ಹುಳಿಯಾರು : ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಇರುವ ಅಂಗನವಾಡಿ ಕೇಂದ್ರಗಳಲ್ಲಿ (ತಾ.೧೮) ಭಾನುವಾರ ಪಲ್ಸ್ ಪೋಲೀಯೋ ಲಸಿಕಾ ಕಾರ್ಯಕ್ರಮ ನಡೆಯಲಿದೆ.
ರೋಟರಿ ಸಂಸ್ಥೆ ಸಹಯೋಗದಲ್ಲಿ ದೇಶದಾದ್ಯಂತ ನಡೆಯಲಿರುವ ಲಸಿಕಾ ಕಾರ್ಯಕ್ರಮದಲ್ಲಿ ೫ ವರ್ಷ ಒಳಪಟ್ಟ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಶನಿವಾರದಂದು ಶಾಲಾಮಕ್ಕಳಿಂದ ಜಾಥಾ ನಡೆಯಿತು. ಪಟ್ಟಣದ ಸರ್ಕಾರಿ ಅಸ್ಪತ್ರೆ, ಇಂದಿರಾನಗರ, ಶಂಕರಪುರ ಬಡಾವಣೆಯ ಅಂಗನವಾಡಿ ಕೇಂದ್ರಗಳಲ್ಲಿ ಭಾನುವಾರ ಬೆಳಿಗ್ಗೆ ಯಿಂದ ಸಂಜೆ ಯವರೆಗೆ ಲಸಿಕೆ ಹಾಕಲಿದ್ದು ಪೋಷಕರು ತಪ್ಪದೇ ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವಂತೆ ಹಾಗೂ ಬಸ್ ನಿಲ್ದಾಣದಲ್ಲಿ ಪೋಲಿಯೋ ಬೂತ್ ನಿರ್ಮಿಸಿದ್ದು ಅಕ್ಕಪಕ್ಕದ ಹಳ್ಳಿಯವರೂ ಈ ಬೂತ್ ನಲ್ಲಿ ಲಸಿಕೆ ಹಾಕಿಸುವಂತೆ ಹುಳಿಯಾರು ಹೋಬಳಿ ರೋಟರಿ ಸಂಸ್ಥೆಯ ಗಂಗಾಧರ ರಾವ್ ತಿಳಿಸಿದ್ದಾರೆ.
ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವಂತೆ ಹೋಬಳಿಯ ರೋಟರಿ ಸಂಸ್ಥೆಯವರು ಎಲ್ಲೆಡೆ ಪ್ರಚಾರ ಮಾಡಿದ್ದು , ಶಾಲಾಮಕ್ಕಳು ಬ್ಯಾನರ್ ಹಿಡಿದ್ದು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಲಸಿಕೆ ಹಾಕಿಸುವಂತೆ ಜಾಥಾ ನಡೆಸಿದರು.
ಹುಳಿಯಾರು ಹೋಬಳಿ ಕೆಂಕೆರೆ ಶ್ರೀಚನ್ನಬಸವೇಶ್ವರ ಶಾಲೆಯ ಮಕ್ಕಳು ಪೋಲಿಯೋ ಲಸಿಕೆ ಹಾಕಿಸುವಂತೆ ಸ್ಲೋಗನ್ ಕೂಗುತ್ತಾ ಜಾಥಾ ನಡೆಸಿದರು. |
ರೋಟರಿ ಸಂಸ್ಥೆ ಸಹಯೋಗದಲ್ಲಿ ದೇಶದಾದ್ಯಂತ ನಡೆಯಲಿರುವ ಲಸಿಕಾ ಕಾರ್ಯಕ್ರಮದಲ್ಲಿ ೫ ವರ್ಷ ಒಳಪಟ್ಟ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಶನಿವಾರದಂದು ಶಾಲಾಮಕ್ಕಳಿಂದ ಜಾಥಾ ನಡೆಯಿತು. ಪಟ್ಟಣದ ಸರ್ಕಾರಿ ಅಸ್ಪತ್ರೆ, ಇಂದಿರಾನಗರ, ಶಂಕರಪುರ ಬಡಾವಣೆಯ ಅಂಗನವಾಡಿ ಕೇಂದ್ರಗಳಲ್ಲಿ ಭಾನುವಾರ ಬೆಳಿಗ್ಗೆ ಯಿಂದ ಸಂಜೆ ಯವರೆಗೆ ಲಸಿಕೆ ಹಾಕಲಿದ್ದು ಪೋಷಕರು ತಪ್ಪದೇ ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವಂತೆ ಹಾಗೂ ಬಸ್ ನಿಲ್ದಾಣದಲ್ಲಿ ಪೋಲಿಯೋ ಬೂತ್ ನಿರ್ಮಿಸಿದ್ದು ಅಕ್ಕಪಕ್ಕದ ಹಳ್ಳಿಯವರೂ ಈ ಬೂತ್ ನಲ್ಲಿ ಲಸಿಕೆ ಹಾಕಿಸುವಂತೆ ಹುಳಿಯಾರು ಹೋಬಳಿ ರೋಟರಿ ಸಂಸ್ಥೆಯ ಗಂಗಾಧರ ರಾವ್ ತಿಳಿಸಿದ್ದಾರೆ.
ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವಂತೆ ಹೋಬಳಿಯ ರೋಟರಿ ಸಂಸ್ಥೆಯವರು ಎಲ್ಲೆಡೆ ಪ್ರಚಾರ ಮಾಡಿದ್ದು , ಶಾಲಾಮಕ್ಕಳು ಬ್ಯಾನರ್ ಹಿಡಿದ್ದು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಲಸಿಕೆ ಹಾಕಿಸುವಂತೆ ಜಾಥಾ ನಡೆಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ