ಗ್ರಾಮೀಣ ಭಾಗವಾಗಿರುವ ಹುಳಿಯಾರಿನಲ್ಲಿ ರೋಟರಿ ಸಂಸ್ಥೆ ಉತ್ತಮವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದು ತುಮಕೂರು ಜಿಲ್ಲಾಪಾಲಕ ಮಂಜುನಾಥ ಶೆಟ್ಟಿ ತಿಳಿಸಿದರು.
ಹುಳಿಯಾರಿನ ರೋಟರಿ ಬಾಲಭವನದಲ್ಲಿ ರೋಟರಿ ಸಂಸ್ಥೆಯ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹುಳಿಯಾರಿನಲ್ಲಿ ನಡೆದ ರೋಟರಿ ಸಂಸ್ಥೆಯ ಕಾರ್ಯಕ್ರಮವನ್ನು ಜಿಲ್ಲಾಪಾಲಕ ಮಂಜುನಾಥ ಶೆಟ್ಟಿ ಉದ್ಘಾಟಿಸಿದರು. |
ರೋಟರಿ ಸಂಸ್ಥೆ ಈಗಾಗಲೇ ದೇಶದಾದ್ಯಂತ ಅನೇಕ ಜನಪರ ಕಾರ್ಯಗಳನ್ನು ಮಾಡಿಕೊಂಡು ಸಾಗುತ್ತಿದ್ದು , ರೋಟರಿ ಸಂಸ್ಥೆಯ ಪರಿಶ್ರಮದಿಂದಾಗಿ ಇಂದು ಭಾರತದೇಶ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ ಆದರೂ ಸಹ ರೋಟರಿ ತನ್ನ ಕಾರ್ಯವನ್ನು ಬಿಡದೆ ಇದುವರೆಗೂ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ ಎಂದರು. ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರನ್ನು ಅಕ್ಷರಸ್ಥರನ್ನಾಗಿ ಮಾಡುವ ನಿಟ್ಟಿನಲ್ಲಿ ಸಾಕ್ಷರತೆಯ ಅಂದೋಲನವನ್ನು ನಡೆಸುವಲ್ಲಿ ರೋಟರಿ ಹೆಜ್ಜೆಯಿಡುತ್ತಿದೆ ಎಂದರು.
ಹುಳಿಯಾರು ರೋಟರಿ ಅಧ್ಯಕ್ಷ ಈ.ರವೀಶ್ ಅಧ್ಯಕ್ಷತೆವಹಿಸಿದ್ದು, ಜಿಲ್ಲಾ ಕಾರ್ಯದರ್ಶಿ ಸುರೇಶ್.ಎ. ಹುಳಿಯಾರು ರೋಟರಿ ಕಾರ್ಯದರ್ಶಿ ಗಂಗಾಧರ್,ಮಂಜುನಾಥ ಗುಪ್ತಾ, ಲಕ್ಷ್ಮಿಕಾಂತ್, ಶ್ರೀನಿವಾಸ್,ಸುದರ್ಶನ್, ದಬ್ಬಗುಂಟೆ ಶಾಲೆಯ ಇಂಗ್ಲಿಷ್ ಶಿಕ್ಷಕ ದೇವರಾಜ್ ಇತರರಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ