ಹುಳಿಯಾರು ಸಮೀಪದ ಬೆಳಗುಲಿ ಗುಡ್ಡದಲ್ಲಿ ಶ್ರೀಹೊನ್ನಮರಡಿ ರಂಗನಾಥಸ್ವಾಮಿಯ ಸುಗ್ಗಿ ಜಾತ್ರಾಮಹೋತ್ಸವ ಗುರುವಾರದಂದು ವೈಭವಯುತವಾಗಿ ನಡೆಯಿತು. ಪ್ರತಿ ವರ್ಷ ಮಕರ ಸಂಕ್ರಾಂತಿಯಂದೆ ನಡೆಯುವ ಈ ಸುಗ್ಗಿಜಾತ್ರಾಮಹೋತ್ಸವಕ್ಕೆ ಅಪಾರ ಸಂಖ್ಯೆಯ ಭಕ್ತಾಧಿಗಳು ದೂರದೂರುಗಳಿಂದ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಧನ್ಯತೆ ಹೊಂದಿದರು.
ಹುಳಿಯಾರು ಸಮೀಪದ ಬೆಳಗುಲಿ ಗುಡ್ಡದ ಶ್ರೀಹೊನ್ನಮರಡಿ ರಂಗನಾಥಸ್ವಾಮಿ ದೇವಾಲಯ. |
ಹೊಸಕೆರೆ ಅಮ್ಮ , ಕೆಂಚರಾಯಸ್ವಮಿ ,ಜಾಲಿಮರದಮ್ಮ ಹಾಗೂ ರಂಗನಾಥಸ್ವಾಮಿ ಉತ್ಸವ ಮೂರ್ತಿ ಆಗಮನದೊಂದಿಗೆ ವಿಶೇಷ ಪೂಜಾ ಕೈಂಕರ್ಯ ಹಾಗೂ ಮುಳ್ಳುಹಲಗೆ ,ಗಂಡುಗತ್ತರಿ ಸೇವೆ ನಡೆಯಿತು. ಕೇವಲ ಮೂರ್ನಾಲ್ಕು ಗಂಟೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ಸಹಸ್ರಾರು ಮಂದಿ ಭಕ್ತರು ಆಗಮಿಸಿದ್ದರು. ರಂಗನಾಥಸ್ವಾಮಿ ಬೆಳಗುಲಿ ಗ್ರಾಮಕ್ಕೆ ತೆರಳುತ್ತಿದ್ದಂತೆ ಜಾತ್ರೆಗೆ ತೆರೆ ಬಿದ್ದಿತು.ಹಂದನಕೆರೆ ಪಿಎಸೈ ಸುನಿಲ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ