ಹುಳಿಯಾರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ನಡೆದ ಕೊಬ್ಬರಿ ಹರಾಜಿನಲ್ಲಿ ಪ್ರತಿಕ್ವಿಂಟಾಲ್ ಗೆ ೧೪,೧೦೦ರೂಗೆ ಹರಾಜಾಗಿದೆ.
ಕಳೆದ ಕೆಲ ವಾರಗಳ ಹಿಂದೆ ೧೧ ಸಾವಿರಕ್ಕೆ ಇಳಿದಿದ್ದ ಕೊಬ್ಬರಿ ಬೆಲೆ ಮತ್ತೆ ಚೇತರಿಕೆ ಕಂಡು ಇದೀಗ ೧೪ ಸಾವಿರದ ಗಡಿದಾಟಿದೆ. ಆದರೂ ಸಹ ಮಾರುಕಟ್ಟೆಗೆ ಬರುವತ್ತಿರುವ ಕೊಬ್ಬರಿ ಅವಕ ಮಾತ್ರ ಕಡಿಮೆ ಇದೆ. ೧೪ಸಾವಿರದ ಅಸುಪಾಸಿನಲ್ಲಿ ಬೆಲೆ ಸ್ಥಿರವಾಗಿದ್ದು ಮುಂದಿನ ವಾರದ ಹರಾಜುಗಳಲ್ಲಿ ಏರಿತ ಉಂಟಾಗುವ ಸಾಧ್ಯತೆಗಳಿವೆ.
ಕಳೆದ ಮೂರುತಿಂಗಳ ಹಿಂದೆ ೧೯ಸಾವಿರದ ಗಡಿದಾಟಿದ್ದ ಕೊಬ್ಬರಿ ಅದೇಕೋ ತನ್ನ ಧಾರಣೆಯಲ್ಲಿ ತೀವ್ರ ಇಳಿತಕಂಡು ೧೧ ಸಾವಿರಕ್ಕೆ ಇಳಿದು ತೆಂಗು ಬೆಳೆಗಾರರಲ್ಲಿ ಆತಂಕ ಉಂಟು ಮಾಡಿತ್ತು. ಇದೀಗ ಸ್ವಲ್ಪ ಏರಿಕೆ ಕಂಡರೂ ಸಹ ಈ ಹಿಂದೆ ಇದ್ದ ಬೆಲೆಗೆ ಯಾವಾಗ ತಲುಪುತ್ತದೆ ಎಂಬ ನಿರೀಕ್ಷೆಯಲ್ಲಿ ತೆಂಗುಬೆಳೆಗಾರರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ