ಸವಿತಾ ಸಮಾಜದ ಹಲವರು ಸಮಾಜದ ಇತರೆ ವರ್ಗದ ಜನಗಳ ಮಾತುಗಳಿಂದಾಗಿ ನಮ್ಮ ಪೂರ್ವಿಕರು ನಡೆಸಿಕೊಂಡು ಬಂದ ಕ್ಷೌರಿಕ ವೃತ್ತಿಯನ್ನು ಗೌರವಿಸದೆ ಆ ವೃತ್ತಿ ಮಾಡುವಲ್ಲಿ ಹಿಂದೇಟಾಕುತ್ತಿದ್ದಾರೆ ಎಂದು ಚಿ.ನಾ.ಹಳ್ಳಿ ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಸುಭ್ರಮಣ್ಯ ವಿಷಾದಿಸಿದರು.
ಹುಳಿಯಾರಿನ ಸವಿತಾ ಸಮಾಜದವತಿಯಿಂದ ನಡೆದ ತ್ಯಾಗರಾಜರ ಆರಾಧನಾ ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷ ಸುಭ್ರಮಣ್ಯ ಮಾತನಾಡಿದರು. |
ಹುಳಿಯಾರಿನ ಸವಿತಾ ಸಮಾಜ ಸೇವಾ ಟ್ರಸ್ಟ್ ದವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ಹಡಪದ ಅಪ್ಪಣ್ಣ ಹಾಗೂ ಶ್ರೀತ್ಯಾಗರಾಜರ ಆರಾಧನೆ ಮತ್ತು ಸವಿತಾ ಸಮಾಜದ ಮೂರನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಮಾಜದ ಇತರ ಎಲ್ಲಾ ವರ್ಗಗಗಳಿಗಿಂತ ಸವಿತಾ ಸಮಾಜದವರು ಮಾಡುವ ಕಾರ್ಯ ಮಹತ್ವದಾಗಿದ್ದು, ಸಮಾಜ ಬೆಳೆದಂತೆ ನಾವು ಸಹ ಬದಲಾಗಬೇಕಾಗಿದೆ ಎಂದರು. ನಗರ ಪ್ರದೇಶಗಳಲ್ಲಿ ನಮ್ಮ ವೃತ್ತಿಗೆ ಒಂದು ಸ್ಥಾನವಿದೆ ಆದರೆ ಹಳ್ಳಿಗಳಲ್ಲಿ ಇಂದಿಗೂ ನಮ್ಮ ಕ್ಷೌರಿಕ ವೃತ್ತಿಯನ್ನು ಕಾಣುವ ಪರಿಯೇ ಬೇರೆ ಎಂದು ವಿಷಾಧಿಸಿದರು. ಸಮಾಜದ ಇತರ ವರ್ಗಗಳಿಗೆ ಹೋಲಿಸಿದರೆ ಸವಿತಾ ಸಮಾಜದವರು ಆರ್ಥಿಕವಾಗಿ,ಸಾಮಾಜಿಕವಾಗಿ ಹಿಂದುಳಿದಿದ್ದು ಸರ್ಕಾರ ನಮ್ಮ ನೆರವಿಗೆ ಬರಬೇಕಿದೆ ಎಂದರು. ಸವಿತಾ ಸಮಾಜದವರಿಗೆ ಸಂಗೀತವೆನ್ನುವುದು ರಕ್ತಗತವಾಗಿದ್ದು ಇಂದು ನಮ್ಮಲ್ಲಿ ಹಲವರು ಸಂಗೀತದಲ್ಲಿ ಸಾಧನೆ ಮಾಡಿದವರಿದ್ದಾರೆ ಎಂದು ತಿಳಿಸಿದರು.
ಹುಳಿಯಾರು ಪಟ್ಟಣ ಹಾಗೂ ಸುತ್ತಮುತ್ತಲ್ಲಿ ವಾಸವಿರುವ ನಮ್ಮ ಸಮುದಾಯದವರೆಲ್ಲರೂ ಒಗ್ಗಟ್ಟಾಗಿ ನಮಗೆ ದೊರೆಯ ಬೇಕಾದ ಸವಲತ್ತುಗಳನ್ನು ಪಡೆಯುವಲ್ಲಿ ಮುಂದಾಗಬೇಕು ಹಾಗೂ ಈ ಬಗ್ಗೆ ಸಂಘದ ಪದಾಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ಮಾಡುವಂತೆ ತಿಳಿಸಿದರು.
ಈ ವೇಳೆ ದಾನಿಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ವೆಂಕಟಾಛಲಪತಿ ಶೆಟ್ರು,ತುಮಕೂರು ಸವಿತಾ ಸಮಾಜದ ಮಂಜೇಶ್, ರಂಗನಾಥ್,ಪಾರ್ಥಸಾರಥಿ,ಮೇಲಾಕ್ಷಪ್ಪ, ಹುಳಿಯಾರು ಸವಿತಾ ಸಮಾಜದ ಅಧ್ಯಕ್ಷ ಚಂದ್ರಯ್ಯ, ಗೌರವಾಧ್ಯಕ್ಷ ಕೃಷ್ಣಪ್ಪ, ಸಣ್ಣರಾಜಪ್ಪ,ಗೋಪಾಲಕೃಷ್ಣ,ಲಕ್ಷ್ಮಣ್,ಲಾವಣ್ಯಕೃಷ್ಣ, ಈಶ್ವರಯ್ಯ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ