ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಗ್ಯಾರಳ್ಳದ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿಯ ದೇವಾಲಯದಲ್ಲಿ ಮಾಡಾಳಿನ ಶ್ರೀ ರುದ್ರಮುನಿಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶಿವಲಿಂಗದ ಪ್ರತಿಷ್ಠಾಪನಾ ಕಾರ್ಯ ಭಾನುವಾರ ಮುಂಜಾನೆ ಶ್ರದ್ದಾಭಕ್ತಿಯಿಂದ ನಡೆಯಿತು.
ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಗ್ಯಾರಳ್ಳದ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿಯ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ಶಿವಲಿಂಗ. |
ಲಿಂಗಪ್ರತಿಷ್ಠಾಪನಾ ಕಾರ್ಯದ ಅಂಗವಾಗಿ ಶನಿವಾರ ಸಂಜೆ ಗ್ರಾಮದೇವತೆ ಶ್ರೀಕಾಳಮ್ಮ, ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ,ಗೌಡಗೆರೆ ದುರ್ಗಮ್ಮ ದೇವರನ್ನು ಬರಮಾಡಿಕೊಳ್ಳಲಾಗಿತ್ತು. ಅರ್ಚಕರಾದ ಚನ್ನಬಸವಯ್ಯ,ಈಶ್ವರಯ್ಯ,ಚಂದ್ರಯ್ಯ,ಯತೀಶ್ ಅವರುಗಳ ಪೌರೋಹಿತ್ಯದಲ್ಲಿ ಗಂಗಾಪ್ರವೇಶ ಗಣಪತಿ ಪುಣ್ಯಾಹ, ನಾಂದಿ, ಅಂಕುರಾರ್ಪಣೆ,ಪಂಚಕಳಸ,ನವಗ್ರಹ ಸ್ಥಾಪನೆ,ಲಕ್ಷ್ಮಿಕಳಶ ಸ್ಥಾಪನೆ,ನೂತನ ಲಿಂಗ ಪ್ರತಿಷ್ಠೆ,ನೇತ್ರೋನಿಮಲನ,ಅಭಿಷೇಕ, ಅಷ್ಟೋತ್ತರ ,ಮಹಾಮಂಗಳಾರತಿ ನಡೆಯಿತು.
ಭಾನುವಾರ ಮುಂಜಾನೆ ಶ್ರೀ ರುದ್ರಮುನಿಮಹಾಸ್ವಾಮಿಜೀ ಹಾಗೂ ಪಾಂಡೋಮಟ್ಟಿ ವಿರಕ್ತಮಠದ ಗುರುಬಸವಮಹಾಸ್ವಾಮಿಗಳ ಸಾನಿಧ್ಯದಲ್ಲಿ ಲಿಂಗಪ್ರತಿಷ್ಠಾಪನೆ ಮಾಡಿ ನಂತರ ಅಭಿಷೇಕ,ಅರ್ಚನೆನಡೆಸಿ ಮಹಾಮಂಗಳಾರತಿ ನಡೆಸಿ ಪ್ರಸಾದ ವಿತರಿಸಲಾಯಿತು.ನಂತರ ಧಾರ್ಮಿಕ ಸಭೆ ನಡೆದು ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಕೆ.ವಿ.ರಮೇಶ್,ಚನ್ನಬಸವಯ್ಯ,ಕೊಟ್ರೇಶ್,ಸದಾಶಿವಣ್ಣ,ಮಲ್ಲೇಶ್, ಪ್ರಭು,ಜಗದೀಶ್, ಮಧು,ಮೋಹನ್, ಹರೀಶ್, ಪ್ರಕಾಶ್ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ