ಹುಳಿಯಾರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿ ಬಳ್ಳಾರಿ ಜಿಲ್ಲೆಗೆ ವರ್ಗಾವಣೆಯಾದ ಪಿಎಸೈ ಯಲ್ಲಪ್ಪಘೋರ್ಪಡೆ ಅವರಿಗೆ ಪಟ್ಟಣದ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಯವರು ಹಾಗೂ ಪೊಲೀಸ್ ಸಿಬ್ಬಂದಿಯವರು ಸೇರಿ ಬುಧವಾರ ಸಂಜೆ ಅದ್ದೂರಿ ಬಿಳ್ಕೊಡುಗೆ ಸಮಾರಂಭ ನಡೆಸಿದರು.
ಹುಳಿಯಾರಿನ ಪೊಲೀಸ್ ಠಾಣೆಯಲ್ಲಿ ಕಾರ್ಯನಿಎವಹಿಸಿ ವರ್ಗಾವಣೆಯಾದ ಪಿಎಸೈ ಘೋರ್ಪಡೆ ಅವರಿನ್ನು ಪುರಸ್ಕರಿಸಿ ಬಿಳ್ಕೊಟ್ಟರು. |
ಈ ವೇಳೆ ಮಾತನಾಡಿದ ಪಿಎಸೈ ಘೋರ್ಪಡೆ, ತಾವು ಕರ್ತವ್ಯ ನಿರ್ವಹಿಸಿದ ಇತರ ಊರುಗಳಿಗಿಂತ ಹುಳಿಯಾರು ವಿಭಿನ್ನ ಹಾಗೂ ಸೂಕ್ಷವಾಗಿದ್ದು, ಮರೆಯಲಾರದ ನೆನಪುಗಳನ್ನು ಹುಟ್ಟಿಹಾಕಿದೆ. ಇಲ್ಲಿನ ಮುಖಂಡರು, ಸಂಘಸಂಸ್ಥೆಯವರು, ಸಾರ್ವಜನಿಕರ ಉತ್ತಮ ಸಹಕಾರದಿಂದಾಗಿ ಇಂದು ತಾನು ಜನಸ್ನೇಹಿ ಪೊಲೀಸ್ ಆಗಿರುವುದಾಗಿ ತಿಳಿಸಿದರು. ಸಿಪಿಐ ಹಾಗೂ ಇಲ್ಲಿನ ಸಿಬ್ಬಂದಿಯವರ ಸಹಕಾರವನ್ನು ಶ್ಲಾಘಿಸಿದರು. ಇಲ್ಲಿನವರು ತನಗೆ ನೀಡಿದ ಸಹಕಾರದ ಋಣ ತನ್ನಮೇಲಿದ್ದು ಮುಂದಿನ ದಿನಗಳಲ್ಲಿ ಅವಕಾಶ ಒದಗಿಬಂದರೆ ಈ ಭಾಗಕ್ಕೆ ಮತ್ತೆ ಬಂದು ತೀರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಪಿಐ ಜಯಕುಮಾರ್, ಹಂದನಕೆರೆ ಪಿಎಸೈ ಸುನಿಲ್,ಚಿ.ನಾ.ಹಳ್ಳಿ ಪಿಎಸೈ ಮಹಾಲಕ್ಷ್ಮಿ, ಕೆ.ಬಿ.ಕ್ರಾಸ್ ಪಿಎಸೈ ಬಸವರಾಜು, ಜಿ.ಪಂ.ಸದಸ್ಯೆ ಮಂಜುಳಾ, ತಾ.ಪಂ.ಸದಸ್ಯರಾದ ನವೀನ್,ವಸಂತಯ್ಯ, ಬೀಬೀಫಾತೀಮಾ, ಗ್ರಾ.ಪಂ.ಸದಸ್ಯ ಜಹೀರ್ ಸಾಬ್,ಧನುಷ್ ರಂಗನಾಥ್, ರೈತಸಂಘದ ಕೆಂಕೆರೆ ಸತೀಶ್,ಮಲ್ಲಿಕಣ್ಣ ಹಾಗೂ ಇತರರಿದ್ದರು.
ಹುಳಿಯಾರು ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸಿ ಎ.ಎಸ್.ಐ ಆಗಿ ಬಡ್ತಿ ಪಡೆದು ವರ್ಗಾವಣೆಯಾದ ಗುರುನಾಥ್ ಅವರನ್ನು ಸಹ ಪುರಸ್ಕರಿಸಿ ಬಿಳ್ಕೊಡಲಾಯಿತು. ಜನಾನುರಾಗಿಯಾಗಿದ್ದ ಪಿಎಸೈಅವರನ್ನು ಪಟ್ಟಣದ ಆಟೋಚಾಲಕರು, ರೈತಸಂಘ, ಮುಸ್ಲಿಂ ಸಂಘಟನೆಯವರು, ವಿಪ್ರಸಂಘದವರು ಸೇರಿದಂತೆ ವಿವಿಧ ಸಂಘಟನೆಯವರು ಹಾರತುರಾಯಿ ಹಾಕಿ, ನೆನಪಿನ ಕಾಣಿಕೆ ನೀಡಿ ಸತ್ಕರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ