ಹುಳಿಯಾರು ಪಟ್ಟಣದ ಪುರಾಣಪ್ರಸಿದ್ದ ಅನಂತಶಯನ ಶ್ರೀ ಲಕ್ಷ್ಮಿರಂಗನಾಥಸ್ವಾಮಿ ದೇವಾಲಯದಲ್ಲಿ ಮಂಗಳವಾರ ಅಮವಾಸ್ಯೆ ಅಂಗವಾಗಿ ಸ್ವಾಮಿಗೆ ವಿಶೇಷ ಬೆಣ್ಣೆ ಅಲಂಕಾರ ಮಾಡಿದ್ದು ಭಕ್ತಾಧಿಗಳ ಮನಸೂರೆಗೊಂಡಿತು.
|
ಹುಳಿಯಾರಿನ ಅನಂತಶಯನ ಶ್ರೀರಂಗನಾಥಸ್ವಾಮಿಗೆ ಮಂಗಳವಾರ ಅಮವಾಸ್ಯೆ ಅಂಗವಾಗಿ ಮಾಡಿದ್ದ ಬೆಣ್ಣೆ ಅಲಂಕಾರ. |
|
ಹುಳಿಯಾರಿನ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಮಂಗಳವಾರ ಸಂಜೆ ಅಮವಾಸ್ಯೆ ಅಂಗವಾಗಿ ವೃಷಭಾದ್ರಿ ಭಜನಾ ಮಂಡಳಿಯವರು ಭಜನೆ ನಡೆಸಿಕೊಟ್ಟರು. |
ಅಮವಾಸ್ಯೆ ಅಂಗವಾಗಿ ಸ್ವಾಮಿಗೆ ಅಭಿಷೇಕ ,ಅರ್ಚನೆ ನಡೆಸಿದ್ದಲ್ಲದೆ ಟಿ.ಆರ್.ರಂಗನಾಥ ಶೆಟ್ರು , ಜಗನಾಥರಾವ್,ರಮೇಶಣ್ಣ ಅವರುಗಳ ಸೇವಾರ್ಥದಲ್ಲಿ ಸ್ವಾಮಿಯನ್ನು ಬೆಣ್ಣೆಯಿಂದ ಅಲಂಕರಿಸಿ ಪೂಜಾ ಕೈಂಕರ್ಯ ನಡೆಸಲಾಯಿತು. ಸಂಜೆ ವೃಷಭಾದ್ರಿ ಭಜನಾ ಮಂಡಳಿಯವರಿಂದ ಭಜನಾಕಾರ್ಯಕ್ರಮ ನಡೆಯಿತು. ವೈಕುಂಠ ಏಕಾದಶಿ ಸಮಿತಿಯ ಅಧ್ಯಕ್ಷ ಧನುಷ್ ರಂಗನಾಥ್, ವಿಶ್ವನಾಥ್,ವೆಂಕಟೇಶ್,ದೇವಾಲಯ ಅಭಿವೃದ್ದಿ ಸಮಿತಿಯ ರಂಗನಾಥ ಶೆಟ್ರು ,ಅಶೋಕ್,ಗ್ರಾಪಂ ಸದಸ್ಯ ಹೇಮಂತ್,ಬಡಗಿ ರಾಜು ಮುಂತಾದವರು ಉಪಸ್ಥಿತರಿದ್ದರು. ದೇವಾಲಯಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ