ಮಂಡ್ಯದ ಏಳು ಯುವಕರು ತಂಡ ಮಂತ್ರಾಯದ ಶ್ರೀಗುರು ರಾಘವೇಂದ್ರಸ್ವಾಮಿಯ ದರ್ಶನಕ್ಕಾಗಿ ಪಾದಯಾತ್ರೆ ಸಂಕಲ್ಪ ಮಾಡಿ ತಮ್ಮ ಯಾತ್ರೆ ಪ್ರಾರಂಭಿಸಿದ್ದು ಮಾರ್ಗ ಮಧ್ಯೆ ಬುಧವಾರದಂದು ಹುಳಿಯಾರಿಗೆ ಆಗಮಿಸಿದ್ದರು.
ಮಂಡ್ಯದಿಂದ ಮಂತ್ರಾಲಯಕ್ಕೆ ಕಾಲ್ನಡಿಗೆಯಲ್ಲಿ ಯಾತ್ರೆ ಹೊರಟ ಏಳು ಮಂದಿ ಯಾತ್ರಿಗಳು ಹುಳಿಯಾರಿನ ಮೂಲಕ ಸಾಗಿದರು. |
ಮಂಡ್ಯದ ಮನುಪ್ರಕಾಶ್ , ಶಂಕರ್, ಜಗದೀಶ್, ಶ್ರೀನಿವಾಸ್,ಸೋಮು,ಕುಮಾರ್ ಹಾಗೂ ರಮೇಶ್ ಎಂಬುವರು ಈ ಪಾದಯಾತ್ರೆಯಲ್ಲಿದ್ದು ಕಳೆದ ಮೂರು ವರ್ಷದಿಂದ ಮಂತ್ರಾಲಯಕ್ಕೆ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದಾರೆ. ಇವರು ನಿತ್ಯ ೫೦ ರಿಂದ ೬೦ ಕಿಮೀ ಕ್ರಮಿಸಿ ಮಾರ್ಗ ಮಧ್ಯೆ ಸಿಗುವ ಮಠ, ದೇವಾಲಯಗಳಲ್ಲಿ ತಂಗಿ ನಂತರ ಬೆಳಿಗ್ಗೆ ತಮ್ಮ ಯಾತ್ರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಕಳೆದ ಸೋಮವಾರ ಮಂಡ್ಯದಿಂದ ಪಾದಯಾತ್ರೆ ಪ್ರಾರಂಭಿಸಿರುವ ಇವರುಗಳು ಮೂರನೇ ದಿನವಾದ ಬುಧವಾರ ಪಟ್ಟಣಕ್ಕೆ ಆಗಮಿಸಿದ್ದು ಇನ್ನೂ ಮೂರ್ನಾಲ್ಕು ದಿನದಲ್ಲಿ ಮಂತ್ರಾಲಯ ತಲುಪುವುದಾಗಿ ತಿಳಿಸಿದರು.
ಕೇವಲ ಹವ್ಯಾಸವಾಗಿ ಈ ಯಾತ್ರೆ ಪ್ರಾರಂಭಿಸಿದ ನಾವು ಅಂದಿನಿಂದ ಇದುವರೆಗೂ ಪಾದಯಾತ್ರೆ ಮೂಲಕವೇ ಮಂತ್ರಾಲಯದ ರಾಘವೇಂದ್ರಸ್ವಾಮಿಯನ್ನು ದರ್ಶನ ಪಡೆಯುತ್ತಿದ್ದು ಸ್ವಯಂ ಪ್ರೇರಣೆಯಿಂದ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಯಾತ್ರಿಕರಲ್ಲಿ ಒಬ್ಬರಾದ ಮನುಪ್ರಕಾಶ್ ತಿಳಿಸಿದರು.ಪಟ್ಟಣದ ಸ್ಟುಡಿಯೋ ಸುದರ್ಶನ್ ಅವರ ನಿವಾಸದಲ್ಲಿ ಉಪಹಾರ ಸೇವಿಸಿದ ಬಳಿಕ ಹಿರಿಯೂರು ಮಾರ್ಗದಲ್ಲಿ ಯಾತ್ರೆ ಮುಂದುವರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ