ಹುಳಿಯಾರು ಪಟ್ಟಣದ ಶ್ರೀವಾಸವಿ ವಿದ್ಯಾಸಂಸ್ಥೆಯ ವಾಸವಿ ಆಂಗ್ಲ ಮಾಧ್ಯಮ ಶಾಲೆಯ ೨೦೧೪-೧೫ನೇ ಸಾಲಿನ ಮಕ್ಕಳ ಸಾಂಸ್ಕೃತಿಕ ಹಬ್ಬ ತಾ.೧೨ ಸೋಮವಾರ ಸಂಜೆ ವಿಶೇಷ ರಂಗಸಜ್ಜಿಕೆಯಲ್ಲಿ ನಡೆಯಲಿದೆ.
ಸಂಸ್ಥೆಯ ಅಧ್ಯಕ್ಷ ಟಿ.ಆರ್.ಲಕ್ಷ್ಮಿಕಾಂತ್ ಅಧ್ಯಕ್ಷತೆವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಗೌರವಾಧ್ಯಕ್ಷ ಟಿ.ಆರ್.ಶ್ರೀನಿವಾಸ ಶ್ರೇಷ್ಠಿ, ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎಂ.ಎಸ್.ನಟರಾಜ್ ಗುಪ್ತ, ಕಾರ್ಯದರ್ಶಿ ರಾಮನಾಥ್, ಸಹಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್, ವಾಸವಿಶಾಲೆಯ ಮೇಲ್ವಿಚಾರಕ ಬಿ.ವಿ.ಶ್ರೀನಿವಾಸಮೂರ್ತಿ ಆಗಮಿಸಲಿದ್ದು , ಮಕ್ಕಳಿಂದ ಕೋಲಾಟ,ಕಂಸಾಳೆ, ಸಂಗೊಳ್ಳಿರಾಯಣ್ಣನ ರೂಪಕ ಸೇರಿದಂತೆ ಬಗೆಬಗೆಯ ಸಾಂಸ್ಕೃತಿಕಕಾರ್ಯಕ್ರಮಗಳಿದ್ದು ಪೋಷಕರು ಹಾಗೂ ಸಾರ್ವಜನಿಕರು ಆಗಮಿಸುವಂತೆ ಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ