ಗಣಿಗಾರಿಕೆ ಪುನರಾರಂಭಿಸುವ ನಿಟ್ಟಿನಲ್ಲಿ ಪುನರ್ ವಸತಿ ಮತ್ತು ಪುನಶ್ಚೇತನ(ಆರ್ ಅಂಡ್ ಆರ್) ಪ್ರಕ್ರಿಯೆಯ ಅನುಷ್ಠಾನ ಪರಿಶೀಲನೆಯನ್ನು ಸುಪ್ರಿಂಕೋರ್ಟ್ ನಿರ್ದೇಶಿತ ಮಾನಿಟರಿಂಗ್ ಕಮಿಟಿಯು ಗುರುವಾರದಂದು ಹುಳಿಯಾರಿನ ಸುಶೀಲಮ್ಮ ಮೈನ್ಸ್ ಗೆ ಭೇಟಿ ನೀಡಿ ಪರಿಶೀಲಿಸಿದರು.
ಹುಳಿಯಾರು ಸಮೀಪದ ವಿ.ಸುಶೀಲಮ್ಮ ಗಣಿಗಾರಿಕ ಪ್ರದೇಶಲ್ಲಿನ ಆರ್ ಅಂಡ್ ಆರ್ ನ ಕಾಮಗಾರಿಗಳನ್ನು ಪರಿಶೀಲಿಸಿದ ಮಾನಿಟರಿಂಗ್ ಕಮಿಟಿಯವರು. |
ಸಿ.ಇ.ಸಿ ವರದಿ ಹಾಗೂ ಶಿಫಾರಸ್ಸನ್ನು ಆಧರಿಸಿ ಸುಶೀಲಮ್ಮ ಗಣಿಗಾರಿಕೆಯಲ್ಲಿ ಕೈಗೊಂಡಿರುವ ಆರ್ ಅಂಡ್ ಆರ್ ಕಾಮಗಾರಿಯನ್ನು ಮಾನಿಟರಿಂಗ್ ಕಮಿಟಿಯ ಛೇರ್ಮನ್ ದೀಪಕ್ ಶರ್ಮ ಹಾಗೂ ಚಿತ್ರದುರ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಪರಿಶೀಲಿಸಿದರು. ಗಣಿಗಾರಿಕ ಪ್ರದೇಶದಲ್ಲಿ ಆರಣ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದದಂತೆ ಪರಿಸರ ಪುನರುಜ್ಜೀವನ ಮತ್ತು ಪುನರುತ್ಥಾನ (ಆರ್ ಅಂಡ್ ಆರ್) ಆದ್ಯತೆ ನೀಡಲು ತಿಳಿಸಿದ ತಂಡ ಅನುಷ್ಠಾನವನ್ನು ಪರಿಪೂರ್ಣವಾಗಿ ವೀಕ್ಷಿಸಿ ಸಿಇಸಿ ಶಿಫಾರಸ್ಸಿನ ಅನ್ವಯ ಕೈಗೊಂಡ ಕಾಮಗಾರಿ ಪೂರ್ಣಗೊಳಿಸಿರುವುದಕ್ಕೆ ಸಮಾಧಾನ ವ್ಯಕ್ತಪಡಿಸಿತು. ಪರಿಸರಕ್ಕೆ ಧಕ್ಕೆಯಾಗದ ರೀತಿ ಕಾಮಗಾರಿಗಳನ್ನು ನಡೆಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾನಿಟರಿಂಗ್ ಕಮಿಟಿಯ ಸವ್ಯಸಾಚಿ ನಾಯಕ್, ಚಿತ್ರದುರ್ಗ ಗಣಿಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಮಹವೀರ್ ಹಾಗೂ ಧರಣೇಶ್, ಕನ್ಸಲ್ಟೆಂಟ್ ರಾಮಸುಬ್ಬಾರೆಡ್ಡಿ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ