ಹುಳಿಯಾರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರಾಗಿ ಖರೀದಿ ಕೇಂದ್ರ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಕೇಂದ್ರವನ್ನು ಗುರುವಾರದಂದು ತೆರೆಯಲಾಯಿತು.
ಹುಳಿಯಾರಿನ ಎಪಿಎಂಸಿಯಲ್ಲಿ ಗುರುವಾರ ರಾಗಿ ಖರಿದಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು. |
ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ಉಪನಿರ್ದೇಶಕ ಮಂಟೆಸ್ವಾಮಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ ಯಾವುದೇ ಉತ್ಪನ್ನಗಳ ಧಾರಣೆ ಕುಸಿದಾಗ ಬೆಂಬಲ ಯೋಜನೆಯಡಿ ಖರೀದಿ ನಡೆಯುವುದಿದ್ದು, ಸದ್ಯ ರಾಗಿಗೆ ಸಹಾಯಧನವನ್ನು ಸೇರಿ ಪ್ರತಿ ಕ್ವಿಂಟಾಲ್ ಗೆ ೨೦೦೦ ದಂತೆ ಖರೀದಿಸಲಾಗುವುದು ಎಂದರು.
ರಾಗಿ ಮಾರಲು ಅಗತ್ಯ ದಾಖಲೆಗಳಾದ ೨೦೧೪-೧೫ನೇ ಸಾಲಿನ ಪಹಣಿ, ಕೃಷಿ ಇಲಾಖೆಯಿಂದ ಪಡೆದ ರಾಗಿ ಇಳುವರಿ ದೃಢೀಕರಣಪತ್ರ ಅಗತ್ಯವಿದ್ದು ಖರೀದಿ ಕೇಂದ್ರದ ಅಧಿಕಾರಿಗಳಿಗೆ ತೋರಿಸಿ ಟೋಕನ್ ಪಡೆಯಬೇಕು ಹಾಗೂ ರಾಗಿ ಬಿಡುವ ವೇಳೆ ಈ ಎಲ್ಲಾ ದಾಖಲೆಗಳ ಜೊತೆ ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ಪಾಸ್ ಪೋರ್ಟ್ ಪೋಟೋ-೨, ಗ್ರಾಮಲೆಕ್ಕಾಧಿಕರಿಗಳಿಂದ ಧೃಢೀಕರಣ ಪತ್ರ, ಸಹ ನೀಡಬೇಕು ಎಂದರು. ರೈತರು ತರುವ ರಾಗಿಯ ಒಂದು ಚೀಲಕ್ಕೆ ೧೦ರೂ ನೀಡಲಾಗುವುದಿದ್ದು, ಯಾವುದೇ ರೀತಿಯ ಗೊಂದಲಗಳಿಗೆಡೆ ಮಾಡಿಕೊಡದೆ ರಾಗಿಯನ್ನು ಖರೀದಿ ಕೇಂದ್ರದಲ್ಲಿ ಮಾರುವಂತೆ ತಿಳಿಸಿದರು
ಕೃಷಿ ಉಪನಿರ್ದೇಶಕ ಡಾ.ರಾಜಣ್ಣ ಮಾತನಾಡಿ ರೈತರು ಮೊದಲು ತಾವು ಬೆಳೆದ ರಾಗಿಯ ಸ್ಯಾಂಪಲನ್ನು ಖರೀದಿ ಕೇಂದ್ರಕ್ಕೆ ತಂದು ಗುಣಮಟ್ಟ ಪರೀಕ್ಷಿಸಿಕೊಂಡು ದಿನಾಂಕದ ಟೋಕನ್ ಪಡೆದ ನಂತರ ತಮಗೆ ಕೊಟ್ಟಂತಹ ದಿನಾಂಕದಂದು ರಾಗಿತಂದು ಬಿಡುವಂತೆ ತಿಳಿಸಿ, ಯಾವುದೆ ಗೊಂದಲಕ್ಕೆ ಅವಕಾಶ ನೀಡದೆ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು.
ಈ ವೇಳೆ ಎಪಿಎಂಸಿಯ ಅಧ್ಯಕ್ಷ ಸಣ್ಣಯ್ಯ,ಉಪಾಧ್ಯಕ್ಷೆ ದ್ರಾಕ್ಷಾಯಿಣಮ್ಮ, ನಿಗಮದ ಜಿಲ್ಲಾ ನಿರ್ವಾಹಕ ನರಸಿಂಹಯ್ಯ, ಎಪಿಎಂಸಿ ಕಾರ್ಯದರ್ಶಿ ನಾಗರಾಜ , ರೈತಸಂಘದ ಕೆಂಕೆರೆ ಸತೀಶ್, ತಿಮ್ಮನಹಳ್ಳಿ ಲೋಕೇಶ್,ತಮ್ಮಡಿಹಳ್ಳಿ ಮಲ್ಲಿಕಣ್ಣ ಹಾಗೂ ಎಪಿಎಂಸಿಯ ನಿರ್ದೇಶಕರು ಹಾಗೂ ರೈತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ