ಹುಳಿಯಾರು ಹೋಬಳಿ ದಸೂಡಿ ಗ್ರಾ.ಪಂಯ ಕಾರ್ಯದರ್ಶಿಯ ಕಾರ್ಯವೈಖರಿ ಖಂಡಸಿ ಬೇಡಿಕೆ ಈಡೇರುವವರೆಗೂ ಸ್ಥಳಬಿಟ್ಟುಕದಲುವುದಿಲ್ಲವೆಂದು ಪಟ್ಟುಹಿಡಿದಿರುವ ಕೆಲ ಗ್ರಾ.ಪಂ.ಸದಸ್ಯರು ಹಾಗೂ ಸಾರ್ವಜನಿಕರು ಗ್ರಾ.ಪಂ. ಮುಂದೆ ಕೈಗೊಂಡಿದ್ದ ಆಹೋರಾತ್ರಿ ಧರಣಿ ಮಂಗಳವಾರವೂ ಬಗೆಹರಿಯದೆ ಮುಂದುವರೆದಿದೆ.
ಹುಳಿಯಾರು ಹೋಬಳಿ ದಸೂಡಿ ಗ್ರಾ.ಪಂ ಮುಂದೆ ಮಂಗಳವಾರ ಸಂಜೆ ಅಹೋರಾತ್ರಿಧರಣಿ ನಡೆಯುತ್ತಿರುವುದು. |
ಹಾಲಿ ಇದ್ದ ಕಾರ್ಯದರ್ಶಿಯಿಂದಾಗಿ ಪಂಚಾಯ್ತಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು ಅನೇಕ ಸವಲತ್ತುಗಳು ಅರ್ಹಫಲಾನುಭವಿಗಳಿಗೆ ಸಿಗುತ್ತಿಲ್ಲವೆಂದು ಆರೋಪಿಸಿ ಧರಣಿ ನಡೆಯುತ್ತಿದೆ. ಸೋಮವಾರದಂದು ಸಿಬ್ಬಂದಿಯೊಂದಿಗೆ ಆಗಮಿಸಿದ್ದ ಇಓ ಕೃಷ್ಣಮೂರ್ತಿ ಧರಣಿ ನಿರತರ ಸಮಸ್ಯೆ ಆಲಿಸಿ ಪರಿಹರಿಸಲು ವ್ಯವಸ್ಥೆ ಮಾಡಿದ್ದರೂ ಸಹ ತೃಪ್ತರಾಗದ ಪ್ರತಿಭಟನಾಕಾರರು ಅಹೋರಾತ್ರಿಧರಣಿ ಮುಂದುವರಿಸಿದ್ದಾರೆ. ಮಂಗಳವಾರದಂದು ಹಂಗಾಮಿ ನೌಕರರ ಕಾಯಂಮಾತಿ ಮಾಡಿದ್ದು , ಅರ್ಹಫಲಾನುಭವಿಗಳ ಶೌಚಾಲಯ ಹಾಗೂ ಮನೆ ಗ್ರಾಂಟ್ ಗಳ ಪರಿಶೀಲನೆ ನಡೆದಿದ್ದು ಮುಗಿಯದ ಕಾರಣ ಬಿಲ್ ನೀಡುವವರೆಗೆ ಕದಲುವುದಿಲ್ಲವೆಂದು ನಿಲುವು ತಳೆದಿದ್ದಾರೆ. ಪ್ರಯುಕ್ತ ಮಂಗಳವಾರ ರಾತ್ರಿ ಧರಣಿ ಮುಂದುವರೆದಿದ್ದು ಬುಧವಾರಕ್ಕೆ ಕಾಲಿಡಲಿದೆ.
ಗ್ರಾ.ಪಂ.ಸದಸ್ಯ ಡಿ.ಬಿ.ರವಿಕುಮಾರ್, ಮುಖಂಡರಾದ ಸುಂದರಮೂರ್ತಿ, ಜಯಣ್ಣ,ಕುಮಾರ್, ಗೋವಿಂದಪ್ಪ, ಕಾಂತರಾಜ್,ಆನಂದ್ ಸೇರಿದಂತೆ ಸ್ತ್ರೀಶಕ್ತಿಸಂಘ ,ಸ್ವಸಹಾಯ ಸಂಘದ ಸದಸ್ಯರುಗಳು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ