ಚಳಿಯಿಂದ ತರಗುಟ್ಟುತ್ತಿದ್ದ ಜನ ಎರಡು ದಿನದಿಂದ ಬಿಸಿಲ ತಾಪಕ್ಕೆ ಬೆವರುತ್ತಿದ್ದಾರೆ. ಇದುವರೆಗೂ ತೀವ್ರ ಚಳಿಯಿಂದ ನಲುಗಿದ್ದ ಜನಕ್ಕೆ ಇದೀಗ ಬಿಸಿಲು ಹೆಚ್ಚಾಗಿ ಬೆಸಿಗೆಯನ್ನು ನೆನಪು ಮಾಡುತ್ತಿದೆ.ಕಳೆದ ಕೆಲ ದಿನದ ಹಿಂದೆ ಕನಿಷ್ಠ ೧೬ ಡಿಗ್ರಿಯಿಂದ ೨೩ ಡಿಗ್ರಿಯಿದ್ದ ತಾಪಮಾನ ಇದೀಗ ದಿನೇ ದಿನೆ ಹೆಚ್ಚುತ್ತಿದ್ದು ೩೦ ಡಿಗ್ರಿಗೆ ತಲುಪಿದೆ.
ಋತುಗಳ ಬದಲಾವಣೆಯಂತೆ ಸೋಮವಾರದಿಂದ ರಥಸಪ್ತಮಿಯ ನಂತರ ಸೂರ್ಯ ಪ್ರಖರತೆ ಹೆಚ್ಚಿ ಬಿಸಿಲಿನ ತಾಪ ಏರುತ್ತಿದೆ. ಜನವರಿ ೨೬ ಮಾಘ ಮಾಸದ ಶುದ್ಧ ಸಪ್ತಮಿಯಾಗಿದ್ದು ಈ ದಿನವನ್ನು ರಥಸಪ್ತಮಿ ಎಂದು ಆಚರಿಸಲಾಗುತ್ತಿದ್ದು, ಇದನ್ನು ಅಚಲ ಸಪ್ತಮಿ ಎಂದು ಕೂಡ ಕರೆಯುತ್ತಾರೆ. ಇಂದಿನಿಂದ ಸೂರ್ಯನು ತನ್ನ ರಥಕ್ಕೆ ಅರುಣನನ್ನು ಸಾರಥಿಯನ್ನಾಗಿಸಿ ಏಳುಕುದುರೆಯ ರಥವನ್ನೇರಿ ಸಂಚಾರಕ್ಕೆ ಹೊರಡುವುದರಿಂದ ಮುಂದೆ ಬಿಸಿಲಿನ ಏರಿಕೆ ಜಾಸ್ತಿ ಎನ್ನುವ ಪ್ರತೀತಿ ಇದೆ.
ಇಂದಿನಿಂದ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುವುದು ಸರ್ವೆ ಸಾಮಾನ್ಯವಾಗಿದ್ದು, ಸದ್ಯ ಬಿಸಿಲು ಹೆಚ್ಚಾಗುತ್ತಿರುವುದು ಕಣಗೆಲಕ್ಕೆ ಅನುಕೂಲವಾಗಿದ್ದು ರೈತರು ಒಕ್ಕಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ