ಆಟೋ ಅನಿಲ ಸಿಲಿಂಡರ್ ಸ್ಫೋಟಗೊಂಡು ಉಂಟಾದ ಅನಾಹುತದಿಂದ ಅಂಗನವಾಡಿ ಮಕ್ಕಳು ವಿವಿಧ ಆಸ್ಪತ್ರೆಗಳಲ್ಲಿ ಚೇತರಿಸಿಕೊಳ್ಳುತ್ತಿದ್ದು, ಇಅದರ ಬೆನ್ನಲ್ಲೇ ಪಟ್ಟಣದಲ್ಲಿ ಆಟೋಗಳಿಗೆ ಅನಿಲ ಕಿಟ್ ಅಳವಡಿಸಿರುವ ಬಗ್ಗೆ ಸಿಪಿಐ ಜಯಕುಮಾರ್ ನೇತೃವದಲ್ಲಿ ಪೋಲೀಸರು ಶುಕ್ರವಾರ ತಪಾಸಣೆ ನಡೆಸಿದರು.
ಹುಳಿಯಾರು ಪಟ್ಟಣದಲ್ಲಿ ಅನಿಲಕಿಟ್ ಅಳವಡಿಸಿ ಓಡಿಸುತ್ತಿದ್ದ ಆಟೋಗಳನ್ನು ಠಾಣೆಯಲ್ಲಿಗೆ ತರಿಸಿ ಸಿಪಿಐ ಜಿ.ಎಸ್.ಜಯಕುಮಾರ್ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು. |
ಈ ವೇಳೆ ಮಾತನಾಡಿದ ಸಿಪಿಐ ಜಯಕುಮಾರ್, ಪಟ್ಟಣದ ಆಟೋಗೆ ಅನಿಲ ಕಿಟ್ ಅಳವಡಿಸಿ ಓಡಿಸುವ ಆಟೋಗಳನ್ನು ತಪಾಸಣೆಗೊಳಪಡಿಸಲಾಯಿತು. ಅವುಗಳಲ್ಲಿ ೧೬ ಆಟೋಗಳು ಅನಿಲ ಕಿಟ್ ಹೊಂದಿದ್ದು,ಅವುಗಳನ್ನು ಠಾಣೆಗೆ ತಂದಿದ್ದು ಸಾರಿಗೆ ಅಧಿಕಾರಿಗಳಿಂದ ಐಎಂಇ ಪರೀಕ್ಷೆ ಮಾಡಿಸಿದ ನಂತರ ಅನಿಲ ಕಿಟ್ ಪರವಾನಿಗೆ ಹೊಂದಿದ್ದ ಆಟೋಗಳನ್ನು ಬಿಡುಗಡೆ ಮಾಡಲಾಗುವುದು. ಉಳಿದ ಆಟೋ ಚಾಲಕರ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳುವುದಾಗಿ ತಿಳಿಸಿದರು. ಯಾರದರೂ ಪೋಲೀಸ ನವರ ಕಣ್ ತಪ್ಪಿಸಿ ಆಟೋದಲ್ಲಿ ಗ್ಯಾಸ್ ಕಿಟ್ ಬಳಸಿ ಓಡಿಸುತ್ತಿದ್ದರೆ ಠಾಣೆಯಲ್ಲಿಗೆ ತರುವಂತೆ ತಿಳಿಸಿದರಲ್ಲದೆ ಆಟೋಚಾಲಕರೇ ಸ್ವಯಂ ಗ್ಯಾಸ್ ತುಂಬುವ ಬಗ್ಗೆ ತಿಳಿದರೆ ಕಠಿಣ ಕ್ರಮ ಕೈಗೊಳ್ಳುವುದಾಘಿ ಎಚ್ಚರಿಸಿದ್ದಾರೆ.
ಈಗಾಗಲೇ ಸ್ಫೋಟಕ್ಕೆ ಕಾರಣವಾದ ಆಟೋದವನ ಮೇಲೆ ಪ್ರಕರಣ ದಾಖಲು ಮಾಡಿದ್ದು, ಸ್ಫೋಟ ನಡೆದ ಸ್ಥಳದಲ್ಲಿನ ಅವಶೇಷಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ತೆಗೆದುಕೊಂಡು ಹೋಗಲಾಗಿದೆ. ಅಲ್ಲಿಂದ ಬಂದ ಮಾಹಿತಿ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದರು. ಆಟೋಗಳಾ ತಪಾಸಣೆ ವೇಳೆ ಪಿಎಸೈ ಬಿ.ಪ್ರವೀಣ್ ಕುಮಾರ್, ಆಹಾರ ಶಿರಸ್ತೇದಾರ್ ಗೋವಿಂದಪ್ಪ ಉಪಸ್ಥಿತರಿದ್ದರು.
ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ೮ ಮಕ್ಕಳ ಪೈಕಿ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.ಒಟ್ಟು ಬೆಂಗಳೂರಲ್ಲಿ ೫ ಮಕ್ಕಳು,ತುಮಕೂರಲ್ಲಿ ೫ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಿಡಿಪಿಓ ಅನಿಸ್ ಕೈಸರ್ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ