ಹುಳಿಯಾರು ಪಟ್ಟಣದ ಶ್ರೀ ಶನೇಶ್ವರಸ್ವಾಮಿ ದೇವಾಲಯದ ಗೋಪುರ ನಿರ್ಮಾಣ ಸಂಘ ಸಂಸ್ಥೆಗಳು ಹಾಗೂ ದಾನಿಗಳ ನೆರವಿನಿಂದ ಭರದಿಂದ ಸಾಗಿದ್ದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆಯಡಿಯಲ್ಲಿ ಇಪ್ಪತ್ತೈದು ಸಾವಿರರೂಪಾಯಿಯ ಚೆಕನ್ನು ದೇಣಿಗೆಯಾಗಿ ದೇವಾಲಯ ಸಮಿತಿಯವರಿಗೆ ಸೋಮವಾರ ವಿತರಿಸಲಾಯಿತು.
ಹುಳಿಯಾರಿನ ಶ್ರೀ ಶನೇಶ್ವರಸ್ವಾಮಿ ದೇವಾಲಯದ ಗೋಪುರ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ವತಿಯಿಂದ ಇಪ್ಪತ್ತೈದು ಸಾವಿರರೂನ ಚೆಕನ್ನು ಸಂಘದ ಮೇಲ್ವಿಚಾರಕ ಕಮಲಾಕರ್ ದೇವಾಲಯ ಸಮಿತಿಯವರಿಗೆ ವಿತರಿಸಿದರು. |
ಚೆಕ್ ವಿತರಿಸಿದ ಧರ್ಮಸ್ಥಳ ಯೋಜನೆಯ ಹುಳಿಯಾರು ವಲಯದ ಮೇಲ್ವಿಚಾರಕ ಕಮಲಾಕರ್ ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರು ದೇವಾಲಯಗಳ ಅಭಿವೃದ್ದಿಯ ದೃಷ್ಠಿಯಿಂದ ಈ ಹಣ ನೀಡುತ್ತಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಈ ವೇಳೆ ಶನೇಶ್ವರಸ್ವಾಮಿ ದೇವಾಲಯ ಸಮಿತಿಯ ಅಧ್ಯಕ್ಷ ಮಲ್ಲೇಶಣ್ಣ, ಹು.ಕೃ.ವಿಶ್ವನಾಥ್, ಬಡಗಿರಾಮಣ್ಣ, ಕಾತುರಣ್ಣ, ಚಂದ್ರಣ್ಣ, ಅರ್ಚಕ ಗಣೇಶ್ ಹಾಗೂ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ