ಸಂಕ್ರಾಂತಿ ಹಬ್ಬದ ಆಚರಣೆಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳಲು ಪಟ್ಟಣ ಸೇರಿದಂತೆ ಅಕ್ಕಪಕ್ಕದ ಹಳ್ಳಿಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಬುಧವಾರದಂದು ಪಟ್ಟಣದ ಬಸ್ ನಿಲ್ದಾಣ,ರಾಜ್ ಕುಮಾರ್ ರಸ್ತೆ ಹಾಗೂ ರಾಮ್ ಗೋಪಾಲ್ ಸರ್ಕಲ್ ನಲ್ಲಿ ಜನಜಂಗುಳಿ ಕಂಡುಬಂತು.
ಹುಳಿಯಾರಿನ ಬಸ್ ನಿಲ್ದಾಣದಲ್ಲಿ ಸಂಕ್ರಾತಿ ಹಬ್ಬದ ಅಂಗವಾಗಿ ಕಬ್ಬು ಕೊಂಡುಕೊಳ್ಳುತ್ತಿರುವ ಗ್ರಾಹಕರು.
|
ಈ ಬಾರಿ ಸಕಾಲದಲ್ಲಿ ಮಳೆಯಾಗಿ ಫಸಲು ಉತ್ತವಾಗಿದ್ದು ಇಳುವರಿಯೂ ಸಹ ಚೆನ್ನಾಗಿ ಬಂದಿರುವುದು ಸಂಕ್ರಾತಿ ಹಬ್ಬವನ್ನು ಕಳೆಗಟ್ಟುವಂತೆ ಮಾಡಿದೆ. ಸುಗ್ಗಿಯ ಹಬ್ಬವಾಗಿರುವ ಸಂಕ್ರಾತಿ ಆಚರಣೆಗೆ ಸಡಗರದ ಸಿದ್ಧತೆ ಸಾಗಿದ್ದು, ಕಬ್ಬು, ಎಳ್ಳು, ಬಾಳೆಹಣ್ಣು , ಹೂವಿನ ಖರೀದಿ ಜೋರಾಗಿತ್ತು.
ಬಸ್ ನಿಲ್ದಾಣದಲ್ಲಿ ಕಳದೆರಡು ದಿನಗಳಿಂದ ಹಬ್ಬದ ಸಲುವಾಗಿ ಲೋಡ್ ಗಟ್ಟಲೇ ಕಬ್ಬು ಬಂದಿದ್ದು ಜಲ್ಲೆಗೆ ೨೦ ರೂ ನಂತೆ ಭರದಿಂದ ಮಾರಾಟ ಸಾಗಿತ್ತು. ಹಬ್ಬದಲ್ಲಿ ಅವರೆಕಾಯಿ ಹಾಗೂ ಗೆಣಸಿನ ಬಳಕೆ ಹೆಚ್ಚಿರುವುದರಿಂದ ಸೊಗಡವರೆಕಾಯಿ ರಾಶಿರಾಶಿ ತಂದು ಮಾರಾಟ ಮಾಡುತ್ತಿದ್ದುದು ಕಂಡುಬಂತು.ಕೆಜಿಗೆ ೧೫-೨೦ರೂ ನಲ್ಲಿದ್ದ ಅವರೆಕಾಯಿ ೨೫ರೂನಂತೆ ಮಾರಾಟವಾಗುತ್ತಿತ್ತು. ದಿನಸಿ ಅಂಗಡಿಗಳಲ್ಲೂ ಹಬ್ಬದ ವಿಶೇಷವಾಗಿರುವ ಎಳ್ಳು-ಬೆಲ್ಲ ತಯಾರಿಸಲು ಬೇಕಾದ ಎಳ್ಳು,ಕಡ್ಲೆಬೀಜ,ಸಕ್ಕರೆಅಚ್ಚಿಗೆ ಹೆಚ್ಚಿನ ಬೇಡಿಕೆಯಿತ್ತು. ಬೆಲ್ಲ ಕೆಜಿಗೆ ೩೪,ಅಚ್ಚುಬೆಲ್ಲ ಕೆಜಿಗೆ೪೦, ಕಡ್ಲೆಬೀಜ ಕೆಜಿಗೆ ೧೦೦ರೂ , ಬಿಳಿ ಎಳ್ಳು ಕೆಜಿಗೆ೧೮೦ ರಿಂದ೧೯೦ ಇದ್ದು ಸಂಪೂರ್ಣವಾಗಿ ಸಿದ್ದ ಮಾಡಿದ್ದ ಎಳ್ಳು-ಸಕ್ಕರೆಅಚ್ಚು ಪ್ರತಿ ಕೆಜಿಗೆ ೧೨೦ರೂ ಇತ್ತು.
ಒಟ್ಟಾರೆ ಈಭಾಗದಲ್ಲಿ ಸುಗ್ಗಿ ತುಂಬಾ ಚೆನ್ನಾಗಿ ಆಗಿದ್ದರಿಂದ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುವಲ್ಲಿ ಸಂತಸ ಕಂಡುಬಂತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ