ಹುಳಿಯಾರು ಹೋಬಳಿ ಕಾಮನಬಿಲ್ಲು ಫೌಂಢೇಶನ್ ನ ವತಿಯಿಂದ ರಾಷ್ಟ್ರೀಯ ಯುವನಾಯಕರ ಜನ್ಮದಿನಾಚರಣೆ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು , ಬ್ರೆಡ್ ವಿತರಿಸಲಾಯಿತು.
ಹುಳಿಯಾರಿನ ಕಾಮನಬಿಲ್ಲು ಫೌಂಢೇಶನ್ ನ ವತಿಯಿಂದ ರಾಷ್ಟ್ರೀಯ ಯುವನಾಯಕರ ಜನ್ಮದಿನಾಚರಣೆ ಅಂಗವಾಗಿ ಶುಕ್ರವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು,ಬ್ರೆಡ್ ವಿತರಿಸಲಾಯಿತು |
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಹಾನ್ ನಾಯಕರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಸಹ ಒಬ್ಬರಾಗಿದ್ದು ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಬ್ರಿಟ್ರಿಷರ ವಿರುದ್ದ ಸಿಡಿದೆದ್ದ ಧೀರ ನಾಯಕರಾಗಿದ್ದ ನೇತಾಜಿಯವರ ಜನ್ಮ ದಿನದ ಅಂಗವಾಗಿ ಈ ಕಾರ್ಯ ಮಾಡುತ್ತಿರುವುದಾಗಿ ಫೌಂಢೇಶನ್ ನ ಅಧ್ಯಕ್ಷ ಚೆನ್ನಕೇಶವ ತಿಳಿಸಿದರು. ಈ ವೇಳೆ ಗೌರವಾಧ್ಯಕ್ಷ ಈಶ್ವರಯ್ಯ,ಕಾರ್ಯದರ್ಶಿ ವಿಜಯ್ ಕುಮಾರ್,ಮಂಜುನಾಥ್,ಸ್ಟುಡಿಯೋ ರವಿ,ಚೇತನ್ ಆಚಾರ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ