ಹುಳಿಯಾರು ಹೋಬಳಿ ಕೋರಗೆರೆಯಲ್ಲಿ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್.ಘಟಕದವತಿಯಿಂದ ನಡೆಯುತ್ತಿರುವ ಸ್ವಯಂಸೇವಾ ಶಿಬಿರದಲ್ಲಿ (ತಾ.೨೧) ಬುಧವಾರ ಮಧ್ಯಾಹ್ನ "ಪೋಸ್ಕೋ ಅಕ್ಟ್ " ಕುರಿತ ಕಾನೂನು ಅರಿವು ಕಾರ್ಯಕ್ರಮ ನಡೆಯಲಿದೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘದ ಸಹಯೋಗದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎನ್.ವೀಣಾ ಉದ್ಘಾಟಿಸುವರು. ಕೋರಗೆರೆ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಗುರುವರದಯ್ಯ ಅಧ್ಯಕ್ಷತೆವಹಿಸಲಿದ್ದು, ವಕೀಲ ವೈ.ಜೆ.ಲೋಕೇಶ್ವರ್ ಫೋಸ್ಕೋ ಕಾಯಿದೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಉಪನ್ಯಾಸಕ ಅಶೋಕ್, ಸಿವಿಲ್ ನ್ಯಾಯಾಧೀಶ ಸೋಮನಾಥ್, ಸಹಾಯಕ ಅಭಿಯೋಜಕರಾದ ರವೀಂದ್ರ,ಸಂತೋಷ್, ವಕೀಲ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ,ಕಾರ್ಯದರ್ಶಿ ಹೆಚ್.ಟಿ.ಹನುಮಂತಪ್ಪ ಸೇರಿದಂತೆ ಇತರರು ಆಗಮಿಸಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ