ಕೆರೆ ಒತ್ತುವರಿ ಜಾಗದಲ್ಲಿರುವ ಅಂಗಡಿಗಳ ತೆರವಿಗೆ ಸುಪ್ರಿಂಕೋರ್ಟ್ ಆದೇಶದನ್ವಯ ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಅಂಗಡಿಗಳ ತೆರವಿಗೆ ಕಂದಾಯ ಇಲಾಖೆಯಿಂದ ಗುರುವಾರದಂದು ಅಂತಿಮ ನೋಟೀಸ್ ನೀಡಿದ್ದು ಇಂದೇ(ತಾ.೩೦) ಕಡೆಯ ದಿನವಾಗಿದೆ.
ಹುಳಿಯಾರಿನ್ ಬಸ್ ನಿಲ್ದಾಣದ ಅಂಗಡಿದಾರಿಗೆ ಅಂಗಡಿ ತೆರವುಗೊಳಿಸುವಂತೆ ನೀಡಿರುವ ಅಂತಿಮ ನೋಟೀಸ್. |
ಕಳೆದ ಡಿಸೆಂಬರ್ ನಲ್ಲಿ ಹುಳಿಯಾರು ಕೆರೆ ಒತ್ತುವರಿ ಜಾಗದ ತೆರವು ಕಾರ್ಯಾಚರಣೆ ನಡೆದಿತ್ತಾದರೂ ಸಹ ಬಸ್ ನಿಲ್ದಾಣದ ಅಂಗಡಿಯವರು ಇದಕ್ಕೆ ವಿರೋಧವೊಡ್ಡಿದ್ದರು. ಏಕಾಏಕಿ ಅಂಗಡಿಗಳನ್ನು ತೆಗೆಯಿರಿ ಎಂಡರೆ ಹೇಗೆ ತೆಗೆಯುವುದು ನಾವು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ ಎಂದು ಅಂಗಡಿದಾರರು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದರಲ್ಲದೆ ಸಂಸದರೊಂದಿಗೆ ಡಿಸೆಂಬರ್೨೫ರಂದು ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಪತ್ರಸಲ್ಲಿಸಿ ಆರು ತಿಂಗಳ ಕಾಲಾವಾಕಾಶ ಕೋರಿದ್ದರು. ಜಿಲ್ಲಾಧಿಕಾರಿಗಳು ಅಂಗಡಿದಾರರ ಅಹವಾಲು ಸ್ವೀಕರಿಸಿ ಒಂದು ತಿಂಗಳ(ಜನವರಿ೩೦) ಕಾಲಾವಕಾಶ ನೀಡಿದ್ದರು. ಇದರಿಂದ ಅಂಗಡಿದಾರರು ಸ್ವಲ್ಪ ನಿರಾಳರಾಗಿದ್ದರು.
ಜಿಲ್ಲಾಧಿಕಾರಿಗಳು ನೀಡಿದ್ದ ಅಂತಿಮ ಗಡುವು ಮುಗಿದಿದ್ದು ಇದೀಗ ಬಸ್ ನಿಲ್ದಾಣದ ಅಂಗಡಿಗಳಿಗೆ ಸುಮಾರು ೭೦ ಅಂಗಡಿಗಳಿಗೆ ಗ್ರಾಮ ಲೆಖ್ಖಿಗ ಶ್ರೀನಿವಾಸ್ ಗುರುವಾರ ಬೆಳಿಗ್ಗೆ ತಿಳುವಳಿಕೆ ನೋಟೀಸ್ ನೀಡಿದ್ದಾರೆ. ಈ ನೋಟಿಸ್ ಅನ್ವಯ ಅಂಗಡಿದಾರರು ತಮ್ಮ ಅಂಗಡಿಯಲ್ಲಿನ ಸರಕು ಸರಂಜಾಮುಗಳನ್ನು ಬೇರೆಡೆಗೆ ತೆಗೆದುಕೊಳ್ಳುವಂತೆ ,ತಪ್ಪಿದಲ್ಲಿ ಯಾವುದೇ ಮುನ್ಸೂಚನೆಯಿಲ್ಲದೆ ತೆರವುಕಾರ್ಯ ನಡೆಸುವುದಾಗಿ ನೋಟೀಸ್ ನಲ್ಲಿ ನಮೂದಾಗಿದೆ.
ಕಳೆದ ಡಿಸೆಂಬರ್ ನಲ್ಲೇ ಅಂಗಡಿಗಳು ತೆರವಾಗಬೇಕಿದ್ದು ಒಂದು ತಿಂಗಳ ಕಾಲಾವಾಕಾಶ ದೊರೆತು ಅಂಗಡಿದಾರರನ್ನು ನಿರಾಳ ಮಾಡಿತ್ತು. ಆದರೆ ಇದೀಗ ಮತ್ತೆ ಅಂಗಡಿದಾರರಿಗೆ ಸಂಕಟ ಎದುರಾಗಿದ್ದು ಅಂಗಡಿಗೆಯದೆ ಬೇರೆ ದಾರಿಯಿಲ್ಲ, ಅಂಗಡಿ ತೆಗೆದರೆ ಬೇರೆಲ್ಲಿ ಅಂಗಡಿ ಮಾಡುವುದು ಇದನ್ನೇ ನಂಬಿ ನಮ್ಮ ಜೀವನ ಸಾಗಿಸುತ್ತಿದ್ದೆವು ಮುಂದೇನು ಗತಿಯೆಂಬ ಯಕ್ಷಪ್ರಶ್ನೆ ಅಂಗಡಿದಾರರದ್ದಾಗಿದೆ.
ಈ ಬಾರಿಯೂ ಒತ್ತುವರಿ ಕಾರ್ಯ ನಡೆಯುತ್ತದೆಯೋ ಅಥವಾ ಯಾವುದಾದರೂ ಒತ್ತಡದಿಂದ ಮತ್ತೆ ಮುಂದೋಗುತ್ತದೆಯೇ ಕಾದು ನೋಡಬೇಕಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ