿದರು. |
ಅವರು ತಮ್ಮ ಉಪನ್ಯಾಸದಲ್ಲಿ ಹಳಗನ್ನಡ ಸಾಹಿತ್ಯ ಕೇವಲ ಅಕ್ಷರಜ್ಞಾನ ಉಳ್ಳವರಿಗೆ ಸೀಮಿತವಾಗಿ, ಪಂಪ,ರನ್ನ,ಜನ್ನ,ಕುಮಾರವ್ಯಾಸರು ರಚಿಸಿದ ಸಾಹಿತ್ಯವನ್ನು ಸಾಮಾನ್ಯರು ತಿಳಿಯುವುದು ಕಷ್ಠವಾಗಿತ್ತು. ಅಂತಹ ಕ್ಲಿಷ್ಟ ಸನ್ನಿವೇಶದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ವಚನ ಸಾಹಿತ್ಯ ಹಾಗೂ ಜಾನಪದಸಾಹಿತ್ಯ ಹುಟ್ಟಿಕೊಂಡಿತು ಎಂದು ತಿಳಿಸಿದರು. ಜಾನಪದ ಸಾಹಿತ್ಯದಲ್ಲಿ ಶಿಶುವಿನ ಬಗ್ಗೆ , ಅತ್ತೆ-ಸೊಸೆ ಬಗ್ಗೆ,ಸಹೋದರ ಸಂಬಂಧಗಳ ಬಗ್ಗೆ,ಗೋವು-ವ್ಯಾಘ್ರನ ಕುರಿತಂತೆ ಸಾವಿರಾರು ಗಾದೆ,ಕವಿತೆ,ಹಾಡುಗಳು ರಚನೆಯಾಗಿರುವುದಾಗಿ ತಿಳಿಸಿದರು. ಕೆಲ ಜಾನಪದ ಹಾಡುಗಳನ್ನು ಹಾಡಿದರು.
ಅಧ್ಯಕ್ಷತೆವಹಿಸಿದ್ದ ನಿವೃತ್ತ ಶಿಕ್ಷಕ ಹು.ಲ.ವೆಂಕಟೇಶ್ ಮಾತನಾಡಿ, ಕನ್ನಡ ಸಾಹಿತ್ಯದ ಪ್ರಮುಖ ಸಾಹಿತ್ಯ ಪ್ರಕಾರಗಳಲ್ಲಿ ಜಾನಪದ ಸಾಹಿತ್ಯಕ್ಕೆ ತನ್ನದೇ ಆದ ಮಹತ್ವವಿದೆ ಎಂದರು. ಸಮಾಜದ ಅನೇಕ ವಿಚಾರಗಳನ್ನು ಕುರಿತು ಜಾನಪದದಲ್ಲಿ ಉಲ್ಲೇಖಗಳಿದ್ದು ಅವು ಇಂದಿನ ಸಮಾಜಕ್ಕೆ ಅನ್ವಯವಾಗುತ್ತವೆ ಎಂದರು. ಹೋಬಳಿ ಕಸಾಪದಿಂದ ನಿರಂತರವಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದ್ದು ಇದು ನಿರಂತರವಾಗಿರಲಿ ಹಾರೈಸಿದರು.
ಕಸಾಪದ ತ.ಶಿ.ಬಸವಮೂರ್ತಿ ಜಾನಪದದ ಹಾಡುಗಳನ್ನು ಹಾಡಿದರು. ಕಸಾಪದ ಯಲ್ಲಪ್ಪ, ಶಿಕ್ಷಕ ಯಶವಂತ್, ಹರ್ಷಿತ ಪ್ರಾರ್ಥಿಸಿ, ಶಿಕ್ಷಕ ದಯಾನಂದ್ ಸ್ವಾಗತಿಸಿ,ನಿರೂಪಿಸಿದರೆ, ಶಿಕ್ಷಕಿ ಸುಧಾ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ