ದೇಶದ ಬೆನ್ನೆಲುಬು ಎಂದು ಹೇಳುವ ರೈತರ ಸಂಖ್ಯೆ ಪ್ರಸ್ತುತದಲ್ಲಿ ಗಣನೀಯವಾಗಿ ಕ್ಷೀಣಿಸುತ್ತಿದ್ದು ಕೃಷಿ ಕ್ಷೇತ್ರದತ್ತ ಜನರ ಒಲವು ಕಡಿಮೆಯಾಗಿದೆ ಎಂದು ಕೃಷಿ ಅಧಿಕಾರಿ ನೂರುಲ್ಲಾ ತಿಳಿಸಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವೃತ್ತಿಪರ ಶಿಕ್ಷಣ ಕುರಿತು ಅಧಿಕಾರಿಗಳಿಂದ ಮಾಹಿತಿ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವೃತ್ತಿಪರ ಶಿಕ್ಷಣ ಕುರಿತು ಅಧಿಕಾರಿಗಳಿಂದ ಮಾಹಿತಿ ಅರಿವು ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ನೂರುಲ್ಲಾ ಅವರನ್ನು ಸನ್ಮಾನಿಸಲಾಯಿತು. |
ಇಂದಿನ ಜಗತ್ತಿನಲ್ಲಿ ಬಗೆಬಗೆಯ ಆವಿಷ್ಕಾರಗಳಾಗುತ್ತಿದ್ದು ಕೃಷಿ ಕ್ಷೇತ್ರದಲ್ಲೂ ಸಹ ಅನೇಕ ಬದಲಾವಣೆಗಳಾಗಿದ್ದರೂ ಇಂದಿನ ಯುವಪೀಳಿಗೆಯವರು ಕೃಷಿ ಮಾಡುವಲ್ಲಿ ಮುಂದಾಗದೆ ಕೃಷಿ ಮಾಡುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದರು. ಇಂದಿನ ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್ ಆಗುವತ್ತ ಒಲವು ತೋರುತ್ತಾರೆ ಹೊರತು ರೈತನಾಗುವುದಕ್ಕೆ ಮುಂದಾಗುವುದಿಲ್ಲ .
ಕೃಷಿಯನ್ನೇ ನಂಬಿದ್ದ ಅನೇಕ ಹಳ್ಳಿಗಳಲ್ಲಿನ ಜನ ಕೆಲಸಕ್ಕಾಗಿ ನಗರ ಪ್ರದೇಶಗತ್ತ ಗುಳೆ ಹೋಗುತ್ತಿದ್ದು ಕೃಷಿಯನ್ನು ಕೈಬಿಟ್ಟಿದ್ದಾರೆ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಅನ್ನದಾತರ ಸಂಖ್ಯೆ ಬೆರಳೆಣಿಕೆಯಷ್ಟಾಗುತ್ತದೆ ಎಂದರು.
ನಾವು ಬಳಸುವ ಅನೇಕ ಆಹಾರ ಪದಾರ್ಥಗಳನ್ನು ಯಾವರೀತಿ ಬೆಳೆಯುತ್ತಾರೆ ಎಂಬುದು ಇಂದಿನ ಅನೇಕ ವಿದ್ಯಾರ್ಥಿಗಳಿಗೆ ತಿಳಿದಿಲ್ಲ, ಇದನ್ನು ತಿಳಿಸುವ ನಿಟ್ಟಿನಲ್ಲಿ ಪ್ರತಿ ಶಾಲೆಗಳಲ್ಲಿ ಕೈತೋಟಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದರು.
ಈ ವೇಳೆ ಉಪಪ್ರಾಂಶುಪಾಲರಾದ ಇಂದಿರಾ, ಎಸ್ಡಿಎಂಸಿ ಉಪಾಧ್ಯಕ್ಷ ಮಹೇಶ್, ವಿಜ್ಞಾನ ಶಿಕ್ಷಕಿ ವಿದ್ಯಾ ಕುಂಚನೂರು,ದೈಹಿಕ ಶಿಕ್ಷಕ ಮನ್ಸೂರ್ ಅಹಮದ್, ಸಹಾಯಕ ಮಂಜುನಾಥ್ ಹಾಗೂ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ