ಜೀವನದಲ್ಲಿ ಸಮಯ ಅಮೂಲ್ಯಾವಾದುದಾಗಿದ್ದು ಅದನ್ನು ಸದುಪಯೋಗ ಮಾಡಿಕೊಂಡಲ್ಲಿ ಗುರಿ ಮುಟ್ಟಬಹುದು. ಮಕ್ಕಳು ಹೆಚ್ಚು ಸಮಯವನ್ನು ವ್ಯಯ ಮಾಡದೆ ಓದಿನತ್ತ ಕೇಂದ್ರಿಕರಿಸುವಂತೆ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎಂ.ಎಸ್.ಆರ್.ನಟರಾಜ್ ಗುಪ್ತ ಕಿವಿಮಾತು ಹೇಳಿದರು.
ಹುಳಿಯಾರಿನ ವಾಸವಿ ಆಂಗ್ಲಮಾಧ್ಯಮ ಶಾಲೆಯ ಸಾಂಸ್ಕೃತಿಕ ರಸಸಂಜೆ ಕಾರ್ಯಕ್ರಮವನ್ನು ಆರ್ಯವೈಶ್ಯಮಂಡಳಿಯ ಅಧ್ಯಕ್ಷ ಎಂ.ಎಸ್.ನಟರಾಜ್ ಗುಪ್ತ ಉದ್ಘಾಟಿಸಿದರು. |
ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯ ವಾಸವಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಸೋಮವಾರ ಸಂಜೆ ನಡೆದ ೨೦೧೪-೧೫ ನೇ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು,
ಶಾಲೆಯಲ್ಲಿ ಶಿಕ್ಷಕರು ಬೋಧಿಸುವ ವಿಷಯಗಳನ್ನು ಮಕ್ಕಳು ಹೆಚ್ಚು ಅಭ್ಯಾಸಿಸುವ ಮೂಲಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತನ್ನಿ ಎಂದು ತಿಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಸಂಸ್ಥೆಯ ಸಹಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್ ಮಾತನಾಡಿ, ರಾಜ್ಯಾದ್ಯಂತ ವಾಸವಿ ಮಾತೆಯ ಹೆಸರಿನಲ್ಲಿ ಅನೇಕ ವಿದ್ಯಾಸಂಸ್ಥೆಗಳಿದ್ದು ಲಕ್ಷಾಂತರ ಮಂದಿಗೆ ವಿದ್ಯೆ ನೀಡುತ್ತಿವೆ ಎಂದರು. ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಗ್ರಾಮೀಣ ಭಾಗವಾದ ಹುಳಿಯಾರಿನಲ್ಲೂ ಕೂಡ ಶಾಲೆ ಪ್ರಾರಂಭಿಸಿದ್ದು ಪ್ರಸ್ತುತ ನೂರಾರು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದೆ ಎಂದರು. ಮುಂದಿನ ದಿನಗಳಲ್ಲಿ ತಾಂತ್ರಿಕ ಕೋರ್ಸ್ ಗಳನ್ನು ಪ್ರಾರಂಭಿಸಲು ಸಂಸ್ಥೆಯ ಅಧ್ಯಕ್ಷರು ಸಹಕಾರ ನೀಡುವಂತೆ ಮನವಿ ಮಾಡಿದರು.
ಸಂಸ್ಥೆಯ ಅಧ್ಯಕ್ಷ ಟಿ.ಆರ್.ಲಕ್ಷ್ಮಿಕಾಂತ್ ಅಧ್ಯಕ್ಷತೆವಹಿಸಿದ್ದು, ಕಾರ್ಯದರ್ಶಿ ರಾಮನಾಥ್, ವಾಸವಿಶಾಲೆಯ ಮೇಲ್ವಿಚಾರಕ ಬಿ.ವಿ.ಶ್ರೀನಿವಾಸ್, ಮುಖ್ಯ ಶಿಕ್ಷಕರಾದ ಮಹೇಶ್,ರಮೇಶ್, ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮಿ,ಗಾಯತ್ರಿ, ಅಜಯ್ , ಥಿಯಾಸಫಿಯ ಗೋಪಾಲ್ ಸೇರಿದಂತೆ ಇತರರಿದ್ದರು. ಮಕ್ಕಳು ಕೋಲಾಟ,ಕಂಸಾಳೆ, ಫ್ಯಾಶನ್ ಶೋ ಸೇರಿದಂತೆ ವಿಭಿನ್ನ ನೃತ್ಯಗಳನ್ನು ಅಭಿನಯಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ