ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಹಂತಗಳು ಪ್ರಮುಖ ಘಟ್ಟಗಳಾಗಿದ್ದು ಯಾರು ಈ ಹಂತದಲ್ಲಿ ಉತ್ತಮ ಅಂಕಗಳಿಸಿ ತೇರ್ಗಡೆಯಾಗುತ್ತಾರೋ ಅವರು ಮುಂದಿನ ಹಂತದಲ್ಲಿ ಉತ್ತಮ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಕೆಲಸ ಗಿಟ್ಟಿಸಲು ನೆರವಾಗುತ್ತದೆಂದು ಪಿಎಸೈ ಘೋರ್ಪಡೆ ತಿಳಿಸಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದವೃತ್ತಿಪರ ಶಿಕ್ಷಣ ಕುರಿತು ಅಧಿಕಾರಿಗಳಿಂದ ಮಾಹಿತಿ ಅರಿವು ಕಾರ್ಯಕ್ರಮದಲ್ಲಿ ಪಿಎಸೈ ಘೋರ್ಪಡೆ ಮಾತನಾಡಿದರು.
|
ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವೃತ್ತಿಪರ ಶಿಕ್ಷಣ ಕುರಿತು ಅಧಿಕಾರಿಗಳಿಂದ ಮಾಹಿತಿ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು ಆ ಸಮಯದಲ್ಲಿ ವಿದ್ಯಾರ್ಥಿಗಳು ಯಾವುದೇ ಅಹಿತಕರ ವಿಚಾರಗಳ ಬಗ್ಗೆ ಗಮನಕೊಡಬೇಡಿ ಹಾಗೂ ಕಾನೂನು ಉಲ್ಲಂಘನಾ ಕಾರ್ಯಗಳನ್ನು ಮಾಡಬೇಡಿ ಎಂದರು. ಮಕ್ಕಳು ತಮಗೆ ಅವಶ್ಯಕತೆ ಇಲ್ಲದಿದ್ದರೂ ಸಹ ಮೊಬೈಲ್ ಪೋನ್ ಗಳನ್ನು ಬಳಸುತ್ತಿದ್ದು ತಮ್ಮ ವಿದ್ಯಾಭ್ಯಾಸವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಇಂತಹ ಕಾರ್ಯವನ್ನು ಮಾಡಬೇಡಿ ಎಂದು ತಿಳಿ ಹೇಳಿದರು. ಚೆನ್ನಾಗಿ ಓದಿ ಸಮಾಜದಲ್ಲಿ ಉನ್ನತ ಹುದ್ದೆಯನ್ನು ಪಡೆಯುತ್ತೇವೆ ಎಂಬ ಛಲ ಹೊಂದಿ ನಡೆದರೆ ಕಂಡಿತ ಯಶಸ್ಸು ಸಿಗುತ್ತದೆ ಎಂದರು.
ಕೆಲ ವಿದ್ಯಾರ್ಥಿಗಳು ೧೦ ನೇತರಗತಿ ತೇರ್ಗಡೆಯಾದ ಬಳಿಕ ವಿಜ್ಞಾನ ವಿಭಾಗ ಸಿಗಲಿಲ್ಲವೆಂದು ನಿರಾಶೆ ವ್ಯಕ್ತಪಡಿಸುವ ಬದಲು ಕಲಾ ವಿಭಾಗವನ್ನೇ ಆಯ್ಕೆ ಮಾಡಿಕೊಂಡು ಚೆನ್ನಾಗಿ ಓದಿದರೆ ಸಿವಿಲ್ ಸರ್ವಿಸ್ ಕೆಲಸಗಳಾದ ಜಿಲ್ಲಾಧಿಕಾರಿ,ತಹಸೀಲ್ದಾರ್, ಇನ್ಪೆಕ್ಟರ್ ವೃತ್ತಿಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಪ್ರಸ್ತುತದಲ್ಲಿ ಗಮನಿಸಿದರೆ ಸಿವಿಲ್ ಸರ್ವಿಸ್ ಕೆಲಸಗಳು ಕಲಾ ವಿಭಾಗದಲ್ಲಿ ಓದಿದವರಿಗೆ ಸಿಕ್ಕಿರುವುದಾಗಿ ತಿಳಿಸಿದರು.
ಶಾಲೆಯ ಎಸ್ಡಿಎಂಸಿ ಉಪಾಧ್ಯಕ್ಷ ಆರ್.ಸಿ.ಮಹೇಶ್ ಅಧ್ಯಕ್ಷತೆವಹಿಸಿದ್ದು, ಉಪಪ್ರಾಂಶುಪಾಲರಾದ ಇಂದಿರಾ, ಮುಖಂಡ ಜಲಾಲ್ ಸಾಬ್, ದೈಹಿಕ ಶಿಕ್ಷಕ ಮನ್ಸೂರ್ ಅಹಮದ್, ಶಿಕ್ಷಕರಾದ ಲೋಕೇಶ್,ವಿದ್ಯಾಕುಂಚನೂರು,ವಿಜಯಲಕ್ಷ್ಮಿ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ