ಹುಳಿಯಾರು ಪಟ್ಟಣದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ ಶಾಲಾ ಮಕ್ಕಳು ವಿವೇಕಾನಂದ ವೇಷ ತೊಟ್ಟು ವಿವೇಕಾನಂದ ಜಯತ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಿದರು.
ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಮಕ್ಕಳಿಗೆ ವಿವೇಕಾನಂದರ ವೇಷ ಹಾಕಿಸಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. |
ಶಾಲೆಯ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್ ಮಾತನಾಡಿ, ವಿವೇಕಾನಂದರ ಹೇಳಿಕೆಗಳು ಎಂದೆಂದಿಗೂ ಯುವಪೀಳಿಗೆಗೆ ಆದರ್ಶಯುತವಾಗಿರುತ್ತದೆ ಎಂದರು. ವಿವೇಕಾನಂದರು ತಮ್ಮ ಜೀವನವನ್ನು ಯಾವರೀತಿ ನಡೆಸಿದರು ಹಾಗೂ ಯಾವ ರೀತಿ ಸರಳ ಜೀವನ ನಡೆಸುತ್ತಿದ್ದರು ಎಂಬುದರ ಬಗ್ಗೆ ಮಕ್ಕಳಿಗೆ ತಿಳಿಸುವ ನಿಟ್ಟಿನಲ್ಲಿ ಶಾಲೆಯ ಕೆಲ ಮಕ್ಕಳಿಗೆ ವಿವೇಕಾನಂದ ಉಡುಗೆಗಳನ್ನು ಹಾಕಿಸಿ ಅವರ ಹೇಳಿಕೆಗಳನ್ನು ಹೇಳಿಸುವ ಕಾರ್ಯ ಮಾಡಿರುವುದಾಗಿ ತಿಳಿಸಿದರು.
ಹುಳಿಯಾರು-ಕೆಂಕೆರೆ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಶಶಿಭೂಷಣ್ ಮಾತನಾಡಿ ವಿವೇಕಾನಂದರು ಓದಿನಲ್ಲಿ ಹೊಂದಿದ್ದ ಶ್ರದ್ದೆ ಹಾಗೂ ತಾಳ್ಮೆಯ ಮನೋಭಾವದ ಬಗ್ಗೆ ತಿಳಿಸಿದರು. ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದವರು ಸಂಸ್ಕಾರ ಹಾಗೂ ಸಾಧನೆ ಮೂಲಕ ವಿವೇಕಾನಂದರಾದರು ಎಂದರು. ಶಾಲೆಯ ಪ್ರಾಂಶುಪಾಲ ರವಿ ಹಾಗೂ ಶಿಕ್ಷಕರು,ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ