ನೆನೆಗುದಿಗೆ ಬಿದಿದ್ದ ತಾಲ್ಲೂಕಿನ ಬಗರ್ ಹುಕುಂ ಸಕ್ರಮೀಕರಣ ಸಮಿತಿಗೆ ಸದಸ್ಯರನ್ನು ನೇಮಕಮಾಡಿ ಅಧಿಸೂಚನೆ ಹೊರಡಿಸಿದ ಹತ್ತೇ ದಿನದಲ್ಲಿ ಮತ್ತೆ ಬದಲಾವಣೆ ಮಾಡಿ ಹೊಸ ಸದಸ್ಯರನ್ನು ನೇಮಕಾತಿ ಮಾಡಿ ಮತ್ತೊಂದು ಅಧಿಸೂಚನೆ ಹೊರಬಿದ್ದಿದ್ದೆ.
ಈ ಮೊದಲು ಡಿಸಂಬರ್ ೩೧ರಂದು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿಯಾಗಿ ತಹಸೀಲ್ದಾರ್ , ಸದಸ್ಯರುಗಳನ್ನಾಗಿ ಹೆಚ್.ಬಿ.ಎಸ್.ನಾರಾಯಣ ಗೌಡ, ಪರಮೇಶ್ವರಯ್ಯ,ಶ್ರೀಮತಿ ಸವಿತ ಅವರುಗಳನ್ನು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಮಹಾಂತೇಗೌಡ ನಾಮ ನಿರ್ದೇಶನಮಾಡಿ ಆದೇಶ ಹೊರಡಿಸಿತ್ತು.
ರಾಜಕೀಯ ಒತ್ತಡವೋ , ಮತ್ತೊಂದೋ ಅಂತು ತಾವೇ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಿದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಮಹಾಂತೇಗೌಡ ಅವರು ಜನವರಿ ೯ ರಂದು ಸದಸ್ಯರುಗಳ ಬದಲಾವಣೆ ಮಾಡಿ ಮತ್ತೊಮ್ಮೆ ನಾಮ ನಿರ್ದೇಶನ ಮಾಡಿ ಅಧಿಸೂಚನೆ ಹೊರಡಿಸಿದ್ದಾರೆ. ಈ ಪ್ರಕಾರ ಶಾಸಕ ಸುರೇಶ್ ಬಾಬು ಅಧ್ಯಕ್ಷರಾಗಿ, ತಹಸೀಲ್ದಾರ್ ಕಾರ್ಯದರ್ಶಿಯಾಗಿ ಹಾಗೂ ಹುಳಿಯಾರು ಹೋಬಳಿ ಹೊಸಳ್ಳಿಪಾಳ್ಯದ ಅಶೋಕ್, ತಮ್ಮಡಿಹಳ್ಳಿ ಗೊಲ್ಲರಹಟ್ಟಿಯ ತಾರಾಮಣಿ, ಹಂದನಕೆರ ಹೋಬಳಿ ಬಂದ್ರೆಹಳ್ಳಿ ತಾಂಡ್ಯದ ಶಶಿಧರನಾಯ್ಕ ಅವರುಗಳನ್ನು ನೇಮಕ ಮಾಡಲಾಗಿದೆ.
ನೂತನ ಸರ್ಕಾರ ಬಂದಾಗಿನಿಂದ ಸ್ಥಳೀಯ ಶಾಸಕರು ಬೇರೆ ಪಕ್ಷಕ್ಕೆ ಸೇರಿದವರಾಗಿದ್ದರಿಂದ ಬಗರ್ ಹುಕುಂ ಸಮಿತಿ ರಚನೆ ಮಾಡಲು ತಡವಾಯಿತೆಂಬ ಮಾತು ಕೇಳಿಬಂದಿದ್ದು, ಸದ್ಯ ಸಮಿತಿ ರಚನೆಯಾಗಿದ್ದು ಬಗರ್ ಹುಕುಂ ಸಾಗುವಳಿ ಮಾಡಿದವರಿಗೆ ತ್ವರಿತವಾಗಿ ಸಾಗುವಳಿಚೀಟಿ ನೀಡಲು ಮುಂದಾಗ ಬೇಕೆಂಬುದು ರೈತರ ಆಗ್ರಹವಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ