ಹುಳಿಯಾರು ಸಮೀಪದ ನಿರುವಗಲ್ ಹತ್ತಿರದ ಶ್ರೀಕ್ಷೇತ್ರ ಹುಲ್ಕಲ್ ಬೆಟ್ಟದ ಶ್ರೀ ದುರ್ಗಮ್ಮ ದೇವಿಯ ನೂತನ ದೇವಾಲಯ ಪ್ರಾರಂಭೋತ್ಸವ ತಾ.೨೯ರ ಗುರುವಾರ ಮತ್ತು ತಾ.೩೦ರ ಶುಕ್ರವಾರ ನಡೆಯಲಿದೆ.
ದೇವಾಲಯದ ಪ್ರಾರಂಭೋತ್ಸವದ ಅಂಗವಾಗಿ ದುರ್ಗಮ್ಮದೇವಿಗೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಸುವುದಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದೆ. ಆಗಮಿಸುವ ಭಕ್ತರಿಗಾಗಿ ಅನ್ನಸಂತರ್ಪಣೆಯಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುವಂತೆ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ