ಹುಳಿಯಾರು ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ (ತಾ.೧೦) ಶನಿವಾರ ಮುಂಜಾನೆ ಮಾಲಾಧಾರಿಸ್ವಾಮಿಗಳಿಗೆ ಇರುಮುಡಿಕಟ್ಟುವ ಸೇವೆ ನಡೆಯಲಿದೆ.
ಮಾಲಾಧಾರಿ ಸ್ವಾಮಿಗಳಿಗೆ ಗುರುಸ್ವಾಮಿಗಳಾದ ಗೋಪಾಲರಾವ್ ಸ್ವಾಮಿ,ದಾನಿಸ್ವಾಮಿ, ರಮೇಶ್ ಸ್ವಾಮಿ ಅವರುಗಳು ಇರುಮುಡಿಕಟ್ಟಲಿದ್ದಾರೆ. ಇರುಮುಡಿಕಟ್ಟಿದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಇರುಮುಡಿ ಹೊತ್ತು ಮೆರವಣಿಗೆ ನಡೆಸಿ ಆಂಜನೇಯ ಸ್ವಾಮಿ ದೇವಾಲಯದ ಹತ್ತಿರ ಎಲ್ಲಾ ಮಾಲಾಧಾರಿ ಸ್ವಾಮಿಗಳು ಬಂದು ಸೇರಿ ಅಲ್ಲಿಂದ ಶಬರಿಮಲೆಗೆ ತೆರಳಲಿದ್ದಾರೆ. ತುಪ್ಪದಕಾಯಿ ತುಂಬುವ ಭಕ್ತಾದಿಗಳು ಶನಿವಾರ ೧೦೧ರೂಗಳನ್ನು ಪಾವತಿಸಿ ರಸೀತಿ ಪಡೆಯುವಂತೆ ಸಮಿತಿಯವರು ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ