ಹುಳಿಯಾರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರಾರಂಭವಾಗಿರುವ ರಾಗಿ ಖರೀದಿ ಕೇಂದ್ರದಲ್ಲಿ ರೈತರ ನೋಂದಣಿ ಕಾರ್ಯ ನಡೆಯುತ್ತಿದ್ದು ರಾಗಿ ಮಾರುವವರು ಮೊದಲು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ತಿಳಿಸಿದ್ದಾರೆ.
ಹುಳಿಯಾರು ಎಪಿಎಂಸಿಯಲ್ಲಿ ಪ್ರಾರಂಭವಾಗಿರುವ ಖರೀದಿ ಕೇಂದ್ರದಲ್ಲಿ ಅಧಿಕಾರಿಯೊಬ್ಬರು ರೈತರ ನೊಂದಣಿ ಮಾಡಿಕೊಳ್ಳುತ್ತಿರುವುದು. |
ರೈತರು ಜಮೀನಿನ ಪಹಣಿ ಹಾಗೂ ಬೆಳೆದ ರಾಗಿಯ ಮಾದರಿಯನ್ನು ತಂದು ಪರೀಕ್ಷಕರಿಗೆ ತೋರಿಸಿ ಬಳಿಕ ಯಾವ ದಿನಾಂಕದಂದು ರಾಗಿ ತರಬೇಕು ಎಂಬುದನ್ನು ಗೊತ್ತುಪಡಿಸಿ ಕೊಳ್ಳಬೇಕಾಗಿದೆ. ಅಧಿಕಾರಿಗಳು ನೀಡಿದ ದಿನಾಂಕದಂದು ರಾಗಿ ತರುವಾಗ ಅಗತ್ಯ ದಾಖಲೆಗಳಾದ ಪಹಣಿ, ೨ ಪೋಟೋ, ಗ್ರಾಮಲೆಖ್ಖಿಗರಿಂದ ಬೆಳೆ ದೃಢೀಕರಣಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸನ್ನು ತಪ್ಪದೇ ತರಬೇಕು. ಪ್ರತಿ ೫೦ ಕೆಜಿಯ ಚೀಲಗಳಲ್ಲಿ ರಾಗಿಯನ್ನು ತರಬೇಕಿದ್ದು ಪ್ರತಿ ಚೀಲಕ್ಕೆ ೧೦ರೂ ನಿಡುವುದಾಗಿ ಹಾಗೂ ಮಣ್ಣು,ಕಸಕಡ್ಡಿಯಿಂದ ಮುಕ್ತವಾದ ಉತ್ತಮ ಗುಣಮಟ್ಟದ ರಾಗಿಯನ್ನು ಖರೀದಿ ಕೇಂದ್ರಕ್ಕೆ ತರುವಂತೆ ಇಲಾಖೆಯ ಅಧಿಕಾರಿ ಬಸವರಾಜ್ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ