ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಬೇಕಾದರೆ ಶಿಕ್ಷಣ ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರಿಗೂ ಶಿಕ್ಷಣದಅಗತ್ಯವಿದೆ. ಪೋಷಕರು ಹೆಚ್ಚಾಗಿ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಕಡೆ ಗಮನಕೊಡುವಂತೆ ಪಟ್ಟನಾಯಕನಹಳ್ಳಿ ಪಿಯು ಕಾಲೇಜಿನ ಪ್ರಾಂಶುಪಾಲ ಸಿ.ಆರ್.ಕೃಷ್ಣಯ್ಯ ತಿಳಿಸಿದರು.
ಹುಳಿಯಾರಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಮುಕ್ತಾಯ ಸಮಾರಂಭವನ್ನು ಪ್ರಾಂಶುಪಾಲ ಕೃಷ್ಣಯ್ಯ ಉದ್ಘಾಟಿಸಿದರು. |
ಹುಳಿಯಾರಿನಲ್ಲಿ ಗುರುವಾರ ನಡೆದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ೨೦೧೪-೧೫ ನೇ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣಭಾಗದ ಅನೇಕ ಪೋಷಕರು ಹೆಣ್ಣುಮಕ್ಕಳ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟುಕುಗೊಳಿಸಿ ಮದುವೆ ಮಾಡುವ ಮೂಲಕ ಸಂಸಾರದ ಹೊರೆ ಹೊರಿಸಿ ಅವರ ಆಸೆ ಆಕಾಂಕ್ಷೆಗಳು ನಶಿಸುವಂತೆ ಮಾಡುತ್ತಿದ್ದಾರೆ ಎಂದರು. ಹೆಣ್ಣುಮಕ್ಕಳು ವಿದ್ಯಾವಂತರಾದರೆ ಅವರು ಮುಂದಿನ ಜೀವನದಲ್ಲಿ ತನ್ನ ಸಂಸಾರವನ್ನು ಉತ್ತಮವಾಗಿ ನಿಭಾಯಿಸುವದ ಜೊತೆಗೆ ಸಮಾಜದಲ್ಲಿ ಉತ್ತಮ ಹೆಸರುಗಳಿಸುತ್ತಾರೆ ಎಂದರು.
ಹುಳಿಯಾರಿನ ಬಾಲಕಿಯರ ಪಿಯು ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಕಿರುತೆರೆ ಕಲಾವಿದ ಎನ್.ಎಸ್.ರಾಮಾನಂದ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಕೆ.ಬಾಲಾಜಿ ಹಾಗೂ ಇತರರಿದ್ದಾರೆ. |
ಅಧ್ಯಕ್ಷತೆವಹಿಸಿದ್ದ ಜಿ.ಪಂ.ಸದಸ್ಯೆ ಮಂಜುಳಾ ಮಾತನಾಡಿ , ಪಟ್ಟಣದಲ್ಲಿನ ಬಾಲಕಿಯರ ಕಾಲೇಜಿನ ಹೆಣ್ಣುಮಕ್ಕಳು ಕಳೆದ ವರ್ಷದ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಹೋಬಳಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಶಂಸಿದರು. ಈ ಕಾಲೇಜಿಗೆ ಕೊಠಡಿ,ಶೌಚಾಲಯದ ಅವಶ್ಯಕತೆಯಿದ್ದು ಅವುಗಳನ್ನು ಕಲ್ಪಿಸಿ ಕೊಡುವುದಾಗಿ ತಿಳಿಸಿದರು. ಇದೇವೇಳೆ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವನ್ನು ಹಾಗೂ ಕಳೆದ ಬಾರಿ ಹೆಚ್ಚು ಅಂಕ ಪಡೆದ ವಿಜ್ಞಾನವಿಭಾಗದ ಭಾಗ್ಯ, ವಾಣಿಜ್ಯ ವಿಭಾಗದ ಭಾಗ್ಯ, ಕಲಾವಿಭಾಗದ ಅರ್ಪಿತ ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು.
ಪ್ರಾಂಶುಪಾಲ ಕೆ.ಬಾಲಾಜಿ, ಕಿರುತೆರೆ ಕಲಾವಿದ ಎನ್.ಎಸ್.ರಾಮಾನಂದ, ಮುಖಂಡರಾದ ನಂದಿಹಳ್ಳಿ ಶಿವಣ್ಣ, ಮುಖ್ಯಶಿಕ್ಷಕ ನಂದವಾಡಗಿ,ಉಪನ್ಯಾಸಕರಾದ ಹೊನ್ನಯ್ಯ,ಶಿವಣ್ಣ, ಗೋಪಿ, ಜಗದೀಶ್, ಚಿದಾನಂದ್,ಸೂರ್ಯನಾರಾಯಣ್,ವನಿತಾ,ಗೀತಾ,ಶೈಲಜಾ ಹಾಗೂ ಸಿಬ್ಬಂದಿಯವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ