ಹುಳಿಯಾರು ಪಟ್ಟಣದ ಶ್ರೀಅಯ್ಯಪ್ಪಸ್ವಾಮಿ ಸೇವಾಸಮಿತಿವತಿಯಿಂದ ಶ್ರೀಅಯ್ಯಪ್ಪಸ್ವಾಮಿ ೨೩ ನೇ ವರ್ಷದ ಉತ್ಸವ ಸೋಮವಾರ ಸಂಜೆ ಮಾಲಾಧಾರಿ ಸ್ವಾಮಿಗಳ ಹಾಗೂ ವಿವಿಧ ಕಲಾತಂಡಗಳೊಂದಿಗೆ ವೈಭವಯುತವಾಗಿ ನಡೆಯಿತು.
ಹುಳಿಯಾರಿನ ಶ್ರೀಅಯ್ಯಪ್ಪಸ್ವಾಮಿಯ ಉತ್ಸವ ವೈಭವಯುತವಾಗಿ ನಡೆಯಿತು. |
ಉತ್ಸವದ ಅಂಗವಾಗಿ ಗ್ರಾಮದೇವತೆಗಳಾದ ಹುಳಿಯಾರಮ್ಮ ಹಾಗೂ ದುರ್ಗಮ್ಮನವರನ್ನು ಅಯ್ಯಪ್ಪನ ಸನ್ನಿಧಿಗೆ ಕರೆದೊಯ್ದು ಪೂಜೆ ಸಲ್ಲಿಸಿದ ಬಳಿಕ ಅಯ್ಯಪ್ಪಸ್ವಾಮಿ ಹಾಗೂ ಗ್ರಾಮದೇವತೆಗಳನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಅಯ್ಯಪ್ಪನ ಶರಣು ಘೋಷದೊಂದಿಗೆ ಉತ್ಸವ ಪ್ರಾರಂಭಗೊಂಡಿತು. ಉತ್ಸವದಲ್ಲಿ ಚಂಡೆವಾದ್ಯ,ಚಿಟ್ಟಿಮೇಳ,ವೀರಗಾಸೆ ನೃತ್ಯ ಹಾಗೂ ಮದ್ದಿನ ಪ್ರದರ್ಶನ ಆಕರ್ಷಕವಾಗಿತ್ತು. ದೇವಾಲಯದಿಂದ ಹೊರಟ ಉತ್ಸವ ಮಾರುತಿ ನಗರ, ರಾಮ್ ಗೋಪಾಲ್ ಸರ್ಕಲ್, ಬಿ.ಎಚ್.ರಸ್ತೆ,ರಾಜ್ ಕುಮಾರ್ ರಸ್ತೆಯಲ್ಲಿ ಸಾಗಿ ವಾಪಸ್ಸ್ ದೇವಾಲಯದಲ್ಲಿ ಪರಿಸಮಾಪ್ತಿಯಾಯಿತು. ಜ್ಯೋತಿ ಹಿಡಿದಿದ್ದ ಪುಟ್ಟ ಮಕ್ಕಳು ಹಾಗೂ ಸಮಿತಿಯ ಸದಸ್ಯರು, ಮಾಲಾಧಾರಿ ಸ್ವಾಮಿಗಳು, ಸಾರ್ವಜನಿಕರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಆಗಮಿಸಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ