ಜೀವನದಲ್ಲಿ ಪ್ರತಿಯೊಬ್ಬರು ಗುರಿಯನ್ನು ಹೊಂದಿ ಸಾಗಿದಾಗ ಜೀವನ ಸಾರ್ಥಕವಾಗುತ್ತದೆ, ಆ ಗುರಿ ಸಾಧಿನೆಗಾಗಿ ನಮ್ಮ ಮನಸ್ಸಿನ್ನು ಏಕಾಗ್ರತೆಯಿಂದ ಹಿಡಿದಿಟ್ಟುಕೊಂಡಾಗ ಮಾತ್ರ ಯಾವುದೇ ಅಡೆತಡೆಗಳು ಬಂದರೂ ಸಹ ನಮ್ಮ ಗುರಿಯನ್ನು ತಲುಪುತ್ತೇವೆ ಎಂದು ಆರ್.ಎಸ್.ಎಸ್.ನ ಜಿಲ್ಲಾಪ್ರಮುಖ್ ಅ.ನ.ಲಿಂಗಪ್ಪ ತಿಳಿದರು.
ಹುಳಿಯಾರಿನ ಬಾಲಕಿಯರ ಪಿಯು ಕಾಲೇಜಿನಲ್ಲಿ ಅಯೋಜಿಸಿದ್ದ ವಿವೇಕಾನಂದರ ಜಯಂತೋತ್ಸವದಲ್ಲಿ ಅ.ನ.ಲಿಂಗಪ್ಪ ಮಾತನಾಡುತ್ತಿರುವುದು. |
ಹುಳಿಯಾರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಅಯೋಜಿಸಿದ್ದ ವಿವೇಕಾನಂದರ ೧೫೨ ನೇ ಜಯಂತೋತ್ಸವದ ಆಚರಣೆಯಲ್ಲಿ ಅವರು ಮಾತನಾಡಿದರು.
ನಮ್ಮಂತೆ ಸಾಮಾನ್ಯ ಮನುಷ್ಯನಾಗಿದ್ದ ನರೇಂದ್ರ ತನ್ನ ಏಕಾಗ್ರತೆ ಹಾಗೂ ಗುರುನಿಷ್ಠೆಯಿಂದ ವಿವೇಕಾನಂದರಾಗಿ ಇಡಿ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತಹ ಮಹಾನ್ ಸಾಧನೆ ಮಾಡಿದರು.ವಿಶಾಲಮನೋಭಾವ ಹೊಂದಿದ್ದ ವಿವೇಕಾನಂದರು ಧೈರ್ಯಶಾಲಿಗಳಾಗಿದ್ದು ಎದುರಾಗುವ ಸಮಸ್ಯೆಗಳನ್ನು ಸೂಕ್ಷವಾಗಿ ತಿಳಿದು ಅವುಗಳನ್ನು ಪರಿಹರಿಸುತ್ತಿದ್ದರು. ಯುವಪೀಳಿಗೆಗೆ ತಮ್ಮದೇ ಆದ ಅನೇಕ ವಿಚಾರಗಳನ್ನು ತಿಳಿಸಿದ್ದು ಹಿಂದೂಧರ್ಮವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ವಿವೇಕಾನಂದರಿಗೆ ಸಲುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಕೆ.ಬಾಲಾಜಿ ಮಾತನಾಡಿ, ಸ್ವಾಮಿವಿವೇಕಾನಂದರ ಆದರ್ಶಗುಣಗಳನ್ನು ಇಂದಿನ ವಿದ್ಯಾರ್ಥಿಗಳು ಅಳವಡಿಸಿಕೊಂಡು ಶಿಸ್ತು, ಸಂಯಮದ ಹಾದಿಯಲ್ಲಿ ನಡೆಯುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಿ ಎಂದರು.
ಈ ವೇಳೆ ನಿವೃತ್ತ ಶಿಕ್ಷಕ ಹು.ಲ.ವೆಂಕಟೇಶ್, ಅರ್ಥಶಾಸ್ತ್ರ ಉಪನ್ಯಾಸಕ ಚಿದಾನಂದಪ್ಪ, ಗೋಪಿ ವಿವೇಕಾನಂದರ ವಿಚಾರಗಳನ್ನು ತಿಳಿಸಿದರು. ಉಪನ್ಯಾಸಕರಾದ ಶಿವಣ್ಣ,ಹೊನ್ನಯ್ಯ, ರಾಜಣ್ಣ,ಸೂರ್ಯನಾರಾಯಣ,ಶೈಲಜಾ,ಶೈಲ,ಗೀತಾ ಹಾಗೂ ಸಿಬ್ಬಂದಿಯವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ