ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೊಸ ವರ್ಷಕ್ಕೆ ತರಹೇವಾರಿ ಕೇಕ್ ರೆಡಿ

ಹೊಸ ವರ್ಷದ ಆಗಮನದ ಹಿನ್ನಲೆಯಲ್ಲಿ ಪಟ್ಟಣದ ವಿವಿಧ ಬೇಕರಿಗಳಲ್ಲಿ ಬಗೆಬಗೆಯ ಕೇಕ್ ಗಳ ತಯಾರಿ ಹಾಗೂ ಮಾರಾಟ ಭರದಿಂದ ಸಾಗಿದ್ದು ಗ್ರಾಹಕರ ಗಮನ ಸೆಳೆಯುತ್ತಿವೆ. ಹುಳಿಯಾರಿನ್ ಬಸ್ ನಿಲ್ದಾಣದ ನಂಜುಂಡೇಶ್ವರ ಬೇಕರಿಯಲ್ಲಿ ಹೊಸವರ್ಷದ ಅಂಗವಾಗಿ ತಹರೇವಾರಿ ಕೇಕ್ ಗಳನ್ನು ಪ್ರದರ್ಶಿಸಿರುವುದು. ನೂತನ ವರ್ಷದ ಸಂಭ್ರಮಾಚರಣೆಯನ್ನು ಕೇಕ್ ಕತ್ತರಿಸಿ ಸಿಹಿ ಹಂಚಿ ಆಚರಿಸುವ ಪರಿಪಾಟವಿದ್ದು ಆ ನಿಟ್ಟಿನಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಜನರನ್ನು ತೃಪ್ತಿಪಡಿಸುವಲ್ಲಿ ಪಟ್ಟಣದ ಬಸ್ ನಿಲ್ದಾಣದ ನಂಜುಂಡೇಶ್ವರ ಬೇಕರಿ, ಎಸ್.ಎಲ್.ಆರ್.ಬೇಕರಿ, ಬೆಂಗಳೂರು ಬೇಕರಿ,ಲಕ್ಷ್ಮಿಬೇಕರಿ, ವೆಂಕಟೇಶ್ವರ ಬೇಕರಿ, ಲಕ್ಷ್ಮಿನರಸಿಂಹಸ್ವಾಮಿ ಬೇಕರಿ,ಸಿದ್ದಲಿಂಗೇಶ್ವರ ಬೇಕರಿ,ಗಣೇಶ್ ಬೇಕರಿಗಳಲ್ಲಿ ಮಂಗಳವಾರದಿಂದ ವಿವಿಧ ಕೇಕ್ ಗಳ ತಯಾರಿ,ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಕಳೆದ ಹತ್ತದೈನಿದು ವರ್ಷದಿಂದ ಬೇಕರಿ ನಡೆಸುತ್ತಿದ್ದು ಮಾಮೂಲಿ ದಿನಕ್ಕಿಂತ ಹೊಸವರ್ಷದ ಆಚರಣೆಯ ವೇಳೆ ಹೆಚ್ಚಿನ ಕೇಕ್ ಬಿಕರಿಯಾಗುತ್ತದೆ. ಅದಕ್ಕಾಗಿ ಗ್ರಾಹಕರ ಬಯಕೆಗೆ ತಕ್ಕಂತೆ ಕೇಕ್ ಗಳನ್ನು ಸಿದ್ದಪಡಿಸಿ ಮಾರುತ್ತಿದ್ದೇವೆ. ಗ್ರಾಹಕರಿಂದ ಅರ್ಡರ್ ತೆಗೆದುಕೊಂಡು ಕೆಲ ಕೇಕ್ ತಯಾರಿಸಿದರೆ , ಮತ್ತೆ ಕೆಲ ಕೇಕ್ ಗಳನ್ನು ವಿವಿಧ ಮಾದರಿಗಳಲ್ಲಿ ತಾವೇ ತಯಾರಿಸುತ್ತೇವೆ ಎನ್ನುತ್ತಾರೆ ನಂಜುಂಡೇಶ್ವರ ಬೇಕರಿಯ ರವಿ ತಿಳಿಸುತ್ತಾರೆ. ಸದ್

ಗವಿರಂಗನಾಥಸ್ವಾಮಿ ಸನ್ನಿಧಿಯಲ್ಲಿ ಅದ್ಧೂರಿ ವೈಕುಂಠ ಏಕಾದಶಿ

ಹುಳಿಯಾರು  ಸಮೀಪದ ಹೊಸದುರ್ಗ ತಾಲ್ಲೂಕಿನ ಗವಿರಂಗಾಪುರದ ಪುರಾಣಪ್ರಸಿದ್ಧ ಶ್ರೀಗವಿರಂಗನಾಥಸ್ವಾಮಿಯ ವೈಕುಂಠ ಏಕಾದಶಿ ಗುರುವಾರದಂದು ವೈಭವಯುತವಾಗಿ ನಡೆಯಲಿದೆ. ವೈಕುಂಠ ಏಕಾದಶಿ ಆಚರಣೆ ಅಂಗವಾಗಿ ಗುರುವಾರ ಮುಂಜಾನೆ ಮೂಲದೇವರಿಗೆ ಹಾಗೂ ಅನಂತಪದ್ಮನಾಭಸ್ವಾಮಿಗೆ ಅಭಿಷೇಕ,ನೈವೇದ್ಯ ಮಂಗಳಾರತಿ ಹಾಗೂ ಸತ್ಯನಾರಾಯಣ ವ್ರತಪೂಜೆ, ಅಶ್ವವಾಹನೋತ್ಸವ ನಡೆಯಲಿದೆ. ಬ್ರಾಹ್ಮಣ ಸುಹಾಸಿನಿಯರಿಗೆ ವಸಂತಸೇವೆ ಹಾಗೂ ಫಲಹಾರ ಸೇವೆ ನಡೆಯಲಿದೆ. ಇದೇ ದಿನ ಸಂಜೆ ಉಯ್ಯಾಲೋತ್ಸವ , ಶನಿಮಹಾತ್ಮೆ ಕಥೆ ಪಾರಾಯಣ,ಗವಿರಂಗಾಪುರ ಹಾಗೂ ಹೆಗ್ಗರೆಯ ಭಜನಾಮಂಡಳಿಯವರಿಂದ ಅಖಂಡ ಭಜನೆ ನಡೆಯಲಿದೆ. ರಾತ್ರಿ ೯ ಗಂಟೆಯಿಂದ ವೈಕುಂಠ ನಾರಾಯಣ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಗಮಿಸಿದ ಭಕ್ತಾಧಿಗಳಿಗಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ತಾ.೦೨ರ ಶುಕ್ರವಾರ ಮುಕ್ಕೋಟಿ ದ್ವಾದಶಿ ಪ್ರಯುಕ್ತ ಹುಳಿಯಾರಿನ ಗವಿರಂಗನಾಥ ಲಾರಿ ಮಾಲೀಕರಾದ ಅನಂತಸುಬ್ಬರಾವ್ ಮಕ್ಕಳು ಸೇರಿದಂತೆ ಭಕ್ತಾಧಿಗಳ ಸೇವಾರ್ಥದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಗಜವಾಹನೋತ್ಸವ, ಉಯ್ಯಾಲೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ತಾ.೦೩ರ ಶನಿವಾರ ತೋಟದ ಅಂಗಡಿ ನಂಜಪ್ಪನವರ ಸೇವಾರ್ಥದಲ್ಲಿ ಧೂಪದ ಸೇವೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ಆಗಮಿಸುವಂತೆ ಸಮಿತಿಯವರು ಕೋರಿದ್ದಾರೆ.

ತಾ.೦೧ ಅನಂತಶಯನ ರಂಗನಾಥಸ್ವಾಮಿಯ ಸಪ್ತದ್ವಾರದರ್ಶನ

ಹುಳಿಯಾರು  ಪಟ್ಟಣದ ಇತಿಹಾಸಪ್ರಸಿದ್ಧ ಅನಂತಶಯನ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಇಂದು ಗುರುವಾರ ವೈಕುಂಠ ಏಕಾದಶಿ ಆಚರಣೆಗೆ ಸಿದ್ದತೆ ಭರದಿಂದ ಸಾಗಿದೆ. ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ ವೈಕುಂಠ ಏಕಾದಶಿ ಸಮಿತಿಯ ಅಧ್ಯಕ್ಷ ಧನುಷ್ ರಂಗನಾಥ್ ಗುರುವಾರ ಸಂಜೆಯಿಂದ ಸಪ್ತದ್ವಾರದ ಮೂಲಕ ವೈಕುಂಠ ನಾರಾಯಣ ದರ್ಶನಕ್ಕೆ ಭಕ್ತಾಧಿಗಳಿಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು. ಗುರುವಾರದಂದು ವೈಕುಂಠ ಏಕಾದಶಿ ಅಂಗವಾಗಿ ರಂಗನಾಥಸ್ವಾಮಿಗೆ ಅಭಿಷೇಕ,ಅರ್ಚನೆ,ಅಲಂಕಾರ ಸೇರಿದಂತೆ ವಿವಿಧ ಪೂಜಾಕೈಂಕರ್ಯಗಳನ್ನು ನಡೆಯಲಿದ್ದು, ಗ್ರಾಮದೇವತೆ ಹುಳಿಯಾರಮ್ಮ ಹಾಗೂ ದುರ್ಗಮ್ಮನವರ ಆಗಮನ ದೊಂದಿಗೆ ಮಹಾಲಕ್ಷ್ಮಿ-ಮಾಹಾವಿಷ್ಟು ಹೋಮ ಹಮ್ಮಿಕೊಳ್ಳಲಾಗಿದೆ. ಸಂಜೆ ಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸಿ ಸಪ್ತದ್ವಾರದದ ಮೂಲಕ ಸ್ವಾಮಿಯ ದರ್ಶನ ನಡೆಯಲಿದ್ದು ಭಕ್ತಾಧಿಗಳಿಗಾಗಿ ಲಾಡು,ಗೊಜ್ಜವಲಕ್ಕಿ ವ್ಯವಸ್ಥೆ ಸೇವಾಕರ್ಥರಿಂದ ಮಾಡಿದ್ದು, ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆಯುವಂತೆ ಅವರು ಕೋರಿದ್ದಾರೆ.

ರಸ್ತೆ ಡಾಂಬರಿಕರಣಕ್ಕೆ ಸಿಬಿಎಸ್ ಚಾಲನೆ

ಹುಳಿಯಾರು ಹೋಬಳಿ ಕಲ್ಲೇನಹಳ್ಳಿ ಕ್ರಾಸ್ ನಿಂದ ಪಿಲಾಲಿವರೆಗಿನ ರಸ್ತೆಯ ಡಾಂಬರೀಕರಣಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು ಚಾಲನೆ ನೀಡಿದರು. ತಹಸೀಲ್ದಾರ್ ಕಾಮಾಕ್ಷಮ್ಮ ಹಾಗೂ ಇತರರಿದ್ದಾರೆ.

ವಿವಿಧ ವೇಷ ತೊಟ್ಟ ಮಕ್ಕಳು

ಹುಳಿಯಾರಿನಲ್ಲಿ ನಡೆದ ಧರ್ಮಸ್ಥಳ ಸಂಘದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವಿವಿಧ ವೇಷಗಳನ್ನು ತೊಟ್ಟ ವೇಷಧಾರಿ ಮಕ್ಕಳು ಗಮನ ಸೆಳೆದರು.

ಹುಳಿಯಾರು ಸುತ್ತ ಅವರೆ ಬಂಪರ್ ಬೆಳೆ : ಎಲ್ಲೆಡೆ ಹರಡಿದ ಅವರೆ ಸೊಗಡು : ಬೆಲೆಯೂ ಸಸ್ತಾ

ಚಳಿಗಾಲದ ಡಿಸೆಂಬರ್ ನಲ್ಲಿ ಮಾರುಕಟ್ಟೆಯಲ್ಲಿ ಎಲ್ಲೆಲ್ಲೂ ಅವರೆಕಾಯಿಯದ್ದೇ ಸಾಮ್ರಾಜ್ಯವಾಗಿದ್ದು . ಉತ್ತಮ ಮಳೆ ಹಾಗೂ ಇಬ್ಬನಿಯ ವಾತಾವರಣ ಅವರೆಕಾಯಿಗೆ ಬಲುಪೂರಕವಾಗಿ ಬಂಪರ್ ಬೆಳೆ ಬಂದಕಾರಣ ಬೆಲೆ ಸಸ್ತವಾಗಿ ಬೆಳೆಗಾರರು ಕಣ್ ಕಣ್ ಬಿಡುವಂತಾದರೆ ಗ್ರಾಹಕರಲ್ಲಿ ಮಾತ್ರ ಮಂದಹಾಸ ಮೂಡಿಸಿದೆ. ಹುಳಿಯಾರಿನ ರಾಜ್ ಕುಮಾರ್ ರಸ್ತೆಯ ಅಂಗಡಿಗಳ ಮುಂದೆ ಅವರೆಕಾಯಿ ರಾಶಿಹಾಕಿಕೊಂಡು ಮಾರಾಟದಲ್ಲಿ ನಿರತರಾಗಿರುವ ರೈತರು. ಪ್ರಕೃತಿಯಲ್ಲಿ ಒಂದೊಂದು ಕಾಲಕ್ಕೂ ಒಂದೊಂದು ರೀತಿಯ ಹಣ್ಣು,ತರಕಾರಿಗಳ ಸೀಸನ್ ಇದ್ದು ಅಂತೆಯೇ ಚಳಿಗಾಲದ ವೇಳೆ ಅಂದರೆ ಡಿಸೆಂಬರ್ ನಿಂದ ಶುರುವಾಗಿ ಜನವರಿ ಅಂತ್ಯದವರೆಗೂ ಅವರೆಕಾಯಿಯದ್ದೇ ಕಾರುಬಾರಾಗಿರುತ್ತದೆ. ಊರಿನ ಎಲ್ಲೆಲ್ಲೂ ಅವರೆಕಾಯಿಯದ್ದೇ ಕಲರವವಾಗಿದ್ದು ಬೀದಿಬೀದಿಯಲ್ಲೂ ಅವರೆಕಾಯಿಜ್ವರ ವ್ಯಾಪಿಸಿದೆ.ಸಗಟುದರ ೧೦ರೂಗೆ ಮಾರಾಟವಾಗುವ ಅವರೆ ಚಿಲ್ಲರೆಯಾಗಿ ತಳ್ಳುಗಾಡಿ ಹಾಗೂ ಅಂಗಡಿಗಳಲ್ಲಿ ೧೫ ರಿಂದ ೨೦ರೂಗೆ ಮಾರಾಟವಾಗುತ್ತಿದೆ. ಸೊಗಡವರೆಗೆ ಇನ್ನಿಲ್ಲದ ಬೇಡಿಕೆಯಿದ್ದು ಪಟ್ಟಣದ ಬೀದಿ ಬೀದಿಗಳಲ್ಲಿ ಅವರೆಕಾಯ್ ಅವರೆಕಾಯ್ ಕೆಜಿ ೧೫-೨೦ ಎಂದು ಕೂಗುತ್ತಾ ಮಾರಾಟ ಮಾಡುವವರು ಹೆಚ್ಚಾಗಿ ಕಂಡುಬರುತ್ತಿದ್ದು, ಈ ಮಾಗಿ ಸಮಯದಲ್ಲಿ ಸಿಗುವ ಅವರೆ ತುಂಬ ರುಚಿಯಾಗಿದ್ದು ಬಾಯಿಗೆ ಹಿತವಾಗಿರುವ ಕಾರಣದಿಂದ ಎಲ್ಲರೂ ಅವರೆ ಕೊಳ್ಳಲು ಮುಗಿಬೀಳುತ್ತಿದ್ದಾರೆ. ಪ್ರಾರಂಭದಲ್ಲಿ ಕೆ

ಹುಳಿಯಾರು : ಜ.೧ ಕ್ಕೆ ವೈಕುಂಠ ಏಕಾದಶಿ ಆಚರಣೆ

ಹುಳಿಯಾರು ಪಟ್ಟಣದ ವಿವಿಧ ದೇವಾಲಯಗಳಲ್ಲಿ ಜನವರಿ ೧ ರ ಗುರುವಾರದಂದು ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆ ,ಅಲಂಕಾರ ಹಾಗೂ ಸಪ್ತದ್ವಾರ ವೈಕುಂಠ ದರ್ಶನ ಕಾರ್ಯ ವಿಜೃಂಭಣೆಯಿಂದ ನಡೆಯಲಿದೆ. ಇತಿಹಾಸ ಪ್ರಸಿದ್ದ ಅನಂತಶಯನ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಸೇವಾಸಮಿತಿವತಿಯಿಂದ ಆಚರಣೆ ನಡೆಯಲಿದ್ದು, ಮುಂಜಾನೆ ಸುಪ್ರಭಾತ ಸೇವೆ, ಪಂಚಾಮೃತಾಭಿಷೇಕ, ನೈವೇದ್ಯ ನಡೆಯಲಿದೆ. ಗ್ರಾಮದೇವತೆ ಹುಳಿಯಾರಮ್ಮ , ದುರ್ಗಮ್ಮ ಹಾಗೂ ಆಂಜನೇಯಸ್ವಾಮಿ ಆಗಮನದೊಂದಿಗೆ ಮಹಾವಿಷ್ಟು-ಮಹಾಲಕ್ಷ್ಮಿ ಹೋಮ ನಡೆದು ನಂತರ ಮಧ್ಯಾಹ್ನದ ವೇಳೆಗೆ ಪೂರ್ಣಾಹುತಿಯೊಂದಿಗೆ ಮಹಾಮಂಗಳಾರತಿ ನಡೆಯಲಿದೆ. ಇದೇ ದಿನ ಸಂಜೆಯಿಂದ ಸ್ವಾಮಿಯ ಸಪ್ತದ್ವಾರ ವೈಕುಂಠ ದರ್ಶನ ನಡೆಯಲಿದೆ. ಪಟ್ಟಣದ ವಿವಿಧ ಭಜನಾ ಮಂಡಳಿಯವರು ಭಜನಾ ಕಾರ್ಯ ನಡೆಸಿಕೊಡಲಿದ್ದಾರೆ. ಗಾಂಧಿಪೇಟೆಯ ವಾಸವಿ ದೇವಾಲಯದಲ್ಲಿ ಆರ್ಯವೈಶ್ಯ ಸಮುದಾಯದವರಿಂದ ವೈಕುಂಠಏಕಾದಶಿ ಆಚರಣೆ ನಡೆಯಲಿದ್ದು ಕನ್ನಿಕಾಪರಮೇಶ್ವರಿ ದೇವಿ ಹಾಗೂ ಶ್ರೀರಾಮಚಂದ್ರಸ್ವಾಮಿಗೆ ವೈಕುಂಠನಾರಾಯಣನ ವಿಶೇಷ ಅಲಂಕಾರ ಸೇರಿದಂತೆ ಇನ್ನಿತರ ಪೂಜಾಕೈಂಕರ್ಯಗಳು ನಡೆಯಲಿದೆ ಎಂದು ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎಂ.ಎಸ್.ನಟರಾಜ್ ತಿಳಿಸಿದ್ದಾರೆ. ಬನಶಂಕರಿ ದೇವಾಲಯದಲ್ಲಿ ದೇವಾಂಗ ಮಂಡಳಿಯವರು ವೈಕುಂಠ ಏಕಾದಶಿ ಹಮ್ಮಿಕೊಂಡಿದ್ದು ಅಂದು ಬನಶಂಕರಿ ಅಮ್ಮನವರಿಗೆ ಅಭಿಷೇಕ,ಅರ್ಚನೆ , ಬಾಲಾಜಿಯ ಅಲಂಕಾರ ಹಾಗೂ ವಿವ

ಅಪರಿಚಿತ ಮಹಿಳೆಯ ಶವಪತ್ತೆ

ಹುಳಿಯಾರು  ಸಮೀಪದ ಹಂದನಕೆರೆಯ ಬೇವಿನಹಳ್ಳಿ ಬಳಿಯ ಮಲ್ಲೇನಹಳ್ಳಿ ಕೆರೆಯಲ್ಲಿ ಪರಿಚಿತ ಮಹಿಳೆಯ ಶವವೊಂದು ಭಾನುವಾರ ಪತ್ತೆಯಾಗಿದೆ. ಸುಮಾರು ೨೫ ರಿಂದ ೩೦ವರ್ಷ ವಯಸ್ಸಿನ ,ಅಹಿಳೆಯಾಗಿದ್ದು, ಮೈಮೇಲೆ ಯಾವುದೇ ಬಟ್ಟೆ ಇರುವುದಿಲ್ಲ.ಕಾಲಲ್ಲಿ ಬೆಳ್ಳಿ ಕಾಲುಂಗುರ,ಕಾಲುಚೈನ್ ಹಾಗೂ ಕಿವಿಯಲ್ಲಿ ಚಿನ್ನದ ಸಣ್ಣ ಓಲೆಗಳಿದ್ದು ಸುಮಾರು ೫ ಅಡಿ ಎತ್ತರದ ಕಡುಗೆಂಪು ಮೈಬಣ್ಣದಿಂದ ಕೂಡಿದೆ. ಈ ಮಹಿಳೆ ಯಾರು, ಈಕೆಯ ಸಂಬಂಧಿಕರು ಯಾರೆಂಬುದು ತಿಳಿಯದ ಕಾರಣ ಶವವನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ಕಳುಹಿಸಿ ಶವಾಗಾರದಲ್ಲಿರಿಸಿರುವುದಾಗಿ ಹಂದನಕೆರೆ ಪೋಲಿಸರು ತಿಳಿಸಿದ್ದಾರೆ.

ಗಡಿಗ್ರಾಮಗಳ ಅಭಿವೃದ್ಧಿಗೆ ಕ್ರಮ : ಶಾಸಕ ಸಿಬಿಎಸ್

ತಾಲ್ಲೂಕಿನ ಗಡಿ ಗ್ರಾಮಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ಗಮನ ಮಾಡಿದ್ದು ಅವುಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ ಸೇರಿದಂತೆ ಇನ್ನಿತರ ಸವಲತ್ತುಗಳನ್ನು ನೀಡುವುದಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಹುಳಿಯಾರು ಹೋಬಳಿ ದಬ್ಬಗುಂಟೆಯಲ್ಲಿ ನಡೆದ ಪ್ರಾಥಮಿಕ ಕಿರುಆರೋಗ್ಯಕೇಂದ್ರದ ಉದ್ಘಾಟನಾ ಸಮಾರಂಭವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ನೆರವೇರಿಸಿದರು. ಹುಳಿಯಾರು ಹೋಬಳಿಯ ದಬ್ಬಗುಂಟೆಯಲ್ಲಿ ಶನಿವಾರ ನಡೆದ ಪ್ರಾಥಮಿಕ ಕಿರುಆರೋಗ್ಯಕೇಂದ್ರದ ಉದ್ಘಾಟನೆ ಹಾಗೂ ಕಲ್ಲೇನಹಳ್ಳಿ ಕ್ರಾಸ್ ನಿಂದ ಪಿಲಾಲಿವರೆಗಿನ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಸುವರ್ಣಗ್ರಾಮಯೋಜನೆಯಡಿ ಹೊಯ್ಸಳಕಟ್ಟೆ,ದಸೂಡಿ,ದಬ್ಬಗುಂಟೆ ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಮುಂದೆಯೂ ಸಹ ಗಡಿಗ್ರಾಮಗಳನ್ನು ಗುರ್ತಿಸಿ ಹೆಚ್ಚಿನ ಅಭುವೃದ್ಧಿ ಪಡಿಸುವುದಾಗಿ ತಿಳಿಸಿದರು. ಕಲ್ಲೇನಹಳ್ಳಿ ಕ್ರಾಸ್ ನಿಂದ ರಾಮನಗರ, ಮರೆನಡು ಗ್ರಾಮಗಳ ಮಾರ್ಗವಾಗಿ ಹಿರಿಯೂರು ಗಡಿ ರಸ್ತೆಯ ಸುಮಾರು ೧೦. ೫ ಕಿ.ಮೀ ದೂರದ ರಸ್ತೆಗೆ ಡಾಂಬರೀಕರಣ ಯೋಜನೆಗೆ ಚಾಲನೆ ನೀಡಲಾಗಿದೆ ಶೀಘ್ರದಲ್ಲೇ ಕಾಮಗಾರಿ ನಡೆಯಲಿದೆ ಎಂದರು. ತಹಸೀಲ್ದಾರ್ ಕಾಮಾಕ್ಷಮ್ಮ, ಇಓ ಕೃಷ್ಣಮೂರ್ತಿ,ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್,ತಾ.ಪಂ.ಸದಸ್ಯೆ ಕವಿತಾಪ್ರಕಾಶ್, ದಸೂಡಿ ಗ್ರಾ.ಪಂ.ಅಧ್ಯ

ಧರ್ಮಸ್ಥಳದ ಸ್ವಸಹಾಯ ಸಂಘಗಳಿಂದ ಸಮಾಜದ ಒಗ್ಗೂಡಿಕೆಯಾಗುತ್ತಿದೆ : ಯತೀಶ್ವರ ಸ್ವಾಮೀಜಿ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಡ್ಧಿಯೋಜನೆಯು ಯಾವುದೇ ಜಾತಿ,ಮತ ಬೇಧವಿಲ್ಲದೆ ಸಮಾಜದ ಎಲ್ಲರೂ ಸಮಾನರೆಂದು ಭಾವಿಸಿ ಸಂಘಗಳನ್ನು ಸ್ಥಾಪಿಸುತ್ತಾ ಎಲ್ಲಾ ಜನಾಂಗದವರನ್ನು ಒಂದೆಡೆ ಕ್ರೋಡೀಕರಿಸಿ ಸಮಾಜದ ಒಗ್ಗೂಡಿಕೆಯ ಕಾರ್ಯ ಮಾಡುವಲ್ಲಿ ಮುಂದಾಗಿದೆ ಎಂದು ಕುಪ್ಪೂರು ಗದ್ದಿಗೆಮಠದ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಮತವ್ಯಕ್ತಪಡಿಸಿದರು. ಹುಳಿಯಾರಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಡ್ಧಿಯೋಜನೆಯಡಿ ನಡೆದ ಸಾಧನ ಸಮಾವೇಶವನ್ನು ಕುಪ್ಪೂರು ಗದ್ದಿಗೆಮಠದ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಜಿ ಉದ್ಘಾಟಿಸಿದರು. ಹುಳಿಯಾರಿನ ಎಂಪಿಎಸ್ ಶಾಲಾವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಡ್ಧಿಯೋಜನೆಯಡಿ ಭಾನುವಾರ ನಡೆದ ಹುಳಿಯಾರು ವಲಯದಲ್ಲಿ ನೂತನ ೫೧ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಉದ್ಘಾಟನೆ ಹಾಗೂ ಸಾಧನ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹುಳಿಯಾರಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಡ್ಧಿಯೋಜನೆಯಡಿ ನಡೆದ ಸಾಧನ ಸಮಾವೇಶವದಲ್ಲಿ ಭಾಗವಹಿಸಿದ್ದ ಪ್ರಗತಿಬಂಧು ಸ್ವಸಹಾಯಸಂಘದ ಅಪಾರ ಸಂಖ್ಯೆಯ ಮಹಿಳೆಯರು. ಶ್ರೀಕ್ಷೇತ್ರದ ಡಾ.ವೀರೇಂದ್ರ ಹೆಗ್ಗಡೆಯವರ ಈ ವಿನೂತ ಯೋಜನೆ ಅನೇಕ ಬಡವರಿಗೆ ದಾರಿದೀಪವಾಗಿದ್ದು , ಸಮಾಜದಲ್ಲಿ ಹಿಂದುಳಿದವರ ಅಭಿವೃಧ್ದಿಗೆ ಸಹಕಾರಿಗಾಗಿದೆ ಎಂದರು. ಈ ಯೋಜನೆಯಡಿ ಕೇವಲ ಸಾಲ ಕೊಟ್ಟು ವಸೂಲಿ ಮಾಡುವುದರ ಜೊತೆಗೆ ಜನರ ಶ್ರಯೋಭ

ಎಂಟಿಎಸ್ ಟೆಲಿಕಾಮ್ ನಿಂದ ಉಚಿತ ಲಕ್ಕಿಡಿಪ್ , ಸ್ಥಳದಲ್ಲೇ ಉಡುಗೊರೆ

ಹುಳಿಯಾರು  ಪಟ್ಟಣದ ಎಂಟಿಎಸ್ ಟೆಲಿಕಾಮ್ ವತಿಯಿಂದ ಎಂಪಿಎಸ್ ಶಾಲಾವರಣದಲ್ಲಿ ಭಾನುವಾರ ಸಾರ್ವಜನಿಕರಿಗೆ ಉಚಿತ ಲಕ್ಕಿಡಿಪ್ ಕಾರ್ಯಕ್ರಮ ಆಯೋಜಿಸಿದ್ದು ಸ್ಥಳದಲ್ಲೇ ಉಡುಗೊರೆಗಳನ್ನು ವಿತರಿಸಲಾಯಿತು. ಹುಳಿಯಾರಿನ ಎಂಟಿಎಸ್ ಕೆಲಿಕಾಮ್ ವತಿಯಿಂದ ಭಾನುವಾರ ಎಂಪಿಎಸ್ ಶಾಲಾವರಣದಲ್ಲಿ ಸಾರ್ವಜನಿಕರಿಗಾಗಿ ಉಚಿತ ಲಕ್ಕಿಡಿಪ್ ಕಾರ್ಯಕ್ರಮ ನಡೆಸಲಾಯಿತು ಸಾರ್ವಜನಿಕರು ತಮ್ಮ ಮೊಬೆಲ್ ಸಂಖ್ಯೆಯನ್ನು ಒಂದು ಚೀಟಿಯಲ್ಲಿ ಬರೆದು ಬಾಕ್ಸ್ ನಲ್ಲಿ ಹಾಕಬೇಕು ನಂತರ ೩೦ ನಿಮಿಷಗಳಿಗೊಮ್ಮೆ ಸಾರ್ವಜನಿಕರಿಂದ ಬಾಕ್ಸ್ ನಲ್ಲಿದ್ದ ಚೀಟಿಯೊಂದನ್ನು ತೆಗೆಸಿ ಅದರಲ್ಲಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಅವರನ್ನು ತಮ್ಮ ಸ್ಟಾಲ್ ಹತ್ತಿರ ಕರೆಸಿಕೊಂಡು ಮತ್ತೊಂದು ಚೀಟಿ ತೆಗೆಸುವ ಮೂಲಕ ಬಗೆಬಗೆಯ ಉಡುಗೊರೆಗಳನ್ನು ವಿತರಿಸಿದರು. ಬೆಳಿಗ್ಗೆಯಿಂದ ನಡೆದ ಲಕ್ಕಿ ಡಿಪ್ ನಲ್ಲಿ ಮಕ್ಕಳು,ದೊಡ್ಡವರು ಸೇರಿದಂತೆ ಅಪಾರ ಮಂದಿ ಪಾಲ್ಗೊಂಡಿದ್ದು ವಾಚ್, ಬ್ಯಾಟರಿ,ವ್ಯಾನಿಟಿಬ್ಯಾಗ್, ಪ್ಲೇಟ್ ಸೇರಿದಂತೆ ಇನ್ನಿತ ಉಡುಗರೆಗಳನ್ನು ತಮ್ಮದಾಗಿಸಿಕೊಂಡರು. ಮೊಬೈಲ್ ನಂ ಮೂಲಕ ಅದೃಷ್ಟ ಪರೀಕ್ಷೆ ಹಾಗೂ ಉಡುಗೊರೆ ಎಂಬ ನಿಟ್ಟಿನಲ್ಲಿ ಈ ವಿನೂತ ಕಾರ್ಯಕ್ರಮ ಅಯೋಜಿಸಿದ್ದು , ಸಾರ್ವಜನಿಕರ ಖುಷಿಗಾಗಿ ನಡೆಸಿರುವುದಾಗಿ ಎಂಟಿಎಸ್ ಡಿಸ್ಟ್ರಿಬ್ಯೂಟರ್ ಹೆಚ್.ಬಿ.ಕಿರಣ್ ತಿಳಿಸುತ್ತಾರೆ. ಗಿಫ್ಟ್ ಪಡೆದ ಅನೇಕ ಮಂ ದಿ  ಅಶ್ಚರ್ಯದಿಂದ ಇದೇನಪ್ಪಾ ನಮ್ಮ ಮೊಬೈಲ್ ನಂ ಮೂಲಕ ನಮಗೆ ಬಹುಮಾನ

ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ

ಪ್ರಸ್ತುತ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಪೊಲೀಸ್ ಇಲಾಖೆ ಅಪರಾಧ ತಡೆಗಾಗಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಇದರ ಜೊತೆಗೆ ಅಪರಾಧಗಳನ್ನು ತಡೆಯುವಲ್ಲಿ ಸಾರ್ವಜನಿಕರ ಸಹಕಾರ ಪೊಲೀಸರಿಗೆ ಅತ್ಯಗತ್ಯವೆಂದು ಪೋಲಿಸ್ ಕಾನಸ್ಟೇಬಲ್ ರಂಗಸ್ವಾಮಿ ತಿಳಿಸಿದರು. ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಪೊಲೀಸ್ ಕಾನಸ್ಟೇಬಲ್ ರಂಗಸ್ವಾಮಿ ಜನರಿಗೆ ಅರಿವು ಮೂಡಿಸಿದರು. ಹುಳಿಯಾರು ಹೋಬಳಿ ಲಿಂಗಪ್ಪನಪಾಳ್ಯದ ಶ್ರೀರಾಮದೇವರ ಆವರಣದಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಭಾನುವಾರ ನಡೆದ ಸಭೆಯಲ್ಲಿ ಅವರು ಸಾರ್ವಜನಿಕರಿಗೆ ಅಪರಾಧ ತಡೆ ಬಗ್ಗೆ ಕೆಲ ಮಾಹಿತಿಗಳನ್ನು ನೀಡಿದರು. ನಗರ ಪ್ರದೇಶಗಳಲ್ಲದೆ ಗ್ರಾಮೀಣ ಪ್ರದೇಶದಲ್ಲೂ ಸಹ ಅನೇಕ ಅಪರಾಧ ಪ್ರಕರಣಗಳು ಘಟಿಸುತ್ತಿದ್ದು, ಹಳ್ಳಿಗಳ ಜನ ತಮಗೆ ತಿಳಿಯದೇ ಮೋಸಕ್ಕೆ ಬಲಿಯಾಗಿ ತಮ್ಮ ಒಡವೆ,ಹಣ ಸೇರಿದಂತೆ ಇನ್ನಿತ ವಸ್ತುಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು. ಹಳ್ಳಿಯಲ್ಲಿ ಯಾರಾದರೂ ಅಪರಿಚಿತರು ಕಂಡುಬಂದರೆ ಕೂಡಲೇ ಠಾಣೆ ಸುದ್ದಿಮುಟ್ಟಿಸುವಂತೆ ಹಾಗೂ ಯಾರೋ ಅಪರಿಚಿತರು ತಮ್ಮ ಒಡವೆಗಳನ್ನು ಪಾಲಿಶ್ ಮಾಡಿಕೊಡುತ್ತೇವೆ ಎಂದು ತಮ್ಮನ್ನು ಮರುಳು ಮಾಡುತ್ತಾರೆ ಅಂತಹವರ ಮೇಲೋ ಸಹ ಎಚ್ಚರದಿಂದರಬೇಕು ಎಂದರು. ಮನೆಯ ಯಜಮಾನರು ಇಲ್ಲದ ವೇಳೆ ತಮ್ಮ ಸಂಬ

ಶ್ರದ್ಧಾಭಕ್ತಿಯಿಂದ ನಡೆದ ಅಯ್ಯಪ್ಪನ ಪಡಿಪೂಜೆ

ಹುಳಿಯಾರು ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿವತಿಯಿಂದ ಅಯ್ಯಪ್ಪನ ಸನ್ನಿದಾನದಲ್ಲಿ ಶುಕ್ರವಾರ ಸಂಜೆ ೮ ನೇ ವರ್ಷದ ಪಡಿಪೂಜೆ ಹಾಗೂ ಸ್ವಾಮಿಯ ಉಯ್ಯಾಲೋತ್ಸವ ಅಪಾರ ಸಂಖ್ಯೆಯ ಮಾಲಾಧಾರಿಸ್ವಾಮಿಗಳು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಹುಳಿಯಾರಿನ ಅಯ್ಯಪ್ಪನ ಸನ್ನಿಧಿಯಲ್ಲಿ ಪಡಿಪೂಜೆ ಅಂಗವಾಗಿ ಸ್ವಾಮಿಯನ್ನು ಕದಳಿ ಮಂಟಪದಲ್ಲಿ ಕುಳ್ಳಿರಿಸಿ ಹೂವಿನ ಅಲಂಕಾರ ಮಾಡಿರುವುದು. ಹುಳಿಯಾರಿನ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿವತಿಯಿಂದ ಪಡಿಪೂಜೆ ಅಂಗವಾಗಿ ದೇವಾಲಯದಲ್ಲಿನ ೧೮ ಮೆಟ್ಟಿಲುಗಳನ್ನು ವಿಶೇಷವಾಗಿ ಅಲಂಕರಿಸಿ ಪೂಜಿಸಿರುವುದು. ಪಡಿಪೂಜೆಯ ಅಂಗವಾಗಿ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಲ್ಲದೆ, ಸನ್ನಿದಾನದಲ್ಲಿರುವ ೧೮ ಮೆಟ್ಟಿಲುಗಳ ಮೇಲೆ ೧೮ ಕಳಸಗಳನ್ನು ಪ್ರತಿಷ್ಠಾಪಿಸಿ ಹೂಗಳಿಂದ ಅಲಂಕರಿಸಿ ಪೂಜೆ ನಡೆಸಲಾಯಿತು. ನಂತರ ಆ ಕಳಸಗಳಿಂದ ಸ್ವಾಮಿಗೆ ಅಭಿಷೇಕ ನಡೆದು, ಬಾಳೆದಿಂಡಿನಿಂದ ಮಾಡಿದ್ದ ಕದಳಿ ಅಕಂಕಾರ ಮಾಡಿಲಾಗಿತ್ತು. ದೀಪಾರಾಧನೆ , ಈಡುಗಾಯಿ ಹೊಡೆದು, ಕರ್ಪೂರ ಹಚ್ಚಿ ಮಹಾಮಂಗಳಾರತಿ ನಡೆಸಿದರು. ಮುಖ್ಯಪ್ರಾಣ ಭಜನಾಮಂಡಳಿಯವರು ಭಜನೆ ನಡೆಸಿಕೊಟ್ಟರು. ಪಡಿಪೂಜೆ ಹಾಗೂ ಮಂಡಲ ಪೂಜೆ ವಿಶೇಷವೆಂದರೆ ಮಾಲಾಧಾರಣೆ ಪ್ರಾರಂಭವಾಗಿ ಅಂದಿನಿಂದ ತಾ.೨೬ರ ಶುಕ್ರವಾರಕ್ಕೆ ಒಟ್ಟು ೪೮ ದಿನಗಳಾಗಿದ್ದು ಒಂದು ಮಂಡಲವಾಗಿದೆ. ಅಯ್ಯಪ್ಪನ ಮೂಲಸ್ಥಾನ ಶಬರಿಮಲೆಯಲ್ಲೂ ಸಹ ವಿಶೇಷ ಪೂಜೆ ನಡೆ

ಆಹಾರ ಸರಬರಾಜು ನಿಗಮದ ನಿರ್ಲಕ್ಷ : ರಾಗಿ ಖರೀದಿ ಕೇಂದ್ರ ತೆರೆಯುವಲ್ಲಿ ವಿಳಂಬ ಜಾರಿಯಾಗದ : ಜಿಲ್ಲಾಧಿಕಾರಿ ಅದೇಶ

ವರದಿ: ಡಿ.ಆರ್.ನರೇಂದ್ರಬಾಬು ----------- ಹುಳಿಯಾರು: ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕನಿಷ್ಠ ಬೆಂಬಲಬೆಲೆ ಯೋಜನೆಯಡಿಯಲ್ಲಿ ಕ್ವಿಂಟಾಲ್ ಗೆ ೨೦೦೦ದಂತೆ ಖರೀದಿ ಮಾಡಬೇಕಿದ್ದ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ಅಧಿಕಾರಿಗಳ ನಿರ್ಲಕ್ಷತನದಿಂದ ರಾಗಿ ಖರೀದಿ ಕೇಂದ್ರ ಸ್ಥಾಪನೆ ಮರೀಚಿಕೆಯಾಗಿದ್ದು ಖರೀದಿ ಕೇಂದ್ರ ಪ್ರಾರಂಭವಾಗುತ್ತದೋ ಇಲ್ಲವೋ ಎಂಬಂತಾಗಿದೆ. ಹುಳಿಯಾರಿನ ಎಪಿಎಂಸಿ ಕಛೇರಿಯಲ್ಲಿ ರಾಗಿ ಖರೀದಿ ಕೇಂದ್ರ ತೆರೆದಿದೆ ಎಂದು ತಿಳಿಸುವ ಬ್ಯಾನರ್ . ರಾಗಿ ಬೆಲೆ ಕುಸಿತದ ಹಿನ್ನಲೆಯಲ್ಲಿ ಮಧ್ಯ ಪ್ರವೇಶಿಸಿದ ಸರ್ಕಾರ ಉತ್ತಮ ಗುಣಮಟ್ಟದ ರಾಗಿಗೆ ಪ್ರತಿಕ್ವಿಂಟಾಲ್ ಗೆ ೧೫೫೦ ಹಾಗೂ ಪ್ರೋತ್ಸಾಹ ಧನ ೪೫೦ರೂ ಸೇರಿ ಪ್ರತಿಕ್ವಿಂಟಾಲ್ ಗೆ ಒಟ್ಟು ೨೦೦೦ ದರದಂತೆ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ಮೂಲಕ ಖರೀದಿ ಮಾಡುವುದಾಗಿ ತಿಳಿಸಿತ್ತು. ಇದೇ ಡಿಸೆಂಬರ್ ೧೫ ರಿಂದ ಜಿಲ್ಲೆಯ ತುಮಕೂರು , ಗುಬ್ಬಿ,ಕುಣಿಗಲ್, ತುರುವೇಕೆರೆ,ತಿಪಟೂರು,ಚಿಕ್ಕನಾಯಕನಹಳ್ಳಿ ಮತ್ತು ಹುಳಿಯಾರು ಎಪಿಎಂಸಿಗಳಲ್ಲಿ ಖರೀದಿ ಕೇಂದ್ರ ಸ್ಥಾಪಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಅಂದಿನಿಂದ ಇದುವರೆಗೂ ಖರೀದಿ ಕೇಂದ್ರದ ಸ್ಥಾಪನೆಗೆ ಜಿಲ್ಲಾಧಿಕಾರಿಗಳಾಗಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳಾಗಲಿ ಈ ಬಗ್ಗೆ ಮೌನವಹಿಸಿರುವುದು ರೈತರ ಅಸಹನೆಗೆ ಕಾರಣವ

ಕೃಷಿ ಮಾರುಕಟ್ಟೆ ಆಡಳಿತ ಮಂಡಳಿಯ ಅಧ್ಯಯನ ಪ್ರವಾಸ

ಹುಳಿಯಾರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಸಹಕಾರ್ಯದರ್ಶಿ ಸೇರಿದಂತೆ ಒಟ್ಟು ೧೭ ಮಂದಿ ತಂಡ ಭಾರತ ದರ್ಶನ ಯೋಜನೆಯಡಿ ಉತ್ತರ ಭಾರತದ ವಿವಿಧ ಭಾಗಗಳಿಗೆ ಇದೇ ೨೨ರಂದು ಪ್ರವಾಸ ತೆರಳಿದ್ದಾರೆ. ಹುಳಿಯಾರು ಎಪಿಎಂಸಿ ಅಧ್ಯಕ್ಷ ಹಾಗೂ ಸದಸ್ಯರ ತಂಡ ಕೃಷಿ ಅಧ್ಯಯ ಪ್ರವಾಸದಲ್ಲಿ ದೆಹಲಿಯಲ್ಲಿ ಸಂಸದ ಮುದ್ದಹನುಮೇ ಗೌಡ.ಅವರನ್ನು ಭೇಟಿ ಮಾಡಿರುವುದು. ವಿವಿಧ ರಾಜ್ಯಗಳ ಕೃಷಿ ಉತ್ಪನ್ನಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ೧೫ ದಿನಗಳ ಪ್ರವಾಸ ಕೈಗೊಂಡಿದ್ದು,ತಮ್ಮ ಅಧ್ಯಯನಪ್ರವಾಸದಲ್ಲಿ ಉತ್ತರ ಭಾರತದ ವಿವಿಧ ರಾಜ್ಯದಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಖುದ್ದು ಭೇಟಿ ನೀಡಿ ಅಲ್ಲಿ ನಡೆಯುವ ವ್ಯಾಪಾರ ವಹಿವಾಟು ಹಾಗೂ ಅಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಎಪಿಎಂಸಿ ಅಧ್ಯಕ್ಷ ಸಣ್ಣಪ್ಪ ನೇತೃತ್ವದ ತಂಡ ದೆಹಲಿ,ಚಂಡೀಗಡ, ಮನಾಲಿ,ಧರ್ಮಶಾಲಾ,ಅಮೃತಸರ, ಆಗ್ರಾ ,ಜೈಪುರ,ರೂರ್ಕಿ,ಜಮ್ಮು,ಬಿಲ್ಲಾಸ್ ಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಿದ್ದಾರೆ. ಉಪಾಧ್ಯಕ್ಷೆ ದ್ರಾಕ್ಷಾಯಣಮ್ಮ, ನಿರ್ದೇಶಕರಾದ ಸಿದ್ರಾಮಯ್ಯ,ಶಿವರಾಜ್,ಸಿಂಗದಳ್ಳಿ ರಾಜ್ ಕುಮಾರ್,ಶಾಂತಕುಮಾರ್, ಸೋಮಶೇಖರಯ್ಯ, ಶಿವಕುಮಾರ್,ರುದ್ರೇಶ್, ಭವ್ಯ ಸೇರಿದಂತೆ ಇತರರು ಪ್ರವಾಸದಲ್ಲಿ ಪಾಲ್ಗೊಂಡಿದ್ದಾರೆ.

ವಿದ್ಯಾವಾರಿಧಿ ಶಾಲೆಯಲ್ಲಿ ಶ್ರೀನಿವಾಸ ರಾಮಾನುಜನ್ ದಿನಾಚರಣೆ

ಹುಳಿಯಾರು  ಪಟ್ಟಣದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅವರ ಹುಟ್ಟುಹಬ್ಬದ ಅಂಗವಾಗಿ ನ್ಯಾಷನಲ್ ಮ್ಯಾಥಮಿಟಿಕ್ಸ್ ಡೇ ಆಚರಣೆಯನ್ನು ನಡೆಸಲಾಯಿತು. ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಹುಟ್ಟುಹಬ್ಬದ ಅಂಗವಾಗಿ ನ್ಯಾಷನಲ್ ಮ್ಯಾಥಮಿಟಿಕ್ಸ್ ಡೇ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್, ಕಾರ್ಯದರ್ಶಿ ಕವಿತಾಕಿರಣ್,ಪ್ರಾಚಾರ್ಯ ರವಿ ಇದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್ ಮಾತನಾಡಿ, ಶ್ರೀನಿವಾಸ ರಾಮಾನುಜನ್ ಅವರು ಒಬ್ಬ ಉತ್ತಮ ಗಣಿತಜ್ಞರಾಗಿದ್ದು ತಮ್ಮದೇ ಆದ ಕೊಡುಗೆ ನೀಡಿ ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಇಂತಹ ವ್ಯಕ್ತಿಗಳ ಆದರ್ಶವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಪಾಲಿಸಬೇಕು ಎಂದರು. ರಾಮಾನುಜನ್ ಅವರ ಸಾಧನೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಅವರ ಹುಟ್ಟುಹಬ್ಬದ ದಿನವನ್ನು ರಾಷ್ಟ್ರೀಯ ಗಣಿತ ದಿನವೆಂದು ಆಚರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು. ಗಣಿತ ಶಿಕ್ಷಕಿ ಪುಷ್ಟ ಮಾತನಾಡಿ ರಾಮಾನುಜನ್ ಅವರು ಗಣಿತವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರ ಪರಿಣಾಮವಾಗಿ ಅವರು ಗಣಿತದಲ್ಲಿ ಸಾಧನೆ ಮಾಡಲು ಸಹಕಾರಿಯಾಯಿತು ಎಂದರಲ್ಲದೆ, ಅವರ ಜೀವನದ ಬಗ್ಗೆ ವಿವರವಾಗಿ ತಿಳಿಸಿದರು. ಗಣಿತ ವಿಷಯದಲ್ಲಿ ಬರುವ ಲೆಖ್ಖ, ಸೂತ್ರಗಳ

ಅಯ್ಯಪ್ಪಸ್ವಾಮಿ ಪಡಿ ಪೂಜೆ

ಹುಳಿಯಾರು ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿವತಿಯಿಂದ ಅಯ್ಯಪ್ಪನ ಸನ್ನಿದಾನದಲ್ಲಿ ತಾ.೨೬ ಶುಕ್ರವಾರ ಸಂಜೆ ೬ ಕ್ಕೆ ೮ ನೇ ವರ್ಷದ ಪಡಿಪೂಜಾ ಕಾರ್ಯ ನಡೆಯಲಿದೆ. ಪಡಿಪೂಜೆ ಅಂಗವಾಗಿ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಹಾಗೂ ೧೮ ಮೆಟ್ಟಿಲುಗಳಿಗೂ ಸಹ ಪೂಜೆ ಸಲ್ಲಿಲಿದ್ದು, ಗೋಪಾಲ್ ಸ್ವಾಮಿ, ದಾನಿಸ್ವಾಮಿ ಹಾಗೂ ಭವಾನಿ ರಮೇಶ್ ಸ್ವಾಮಿ ಅವರುಗಳ ಮಾರ್ಗದರ್ಶನದಲ್ಲಿ ಭಜನೆ,ಅಭಿಷೇಕ,ಪುಷ್ಪಾಲಂಕಾರ, ದೀಪಗಳನ್ನು ಹಚ್ಚುವುದು,ಈಡುಗಾಯಿ ಸೇವೆ,ಕರ್ಪೂರ ಸೇವೆ ಹಾಗೂ ಮಹಾಮಂಗಳಾರತಿ ಸೇವೆ ನಡೆಯಲಿದೆ.. ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪನ ಭಕ್ತಾಧಿಗಉ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಹಾಗೂ ಅಗಮಿಸಿದವರಿಗಾಗಿ ಅನ್ನ ಸಂತರ್ಪಣೆ ಏರ್ಪಡಿಸಿರುವುದಾಗಿ ಸಮಿತಿಯವರು ಕೋರಿದ್ದಾರೆ.

ಹೂತಿಟ್ಟ ಶವ ಹೊರ ತೆಗೆದು ಶವಪರೀಕ್ಷೆ

ಕೊಲೆ ದೂರಿನ ಮೇರೆಗೆ ಹೂತಿದ್ದ ಶವವನ್ನು ಹೊರತೆಗೆದು ಪರೀಕ್ಷೆಗೆ ಒಳಪಡಿಸಿದ ಘಟನೆ ಸಮೀಪದ ಬರಗೀಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ಅಲ್ಲಾಭಕ್ಷಿ (೩೫) ಕಳೆದ ೧೯ ರಂದು ಮೃತ ಪಟ್ಟಿದ್ದು, ಬಂಧುಬಳಗ ಹಾಗೂ ಸಂಬಂಧಿಕರ ಭಾಗವಹಿಸುವಿಕೆಯೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಆದರೆ ಮೃತನ ತಂದೆ ಅಮೀರ್ ಜಾನ್ ಗೆ ಸಾವಿನ ಬಗ್ಗೆ ಕೆಲವು ಅನುಮಾನಗಳು ಹುಟ್ಟಿಕೊಂಡಾಗ ಶವದ ಪರೀಕ್ಷೆ ನಡೆಸುವಂತೆ ಹಂದನಕೆರೆ ಪೋಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ತಿಪಟೂರು ಉಪವಿಭಾಗಾಧಿಕಾರಿ ಸಿಂಧು ಅವರ ಸಮ್ಮುಖದಲ್ಲಿ ವಿಧಿವಿಜ್ಞಾನ ಕೇಂದ್ರದ ವೈದ್ಯ ರುದ್ರಮುನಿ ಶವ ಹೊರತೆಗೆದು ಪರೀಕ್ಷೆ ಬೇಕಾದ ವಸ್ತುಗಳನ್ನು ಕೊಂಡೈದಿದ್ದಾರೆ. ಸ್ಥಳದಲ್ಲಿ ಸಿಪಿಐ ಜಯಕುಮಾರ್,ಹಂದನಕೆರೆ ಪಿಎಸೈ ಸುನಿಲ್ , ಹಂದನಕೆರೆ ಹೋಬಳಿ ಕಂದಾಯ ತನಿಖಾಧಿಕಾರಿ ಪಾಪಣ್ಣ ಹಾಗೂ ಇತರರು ಹಾಜರಿದ್ದರು. 

ಅಂಗಡಿ ತೆರವಿಗೆ ಲಭಿಸಿತು ಮತ್ತೊಂದು ತಿಂಗಳ ಕಾಲಾವಕಾಶ

ಹುಳಿಯಾರು  ಪಟ್ಟಣದ ಬಸ್ ನಿಲ್ದಾಣದ ಕೆರೆ ಅಂಗಳದಲ್ಲಿದ್ದ ಅನಧೀಕೃತ ಅಂಗಡಿಗಳ ತೆರವಿಗೆ ಜನವರಿ ೩೦ ರವರೆಗೆ ಜಿಲ್ಲಾಧಿಕಾರಿಗಳು ಕಾಲಾವಾಕಾಶ ನೀಡಿದ್ದು ಅಂಗಡಿದಾರರನ್ನು ಸ್ವಲ್ಪ ನಿರಾಳಮಾಡಿದೆ. ಅಂಗಡಿ ತೆರವಿಗೆ ಡಿಸೆಂಬರ್ ೨೪ ಕ್ಕೆ ಕಡೆ ದಿನವೆಂದು ಕಂದಾಯ ಇಲಾಖೆಯಿಂದ ನೋಟಿಸ್ ನೀಡಿದ್ದರ ಪರಿಣಾಮವಾಗಿ ಅಂಗಡಿದಾರರು ಆತಂಕಕ್ಕೊಳಗಾಗಿ ಕೆಲ ಅಂಗಡಿಯವರು ಅಂಗಡಿ ತೆರವು ಮಾಡಲು ಮುಂದಾಗಿದ್ದರೆ, ಮೆತ್ತೆ ಕೆಲ ಅಂಗಡಿಯವರು ಬುಧವಾರದಂದು ಸಂಸದ ಮುದ್ದಹನುಮೇಗೌಡರನ್ನು ಭೇಟಿ ಮಾಡಿ ಅವರೊಂದಿಗೆ ಮಾತನಾಡಿ ಸಂಸದ ಜೊತೆಯೇ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ತಮಗೆ ಆರು ತಿಂಗಳ ಕಾಲಾವಾಕಾಶ ಕೋರಿ ಮನವಿ ಸಲ್ಲಿಸಿದ್ದರು. ಮನವಿ ಸ್ವೀಕರಿಸಿದ ಡಿಸಿಯವರು ಜನವರಿ ೩೦ರವರೆ ಗಡುವು ನೀಡಿ, ಆದೇಶಪತ್ರವನ್ನು ತಾಲ್ಲೂಕು ಕಛೇರಿಗೆ ರವಾನಿಸಿದ್ದಾರೆಂದು ಮೂಲಗಳು ತಿಳಿಸಿವೆ. 

ಐಎಎಸ್ ಹಾಗೂ ಕೆಎಎಸ್ ಪರೀಕ್ಷೆಗೆ ಹೆಚ್ಚು ಸಿದ್ದತೆ ಅತ್ಯಗತ್ಯ

ಪ್ರಸ್ತುತ ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧೆ ಹೆಚ್ಚಾಗಿದ್ದು ಒಂದು ಹುದ್ದೆ ಪಡೆಯಲು ಹರಸಾಹಸ ಪಡೆಯುವಂತಾಗಿದೆ, ಅದರಲ್ಲೂ ಐಎಎಸ್ ಹಾಗೂ ಕೆಎಎಸ್ ನಂತಹ ಆಡಳಿತಾತ್ಮಕ ಹುದ್ದೆಗಳನ್ನು ಪಡೆಯಬೇಕಾದರೆ ಪರೀಕ್ಷಾರ್ಥಿಗಳು ಹೆಚ್ಚಿನ ಸಿದ್ದತೆ ಮಾಡಿಕೊಳ್ಳುವುದು ಅತ್ಯಗತ್ಯವೆಂದು ಗದಗ ಡಯಟ್ ಕಾಲೇಜಿನ ಪ್ರಾಂಶುಪಾಲ ರವೀಂದ್ರಪಾಟೀಲ್ ತಿಳಿಸಿದರು. ಹುಳಿಯಾರಿನ ಬಸವಭವನದಲ್ಲಿ ವೀರಶೈವ ಸಮಾಜದ ವತಿಯಿಂದ ನಡೆದ ಮಾರ್ಗದರ್ಶಿ ಶಿಬಿರವನ್ನು ಡಾ|| ಕೆ.ಪಿ.ರಾಜಶೇಖರ್ ಉದ್ಘಾಟಿಸಿದರು.   ಹುಳಿಯಾರಿನಲ್ಲಿ ನಡೆದ ಮಾರ್ಗದರ್ಶನ ಶಿಬಿರದಲ್ಲಿ ಬೆಂಗಳೂರಿನ ಸಹಾಯಕ ಆಯುಕ್ತರಾದ ಎಸ್.ಈ.ರಾಜೀವ್ ಅವರನ್ನು ವೀರಶೈವ ಸಮಾಜದವತಿಯಿಂದ ಸನ್ಮಾನಿಸಲಾಯಿತು. ಹೋಬಳಿ ವೀರಶೈವ ಸಮಾಜ , ತಾಲ್ಲೂಕು ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘ , ಬಸವೇಶ್ವರ ಪತ್ತಿನ ಸಹಕಾರ ಸಂಘ, ಶಿವ ವಿವಿದೋದ್ದೇಶ ಸಹಕಾರಸಂಘ ಹಾಗೂ ಬಸವ ಸಮಿತಿವಯಿಂದ ಪಟ್ಟಣದ ಬಸವಭವನದಲ್ಲಿ ಗುರುವಾರ ಆಯೋಜಿಸಿದ್ದ ಉಚಿತ ಮಾರ್ಗದರ್ಶನ ಶಿಬಿರದಲ್ಲಿ ಅವರು ಮಾತನಾಡಿದರು. ಸರ್ಕಾರದ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳಿಸಿ ಉತ್ತೀರ್ಣರಾದರೆ ಮಾತ್ರ ಕೆಲಸ ಸಿಗಲಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅಭ್ಯರ್ಥಿಗಳು ಪರೀಕ್ಷೆ ಬರೆಯಲೆಂದು ಅರ್ಜಿ ಹಾಕುತ್ತಾರೇ ಹೊರತು ಅದಕ್ಕೆ ತಕ್ಕಂತೆ ಅಭ್ಯಾಸ ಮಾಡದೆ ಪರೀಕ್ಷೆಯಲ್ಲಿ ವಿಫಲರಾಗುತ್ತಿದ

ಅನಧಿಕೃತ ಅಂಗಡಿ ತೆರವು ಮುಂದುವರಿದ ಗೊಂದಲ : ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ಮುಂದಾಗಿರುವ ಕೆಲ ಅಂಗಡಿದಾರರು

ಹುಳಿಯಾರು  ಪಟ್ಟಣದ ಬಸ್ ನಿಲ್ದಾಣದ ಕೆರೆಜಾಗ ಒತ್ತುವರಿ ಮಾಡಿ ಕಳೆದ ಎರಡು ದಶಕಗಳಿಂದ ಅನಧಿಕೃತವಾಗಿ ಕಟ್ಟಿಕೊಂಡಿದ್ದ ಅಂಗಡಿಮುಂಗಟ್ಟು ತೆರವಿಗೆ ಬುಧವಾರದವರೆಗೆ ನೀಡಿದ್ದ ಅಂತಿಮ ಗಡುವು ಮುಗಿದಿದ್ದು, ಗಡುವಿನ ಸಮಯದೊಳಗೆ ಕೆಲವರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ತೆರವು ಮಾಡಿಕೊಳ್ಳಲು ಮುಂದಾದರೆ ಮತ್ತೆ ಕೆಲವರು ಸಂಸದರ ಮೂಲಕ ಜಿಲ್ಲಾಧಿಕಾರಿಗಳಿಗೆ ಒತ್ತಡ ತಂದು ಆರು ತಿಂಗಳ ಕಾಲಾವಧಿ ಕೋರಿರುವುದು ಗುರುವಾರ ಕಾರ್ಯಾಚರಣೆ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲಕ್ಕೆ ಆಸ್ಪದವಾಗಿದೆ. ಹುಳಿಯಾರು ಬಸ್ ನಿಲ್ದಾಣದ ಕೆಲ ಅಂಗಡಿದಾರರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ತೆರವು ಮಾಡುತ್ತಿರುವುದು. ಅಂಗಡಿ ತೆರವು ರಾಜಕೀಯಗೊಂಡು ಅಧಿಕಾರಿಗಳಿಗೆ ಜಟಿಲ ಸಮಸ್ಯೆಯಾಗಿ ಪರಿಗಣಿಸಿತ್ತು. ತೆರವಿಗೆ ಅನೇಕರ ಆಕ್ಷೇಪ ಸಹ ಕೇಳಿಬಂದಿತ್ತು. ಕಾರ್ಯಾಚರಣೆ ಬಗ್ಗೆ ಕಳೆದೆರಡು ತಿಂಗಳಿಂದ ಚರ್ಚೆ ನಡೆಯುತ್ತಲೇ ಇದ್ದು ಇದರ ತೆರವಿಗೆ ಖುದ್ದು ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳೇ ಬಂದು ನಿಲ್ಲಬೇಕು ಎಂಬ ಮಾತು ಸಹ ಕೇಳಿಬಂದಿದ್ದು ಕಾರ್ಯಾಚರಣೆ ಮುಂದೂಡುತ್ತಲೇ ಬರುತ್ತಿತ್ತು. ಇದೀಗ ಸುಪ್ರಿಂ ಕೋರ್ಟ್ ಆದೇಶ ಅಧಿಕಾರಿಗಳಿಗೆ ಆಸ್ತ್ರವಾಗಿ ಬಂದಿದ್ದು ಡಿಸೆಂಬರ್ ೨೪ಕ್ಕೆ ಗಡುವು ವಿಧಿಸಿ ಅಂಗಡಿದಾರರಿಗೆ ೨೪ ಗಂಟೆಯೊಳಗಾಗಿ ಅಂಗಡಿ ತೆರವು ಮಾಡುವಂತೆ,ಇಲ್ಲವಾದರೆ ತಾವೇ ತೆರವುಗೊಳಿಸುವುದಾಗಿ ತಿಳುವಳಿಕೆ ನೋಟೀಸ್ ನೀಡಲಾಗಿತ್ತು.

ವಚನಕಾರರ ಕಾಯಕತತ್ವ ಅಳವಡಿಸಿಕೊಳ್ಳಿ: ತ.ಶಿ.ಬಸವಮೂರ್ತಿ

ರಣ ಕಾಯಕತತ್ವ,ದಾಸೋಹತತ್ವ ಸರ್ವಸಮಾನತೆತತ್ವವನ್ನು ಅಳವಡಿಸಿಕೊಂಡು ಬಾಳುವುದರಿಂದ ಜೀವನದಲ್ಲಿ ಸಾರ್ಥಕತೆ ಸಿಗಲಿದೆ ಎಂದು ಕಸಾಪದ ಪಡಿಂತ್ ತ.ಶಿ.ಬಸವಮೂರ್ತಿ ಅವರು ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ಖಾಸಗಿ ಬಸ್ ಏಜೆಂಟರ್ ಸಂಘದ ಅಧ್ಯಕ್ಷ ಲೋಕೇಶಣ್ಣ ಅವರ ನಿವಾಸದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಯೋಜಿಸಿದ್ದ ಮನೆಮನೆಗಳಲ್ಲಿ ಪಾಕ್ಷಿಕ ಕವಿಕಾವ್ಯ ಗೋಷ್ಠಿ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಕುರಿತು ಅವರು ಉಪನ್ಯಾಸ ನೀಡಿದರು. ವಚನಸಾಹಿತ್ಯದ ಬಗ್ಗೆ ತಿಳಿಸುತ್ತಾ, ಆದ್ಯವಚನಕಾರರಾದ ಜೇಡರದಾಸಿಮಯ್ಯನ ಕರಿಯನಿತ್ತಡೆ ಒಲ್ಲೆ,ಸಿರಿಯನಿತ್ತಡೆ ಒಲ್ಲೆ ಎಂಬ ವಚನವನ್ನು ಉಲ್ಲೇಖಿಸಿ .ವಚನಕಾರರ ಕಾಯಕತತ್ವ,ಸರ್ವಸಮಾನತೆ, ದಾಸೋಹ,ಸ್ತ್ರೀಸ್ವಾತಂತ್ರ್ಯ ಸೇರಿದಂತೆ ಅವರ ನಡೆನುಡಿಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವೈ.ಜಿ.ಲಕ್ಷ್ಮಿನಾರಾಯಣ್ ಮಾತನಾಡಿ ಕಸಾಪದ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಕಸಾಪದ ಸದಸ್ಯರು ಕನ್ನಡ ನಾಡುನುಡಿಯ ಬಗ್ಗೆ ಪ್ರತಿಯೊಂದು ಮನೆಯಲ್ಲಿ ಎಲ್ಲರಿಗೂ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.ಇವರ ಈ ಕಾರ್ಯ ನಿರಂತರವಾಗಿರಲಿ ಎಂದು ಆಶಿಸಿದರು. ಶಾಂತಲಾ ತಂಡದವರು ಪ್ರಾರ್ಥಿಸಿ, ಲೋಕೇಶಣ್ಣ ಸ್ವಾಗತಿಸಿ ,ಶಿಕ್ಷಕ ಯಲ್ಲಪ್ಪ ನಿರೂಪಿಸಿ, ವಂದಿಸಿದರು.

ಸೈನ್ಯಕ್ಕೆ ಸೇರುವವರ ಸಂಖ್ಯೆ ಬೆರಳೆಣಿಕೆಯಷ್ಟು : ಗೋಪಿ

ದೇಶದ ಗಡಿಕಾಯುವುದರ ಮುಖಾಂತರ ದೇಶಸೇವೆಯಲ್ಲಿ ತೊಡಗಿಕೊಂಡಿರುವುದು ನನ್ನ ಜೀವನದ ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಆದರೆ ಪ್ರಸುತದಲ್ಲಿ ಸೈನ್ಯಕ್ಕೆ ಸೇರಲು ಯುವಪೀಳಿಗೆ ಮುಂದಾಗದಿರುವುದು ಹಾಗೂ ಕೋಟ್ಯಾಂತರ ಜನಸಂಖ್ಯೆಯಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸೈನ್ಯಕ್ಕೆ ಸೇರ್ಪಡೆಯಾಗುತ್ತಿರುವುದು ಖೇದದ ಸಂಗತಿಯೆಂದು ಇಂಡಿಯನ್ ಆರ್ಮಿಯಲ್ಲಿ ಕಳೆದ ೧೫ ವರ್ಷದಿಂದ ಯೋಧರಾಗಿ ಸೇವೆಯಲ್ಲಿರುವ ಹುಳಿಯಾರಿನ ಬಿ.ಆರ್.ಗೋಪಿನಾಯಕ್ ವಿಷಾದಿಸಿದರು. ಹುಳಿಯಾರಿನ ಕೆಪಿಟಿಸಿಎಲ್ ಕಛೇರಿಯಲ್ಲಿ ಅಯೋಜಿಸಿದ್ದ ಸಮಾರಂಭದಲ್ಲಿ ಇಂಡಿಯನ್ ಆರ್ಮಿಯ ಯೋಧ ಹುಳಿಯಾರಿನ ಗೋಪಿಅವರು ಮಾತನಾಡಿದರು. ಹುಳಿಯಾರಿನ ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ವತಿಯಿಂದ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಹುಳಿಯಾರಿನ ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ವತಿಯಿಂದ ಇಂಡಿಯನ್ ಆರ್ಮಿಯ ಯೋಧ ಹುಳಿಯಾರಿನ ಎಂ.ಆರ್.ಗೋಪಿ ಅವರನ್ನು ಸನ್ಮಾನಿಸಲಾಯಿತು. ಎಇಇ ರಾಜಶೇಖರ್, ಎಸ್.ಒ ಉಮೇಶ್ ನಾಯಕ್ ಹಾಗೂ ಮೂರ್ತಿ, ಸಹಾಯಕ ಇಂಜಿನಿಯರ್ ವಿಶ್ವನಾಥ್ ಹಾಗೂ ಇತರರಿದ್ದಾರೆ. ಸೈನ್ಯವೆಂದರೆ ಯಾರು ಭಯಪಡುವ ಅಗತ್ಯವಿಲ್ಲ ನಗರಪ್ರದೇಶದಲ್ಲಿ ಪೊಲೀಸರು ಯಾವರೀತಿ ಜನರನ್ನು ಕಾಯುತ್ತಾರೋ ಅದೇರೀತಿ ನಾವು ದೇಶದ ಗಡಿಯಲ್ಲಿ ದೇಶದೊಳಗೆ ಯಾರೊಬ್ಬರು ನುಸುಳದಂತೆ ಕಾಯುತ್ತಿರುತ್ತೇವೆ . ಪಿಯುಸಿ ತೇರ್ಗಡೆಯಾಗಿ ೨೨ ವಯಸ್ಸಿನ ಒಳಪಟ್ಟವರು, ಉತ್ತಮ ಆರೋಗ್ಯವ

ಜೂಜು : ೬ ಮಂದಿ ಸೆರೆ

ಹುಳಿಯಾರು ಹೋಬಳಿ ಬೋರನಕಣಿವೆ ಹತ್ತಿರ ಜೂಜಾಡುತ್ತಿದ್ದ ೬ ಮಂದಿಯನ್ನು ಬಂಧಿಸಿ ಪಣಕ್ಕಿಟ್ಟಿದ್ದ ೫೬೫೦ರೂ ಹಾಗೂ ಒಂದು ಟಾಟಾ ಸುಮೋ ವಾಹನವನ್ನು ಪೊಲೀಸರು ಸೋಮವಾರದಂದು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.      ಖಚಿತ ಮಾಹಿತಿ ಮೇರೆಗೆ ಸಿಪಿಐ ಜಯಕುಮಾರ್ ಮಾರ್ಗದರ್ಶನದಲ್ಲಿ ಪಿಎಸೈ ಘೋರ್ಪಡೆ ಅವರ ತಂಡ ಜೂಜು ಅಡ್ಡೆಯ ಮೇಲೆ ಸೋಮವಾರ ಸಂಜೆ ದಾಳಿ ನಡೆಸಿ ಜೂಜಾಡುತ್ತಿದ್ದ ಆರು ಜನರನ್ನು ಬಂಧಿಸಿದ್ದು, ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಹುಳಿಯಾರು:ಕಂದಾಯ ಇಲಾಖೆಯಿಂದ ಸರ್ವೆ : ೨೪ ಗಂಟೆಯೊಳಗಾಗಿ ಅಂಗಡಿ ತೆಗೆಯುವಂತೆ ನೋಟಿಸ್

ಹುಳಿಯಾರು ಪಟ್ಟಣದ ಬಸ್ ನಿಲ್ದಾಣದ ಕೆರೆ ಅಂಗಳದಲ್ಲಿರುವ ಒತ್ತುವರಿ ಜಾಗದಲ್ಲಿರುವ ಅಂಗಡಿಗಳ ಸರ್ವೆ ಕಾರ್ಯ ಮಂಗಳವಾರ ಉಪತಹಸೀಲ್ದಾರ್ ಸತ್ಯನಾರಾಯಣ್ ಹಾಗೂ ಆರ್.ಐ ಹನುಮಂತನಾಯ್ಕ್ ಅವರ ಸಮಕ್ಷಮದಲ್ಲಿ ನಡೆಯಿತು. ಒತ್ತುವರಿ ಮಾಡಿಕೊಂಡವರಿಗೆ ತಹಸೀಲ್ದಾರ್ ಅವರ ಆದೇಶದಂತೆ ಇಪ್ಪತ್ನಾಲ್ಕು ಘಂಟೆಯೊಳಗೆ ಅಂದರೆ ಬುಧವಾರ ಮಧ್ಯಾಹ್ನದೊಳಗಾಗಿ ತಮ್ಮ ಅಂಗಡಿಗಳನ್ನು ತೆಗೆಯುವಂತೆ ನೋಟಿಸ್ ಜಾರಿ ಮಾಡಲಾಯಿತು. ಸಚಿವರು ಸಣ್ಣ ನಿರಾವರಿ ಇಲಾಖೆಗೆ ನೀಡಿರುವ ಟಿಪ್ಪಣಿ ಪತ್ರ. ಕಂದಾಯ ಇಲಾಖೆಯ ಅಧಿಕಾರಿಗಳು ನೀಡಿರುವ ನೋಟಿಸ್ ಪತ್ರ. ತುಂಬಾ ಕುತೂಹಲ ಮೂಡಿಸಿದ್ದ ಸರ್ವೆ ಕಾರ್ಯ ಬೆಳಿಗ್ಗೆ ೧೦ ರಿಂದ ಪ್ರಾರಂಭವಾಗಿ ಮಧ್ಯಾಹ್ನದವರೆಗೂ ನಡೆಯಿತು. ಪಟ್ಟಣದ ಯೂಸೂಪ್ ಖಾನ್ ಪೆಟ್ರೋಲ್ ಬಂಕ್ ಹಾಗೂ ಒಣಕಾಲುವೆ ಕಡೆಯಿಂದ ಆಳತೆ ಪ್ರಾರಂಭಿಸಿ ಬಸ್ ನಿಲ್ದಾಣದ ಮೂಲಕ ಕೆರೆ ಏರಿಯ ತೂಬಿನವರೆಗೆ ಆಳತೆ ನಡೆಸಿ ಕೆರೆಯ ಗಡಿ ಗುರ್ತಿಸಲಾಯಿತು. ಅಲ್ಲದೆ ಶಂಕರಪುರ ಬಡಾವಣೆ ಭಾಗದಲ್ಲಿನ ಕೆರೆ ಅಂಗಳವನ್ನು ಸಹ ಸರ್ವೆ ಮಾಡಿ ಗಡಿ ಗುರ್ತಿಸಲಾಯಿತು. ಹುಳಿಯಾರು ಕೆರೆಯು ಸದ್ಯದ ಸರ್ವೆಯಂತೆ ಸರಿಸುಮಾರು ೩೮ ರಿಂದ ೪೦ ಎಕರೆಯಷ್ಟು ಒತ್ತುವರಿಯಾಗಿದ್ದು ಕೋಟ್ಯಾಂತರ ರೂಪಾಯಿ ಬೆಲೆ ಬಾಳಲಿದೆ ಎನ್ನಲಾಗಿದೆ.ಸಂಪೂರ್ಣ ಸರ್ವೆ ಹಾಗೂ ತೆರವು ಮುಗಿದ ಬಳಿಕವಷ್ಟೆ ನಿಖರ ಮಾಹಿತಿ ದೊರೆಯಲಿದೆ ಎಂದು ಸರ್ವೆಯರ್ ಬಸವರಾಜ್ ತಿಳಿಸಿದರು. ಸಚಿವರ ಪತ್ರ: ಕೆರೆಅಂಗಳದ ಅಂಗಡ

ಅಮವಾಸ್ಯೆ ಅಂಗವಾಗಿ ಭಜನಾಕಾರ್ಯ

ಹುಳಿಯಾರು ಹೋಬಳಿ ದೊಡ್ಡಬಿದರೆ ಕರಿಯಮ್ಮ ದೇವಿ ದೇವಸ್ಥಾನದಲ್ಲಿ ಅಮವಾಸ್ಯೆ ಪೂಜೆಯ ಅಂಗವಾಗಿ ಮುಖ್ಯಪ್ರಾಣ ಭಜನಾ ಮಂಡಳಿಯವರು ಸೋಮವಾರ ರಾತ್ರಿಯಂದು ಭಜನಾಕಾರ್ಯ ನಡೆಸಿಕೊಟ್ಟರು. ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮದ ಕರಿಯಮ್ಮ ದೇವಾಲಯದಲ್ಲಿ ಅಮವಾಸ್ಯೆ ಅಂಗವಾಗಿ ಮುಖ್ಯಪ್ರಾಣ ಭಜನಾ ತಂಡದವರು ಭಜನಾ ಕಾರ್ಯ ನಡೆಸಿಕೊಟ್ಟರು. ಅಮವಾಸ್ಯೆ ಅಂಗವಾಗಿ ಗ್ರಾಮದ ಯುವಕ ಸಂಘದಿಂದ ಅಮ್ಮನವರಿಗೆ ವಿಶೇಷ ಪೂಜೆ ನಡೆಯಿತು. ಡಿ.ಕೆ..ರಮೇಶ್ ಅವರ ಸೇವಾರ್ಥದಲ್ಲಿ ಮಂಗಳವಾರ ರಾತ್ರಿ ಭಜನಾಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಬಸ್ಟಾಂಡ್ ಹೋಟಲ್ ಗೋಪಾಲ್,ಸತೀಶ್,ನಾಗಣ್ಣ,ಬಟ್ಟೆಅಂಗಡಿ ಬಾಬು,ಭವಾನಿ ರಮೇಶ್,ಹಾರ್ಮೋನಿಯಂ ಮಾಸ್ಟರ್ ಹೊಸಳ್ಳಿ ಶ್ರೀನಿವಾಸ್,ತಬಲ ಕಾಟಪ್ಪನವರು ಸುಶ್ರಾವ್ಯವಾಗಿ ಹಾಡಿದ ಭಕ್ತಿಗೀತೆಗಳು,ದೇವರನಾಮ,ದಾಸರ ಪದಗಳ ಭಜನೆ ಭಕ್ತರ ಮನಸೂರೆಗೊಳಿಸಿತು. ದೇವಾಲಯ ಸಮಿತಿಯವರು ಆಗಮಿಸಿದ ಭಜನಪ್ರಿಯರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಟಿಪ್ಪು ಸಂಘದವತಿಯಿಂದ ೨೦೧೫ರ ಕ್ಯಾಲೆಂಡರ್ ಬಿಡುಗಡೆ

ಹುಳಿಯಾರು ಪಟ್ಟಣದ ಟಿಪ್ಪುಸುಲ್ತಾನ್ ಪತ್ತಿನ ಸಹಕಾರ ಸಂಘದವತಿಯಿಂದ ನೂತನ ೨೦೧೫ರ ಕ್ಯಾಲೆಂಡರನ್ನು ಸಂಘದ ಕಛೇರಿಯಲ್ಲಿ ಅಧ್ಯಕ್ಷ ಫಯಾಜ್ ಮಂಗಳವಾರ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು ಟಿಪ್ಪು ಸುಲ್ತಾನ್ ಸಂಘದಿಂದ ಹಿಂದುಳಿದ ವರ್ಗದವರಿಗೆ ಸಾಲಸೌಲಭ್ಯ ನೀಡುತ್ತಿದ್ದು ಇದರಿಂದ ಹೆಚ್ಚಿನ ಅನುಕೂಲವಾಗಿದೆ ಎಂದರು. ಪ್ರಾರಂಭದಿಂದ ಇದುವರೆಗೂ ಸಂಘ ಉತ್ತಮವಾಗಿ ,ಲಾಭದಾಯಕವಾಗಿ ವಹಿವಾಟು ನಡೆಸುತ್ತಿದೆ ಎಂದರು.   ಹುಳಿಯಾರಿನ ಟಿಪ್ಪುಸುಲ್ತಾನ್ ಪತ್ತಿನ ಸಹಕಾರ ಸಂಘದವತಿಯಿಂದ ನೂತನ ೨೦೧೫ರ ಕ್ಯಾಲೆಂಡರನ್ನು ಸಂಘದ ಕಛೇರಿಯಲ್ಲಿ ಅಧ್ಯಕ್ಷ ಫಯಾಜ್ ಮಂಗಳವಾರ ಬಿಡುಗಡೆ ಮಾಡಿದರು. ಸಂಘದ ನಿರ್ದೇಶಕ ಇಮ್ರಾಜ್ ಮಾತನಾಡಿ, ಸಂಘದವತಿಯಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದು ಸಾಲ ಪಡೆದವರು ನಿಗದಿತ ಸಮಯದಲ್ಲಿ ಮರುಪಾವತಿಸಿದರೆ ಪುನ: ಸಾಲ ನೀಡಲು ಅನುಕೂಲವಾಗುತ್ತದೆ ಎಂದರು. ಮುಂದಿನ ವರ್ಷದಿಂದ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರಕಾರದ ವತಿಯಿಂದಲೇ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿರುವುದು ಹರ್ಷದ ಸಂಗತಿಯಾಗಿದ್ದು, ಮುಸ್ಲಿಂ ಸಮುದಾಯದವರ ಬಹುದಿನದ ಬೇಡಿಕೆಯನ್ನು ಮನಗಂಡ ಸರ್ಕಾರ ಇದೀಗ ಇಂತಹ ತೀರ್ಮಾನ ಕೈಗೊಂಡಿರುವುದು ನಮ್ಮ ಬೇಡಿಕೆಗೆ ಸಂದ ಪ್ರತಿಫಲವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಅಪ್ಸರ್,ನಿರ್ದೇಶಕರಾದ ನಯಾಜ್,ಇರ್ಪಾನ್, ಕಾರ್ಯದರ್ಶಿ ಮು

ಹುಳಿಯಾರು: ಅಂಗಡಿದಾರರ ಹಾಗೂ ನಿವಾಸಿಗಳಲ್ಲಿ ಹೆಚ್ಚಿದ ದುಗುಡ : ಮಂಗಳವಾರದಿಂದ ಕೆರೆ ಅಂಗಳದಲ್ಲಿನ ಮನೆ,ಅಂಗಡಿ ಸರ್ವೆಕಾರ್ಯ ಶುರು

ಈಗಾಗಲೇ ಹುಳಿಯಾರು ಕೆರೆ ಒತ್ತುವರಿ ತೆರವು ಕಾರ್ಯ ಪ್ರಾರಂಭವಾಗಿದ್ದು ತೆರವು ಕಾರ್ಯಾಚರಣೆ ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು, ಕೇಶವಾಪುರ,ವಳಗೆರೆಹಳ್ಳಿ ಭಾಗದಲ್ಲಿ ತೆರವು ಮುಗಿಯುವ ಹಂತದಲ್ಲಿದ್ದು , ಮಂಗಳವಾರದಿಂದ ಶಂಕರಪುರ ಭಾಗದಲ್ಲಿರುವ ಕೆರೆಅಂಗಳದಲ್ಲಿರುವ ಮನೆಗಳು ಹಾಗೂ ಬಸ್ ನಿಲ್ದಾಣದಲ್ಲಿರುವ ಅಂಗಡಿಗಳ ಸರ್ವೆಕಾರ್ಯ ನಡೆಯಲಿದೆ. ಹುಳಿಯಾರು ಬಸ್ ನಿಲ್ದಾಣದಲ್ಲಿ ಕೆರೆ ಒತ್ತುವರಿ ಜಾಗದಲ್ಲಿರುವ ಅಂಗಡಿಗಳು. ಕಳೆದ ಎರಡು ತಿಂಗಳಿನಿಂದಲೂ ಕೆರೆ ಒತ್ತುವರಿ ಮಾಡಿ ಕಟ್ಟಿರುವ ಮನೆ ಹಾಗೂ ಅಂಗಡಿಗಳ ತೆರವಿನ ಬಗ್ಗೆ ದಿನಕ್ಕೊಂದು ವದಂತಿಗಳು ಕೇಳಿಬಂದು ಇದೀಗ ಅಂತಿಮ ತೆರೆ ಬೀಳುವ ಲಕ್ಷಣ ಕಂಡುಬರುತ್ತಿದ್ದು ಅಂಗಡಿದಾರರ ಹಾಗೂ ನಿವಾಸಿಗಳ ದುಗುಡ ಹೆಚ್ಚಾಗುವಂತೆ ಮಾಡಿದೆ. ಹುಳಿಯಾರು ಸರ್ವೆ ನಂ.೧ರಲ್ಲಿ ಹುಳಿಯಾರು ಅಮಾನಿಕೆರೆ ಎಂದು ೪೮೦ ಎಕರೆ ೩೮ ಗುಂಟೆ ಕೆರೆ ಜಾಗ ಗುರ್ತಿಸಲಾಗಿದೆ. ಸಾಕಷ್ಟು ವಿಸ್ತೀರ್ಣವಾಗಿರುವ ಈ ಕೆರೆ ತುಂಬಿ ಹಲವು ದಶಕಗಳೇ ಕಳೆದಿದ್ದು, ನೀರಿನ ಹರಿವು ಇಲ್ಲದಂತಾಗಿ ಒತ್ತುವರಿಗೆ ಆಸ್ಪದವಾಗಿತ್ತು. ಕೇಶವಾಪುರ, ವಳಗೆರೆಹಳ್ಳಿ,ಶಂಕರಪುರ ಹಾಗೂ ಬಸ್ ನಿಲ್ದಾಣದ ಸೇರಿದಂತೆ ಒಟ್ಟು 45 ಎಕರೆ ಪ್ರದೇಶದಷ್ಟು ಜಾಗ ಒತುವರಿಯಾಗಿದ್ದು, ಜಮೀನು , ಇಟ್ಟಿಗೆ ಫ್ಯಾಕ್ಟರಿ,ಮನೆ ಹಾಗೂ ಅಂಗಡಿಗಳಿಗೆ ಬಳಕೆಯಾಗಿದೆ. ಈ ಹಿಂದೆ ನಡೆಸಿದ ಸಮೀಕ್ಷೆಯಂತೆ ಅಂಗಡಿ ಹಾಗೂ ಮನೆ ಸೇರಿ 199 ಮಂದಿಯ ಪಟ್ಟಿ ಮಾಡಲಾಗಿದ

ಕೃಷಿಗಾಗಿ ಪಡೆದ ಸಾಲವನ್ನು ಕೃಷಿಚಟುವಟಿಕೆಗಳಿಗೆ ಮಾತ್ರ ಬಳಸಿ: ಸಿಂಗದಹಳ್ಳಿ ರಾಜ್ ಕುಮಾರ್

ರೈತರ ಕೃಷಿ ಚಟುವಟಿಕೆಗಳಲ್ಲಿ ನೆರವಾಗುವ ದೃಷ್ಠಿಯಿಂದ ಸರ್ಕಾರ ರೈತರಿಗೆ ಸಾಲ ವಿತರಿಸುತ್ತಿದೆ. ಕೃಷಿಗಾಗಿ ಪಡೆದ ಸಾಲವನ್ನು ಇನ್ನಿತರ ಉದ್ದೇಶಕ್ಕೆ ಬಳಸಿ ವೆಚ್ಚಮಾಡುವ ಬದಲು ಕೃಷಿಕಾರ್ಯಕ್ಕೆ ಮಾತ್ರವೇ ಬಳಸಿಕೊಳ್ಳಿ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್ ಸಲಹೆ ನೀಡಿದರು. ಹುಳಿಯಾರು ಹೋಬಳಿ ಯಳನಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಸಾಲವಿತರಣಾ ಕಾರ್ಯಕ್ರಮದಲ್ಲಿ ಸಿಂಗದಹಳ್ಳಿ ರಾಜ್ ಕುಮಾರ್ ರೈತರಿಗೆ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲವಿತರಿಸಿದರು ಹುಳಿಯಾರು ಹೋಬಳಿ ಯಳನಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದವತಿಯಿಂದ ಭಾನುವಾರ ಆಯೋಜಿಸಿದ್ದ ಸಾಲವಿತರಣಾ ಕಾರ್ಯಕ್ರಮದಲ್ಲಿ ರೈತರಿಗೆ ಹಾಗೂ ಸ್ವಸಹಾಯ ಗುಂಪುಗಳಿಗೆ ಸಾಲವಿತರಣೆ ಮಾಡಿ ಅವರು ಮಾತನಾಡಿದರು. ರೈತರು ತಾವು ಪಡೆದ ಸಾಲವನ್ನು ಕೃಷಿಗೆ ಪೂರಕವಾಗಿ ಬಳಸಿದಾಗ ನಂತರ ಬರುವ ಆದಾಯದಲ್ಲಿ ಸಾಲವನ್ನು ಮರುಪಾವತಿ ಮಾಡಲು ಸಹಕಾರಿಯಾಗುತ್ತದೆ ಎಂದರು. ಸಾಲದಹಣವನ್ನು ದುಂದುವೆಚ್ಚ ಮಾಡಿದರೆ ಇದರಿಂದ ರೈತರೇ ತೊಂದರೆಗೆ ಸಿಲುಕಿಕೊಳ್ಳಬೇಕಾಗುತ್ತದೆ ಹಾಗೂ ಯಾರು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವುದಿಲ್ಲವೋ ಅಂತಹವರಿಗೆ ಪುನ: ಸಾಲವನ್ನು ವಿತರಿಸಲಾಗುವುದಿಲ್ಲ ಎಂದು ಎಚ್ಚರಿಸಿದರು. ಕೃಷಿ ಅಲ್ಲದೆ ಕೃಷಿಯೇತರ ಚಟುವಟಿಕೆಗಳಿಗೂ ಸಹ ಜಿಲ್ಲಾ ಬ್ಯಾಂಕ್ ವತಿಯಿಂದ ಸಾಲವಿತರಿಸು

ಖಾತ್ರಿ ಹಣ ಬಿಡುಗಡೆಗೆ ಒಪ್ಪಿದ ಇಓ : ಧರಣಿ ಹಿಂಪಡೆದ ಫಲಾನುಭವಿಗಳು

ಹುಳಿಯಾರು ಹೋಬಳಿ ಯಳನಡು ಗ್ರಾಮದಲ್ಲಿ ಖಾತ್ರಿ ಯೋಜನೆಯಡಿ ಕೈಗೊಂಡಿದ್ದ ಕಾಮಗಾರಿಗಳ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಡೆಯುತ್ತಿದ್ದ ಆಹೋರಾತ್ರಿ ಧರಣಿ ಇಓ ಅವರ ಭರವಸೆಯೊಂದಿಗೆ ಶನಿವಾರ ರಾತ್ರಿ ಮುಕ್ತಾಯವಾಯಿತು. ಶುಕ್ರವಾರದಂದು ಗ್ರಾ.ಪಂ. ಎದುರು ಧರಣಿ ಪ್ರಾರಂಭಿಸಿದ್ದ ಫಲಾನುಭವಿಗಳು ಬಿಗಿಪಟ್ಟು ಹಿಡಿದು ಅಧಿಕಾರಿಗಳೇ ಇಲ್ಲಿಗೆ ಬಂದು ತಮ್ಮ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಆಹೋರಾತ್ರಿ ಧರಣಿ ಕೈಗೊಂಡಿದ್ದರು. ಆದರೆ ಯಾವ ಅಧಿಕಾರಿಯೂ ಇಲ್ಲಿಗೆ ಬಾರದ ಹಿನ್ನಲೆಯಲ್ಲಿ ಶನಿವಾರದಂದು ಪಿಡಿಓ ಹಾಗೂ ಕಾರ್ಯದರ್ಶಿಯವರಿಗೆ ದಿಗ್ಬಂಧನ ಹಾಕಿ ಹಿಡಿದಿಟ್ಟುಕೊಂಡಿದ್ದರು. ಈ ವಿಷಯ ತಿಳಿದ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಶನಿವಾರ ರಾತ್ರಿ ೮.೩೦ರ ವೇಳೆಗೆ ಧರಣಿನಿರತ ಸ್ಥಳಕ್ಕೆ ಆಗಮಿಸಿ ಧರಣಿ ನಿರತರ ಅಹವಾಲು ಸ್ವೀಕರಿಸಿದರು. ತಮ್ಮ ಸಮಸ್ಯೆಗಳನ್ನು ಆಲಿಸದ ಅಧಿಕಾರಿಗಳ ವಿರುದ್ದ ಆಕ್ರೋಶಿತರಾಗಿದ್ದ ಧರಣಿನಿರತರು ಸ್ಥಳಕ್ಕೆ ಬಂದ ಇಓ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರಲ್ಲದೆ, ಬಾಕಿ ಇರುವ ಸಂಪೂರ್ಣ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಅಲ್ಲದೆ ರೈತರ ಸಂಕಷ್ಟವನ್ನು ತಿಳಿಯದೆ ಈ ರೀತಿ ಚಲ್ಲಾಟವಾಡುವುದು ಸರಿಯೇ , ತಾವು ಮಾಡಿರುವ ಕಾಮಗಾರಿಗಳಲ್ಲಿ ಲೋಪವೇನಾದರೂ ಇದೆಯೇ, ಸರ್ಕಾರದಿಂದ ಹಣ ಬರುತ್ತದೆಂಬ ನಂಬಿಕೆಯಿಂದ ಸಾಲ ಮಾಡಿ ದನದಕೊಟ್ಟಿಗೆ,ಶೌಚಾಲಯ,ಪಿಕಪ್ ಸೇರಿದಂತೆ ಇ

ಮಕ್ಕಳಿಗೆ ಮೊದಲು ವಿದ್ಯಾಭ್ಯಾಸ ಕೊಡಿಸಿ : ಶ್ರೀರಂಗಯ್ಯ

ಸಮಾಜದಲ್ಲಿ ಹಿಂದುಳಿದ ವರ್ಗವೆಂದು ಬಿಂಬಿತವಾಗಿರುವ ದಲಿತ ಸಮುದಾಯದವರು ತಮ್ಮ ಮಕ್ಕಳಿಗೆ ಮೊದಲು ವಿದ್ಯಾಭ್ಯಾಸ ಕೊಡಿಸಿಸುವ ಮೂಲಕ ಅವರನ್ನು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತೆ ಮಾಡಿ ಎಂದು ಹೆಚ್.ಮೇಲನಹಳ್ಳಿಯವರಾಗಿರುವ ಹಾಗೂ ಚಿತ್ರದುರ್ಗದ ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಶ್ರೀರಂಗಯ್ಯ ಅವರು ಕರೆ ನೀಡಿದರು. ಹುಳಿಯಾರಿನಲ್ಲಿ ತಾಲ್ಲೂಕು ದಲಿತ ಸಹಾಯವಾಣಿ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದಡಿಯಲ್ಲಿ ನಡೆದ ಅಂಬೇಡ್ಕರ್ ಪರಿನಿರ್ವಾಣದ ದಿನದ ಕಾರ್ಯಕ್ರಮವನ್ನು ಶ್ರೀರಂಗಯ್ಯ ಅವರು ಉದ್ಘಾಟಿಸಿದರು. ತಾಲ್ಲೂಕು ದಲಿತ ಸಹಾಯವಾಣಿ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದಡಿಯಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್ ಪರಿನಿರ್ವಾಣದ ದಿನ , ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ತಮಟೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಲಿತ ಸಮುದಾಯದವರು ಇಂದಿಗೂ ಸಹ ಶೈಕ್ಷಣಿಕ ರಂಗದಿಂದ ಹಿಂದುಳಿದಿದ್ದು ಸಮಾಜಮುಖಿಗೆ ಬರುವುದರಲ್ಲಿ ವಿಫಲರಾಗುತ್ತಿದ್ದಾರೆಂದು ವಿಷಾದಿಸಿದರು. ಗ್ರಾಮೀಣ ಭಾಗದ ಅನೇಕ ಜನರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದರ ಬದಲು ತಮ್ಮ ಜೊತೆ ಕೂಲಿ ಮಾಡಲು ಕರೆದೊಯ್ಯುತ್ತಾರೆ ಇದರಿಂದ ಮಕ್ಕಳ ಉಜ್ವಲಭವಿಷ್ಯ ಹಾಳಾಗುತ್ತಿದೆ ಎಂದರು. ಹುಳಿಯಾರಿನಲ್ಲಿ ತಾಲ್ಲೂಕು ದಲಿತ ಸಹಾಯವಾಣಿ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದಡಿಯಲ್ಲಿ ನಡೆದ ತಾಲ್ಲೂ

ಯಳನಡು: ಶನಿವಾರ ರಾತ್ರಿಯೂ ಮುಂದುವರಿದ ಧರಣಿ : ಪೂರಾ ಹಣ ಪಾವತಿಯಾಗುವವರೆಗೂ ಸ್ಥಳದಿಂದ ಕದಲುವುದಿಲ್ಲ

ಉದ್ಯೋಗಖಾತ್ರಿಯಡಿ ಪ್ರಾರಂಭಿಸಲಾಗಿದ್ದ ಕಾಮಗಾರಿಗಳಿಗೆ ಪೂರಹಣ ಬಿಡುಗಡೆ ಮಾಡುವವರೆಗು ಸ್ಥಳದಿಂದ ಕಾಲ್ತೆಗೆಯುವುದಿಲ್ಲ ಎಂದು ಪಟ್ಟುಹಿಡಿದಿರುವ ಫಲಾನುಭವಿಗಳು ಕಾರ್ಯದರ್ಶಿ ಹಾಗೂ ಪಿಡಿಓ ಅವರನ್ನು ಊರಿಗೆ ತೆರಳು ಬಿಡದೆ ತಮ್ಮೊಂದಿಗೆ ಕೂರಿಸಿಕೊಂಡಿದ್ದಾರೆ. ಹುಳಿಯಾರು ಹೋಬಳಿ ಯಳನಡುವಿನಲ್ಲಿ ಶನಿವಾರ ರಾತ್ರಿಯೂ ಮುಂದುವರಿದ ಆಹೋರಾತ್ರಿ ಧರಣಿ.   ಹೋಬಳಿ ಯಳನಡು ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಹಣ ಪಾವತಿ ಮಾಡುವಂತೆ ಒತ್ತಾಯಿಸಿ ಗ್ರಾ.ಪಂ.ಸದಸ್ಯರು ಹಾಗೂ ರೈತರು ಆರಂಭಿಸಿದ ಆಹೋರಾತ್ರಿ ಧರಣಿ ಎರಡನೇ ದಿನವೂ ಮುಂದುವರಿದಿದ್ದು ಸದ್ಯ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಏನಿದು ಸಮಸ್ಯೆ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಮಂಜೂರಾಗಿದ್ದ ಶೌಚಾಲಯ, ಇಂಗುಗುಂಡಿ, ದನದಕೊಟ್ಟಿಗೆ, ಪಿಕಪ್ ಸೇರಿದಂತೆ ಇನ್ನಿತರ ಕಾಮಗಾರಿಗಳು ಸಂಪೂರ್ಣವಾಗಿ ಮುಗಿದಿದ್ದರೂ ಸಹ ಅದಕ್ಕೆ ಮಾಡಿದ ಹಣ ನೀಡುವಲ್ಲಿ ಇಲಾಖೆ ಮೀನಾಮೇಷ ಎಣಿಸುತ್ತಿದೆ. ಇದರಿಂದ ಕಾಮಗಾರಿಗಾಗಿ ಸಾಲಸೋಲ ಮಾಡಿದ್ದ ಫಲಾನುಭವಿಗಳು ಪರಿತಪಿಸುವಂತಾಗಿದ್ದು, ಇದುವರೆಗೂ ನಡೆದಿರುವ ಕಾಮಗಾರಿಗಳ ಸಂಪೂರ್ಣ ಹಣವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಶುಕ್ರವಾರದಿಂದ ಗ್ರಾ.ಪಂ.ಎದುರು ಧರಣಿ ಆರಂಬಿಸಿದ್ದರು. ಶುಕ್ರವಾರ ಬೆಳಿಗ್ಗೆ ಧರಣಿ ಪ್ರಾರಂಭವಾಗಿ ಶನಿವಾರ ಕಳೆದರೂ ಸಹ ಸಂಬಂಧಪಟ್ಟ ಯಾವ ಅಧಿಕಾರಿಯೂ ಇತ್ತ ಸುಳಿಯಲಿಲ್ಲ. ಇದರಿಂದ

ಹುಳಿಯಾರಿನಲ್ಲಿ ಮುಂದುವರಿದ ಕಾರ್ಯಾಚರಣೆ

ಕಂದಾಯ ಇಲಾಖೆಯಿಂದ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಪಟ್ಟಣದಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ಹುಳಿಯಾರು ಅಮಾನಿಕೆರೆಯ ಮತ್ತೊಂದು ಭಾಗವಾದ ವಳಗೆರೆಹಳ್ಳಿ ಭಾಗದಲ್ಲಿ ಕೆರೆ ಒತ್ತುವರಿ ತೆರವು ಕಾರ್ಯ ನಡೆಯಿತು. ಹುಳಿಯಾರಿನ ವಳಗೆರೆಹಳ್ಳಿಯ ತೆಂಗಿನ ತೋಟವೊಂದರಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿರುವುದು. ಶುಕ್ರವಾರದಂದು ಕೇಶವಾಪುರ ಭಾಗದಿಂದ ಕೆರೆ ಒತ್ತುವರಿ ತೆರವು ಕಾರ್ಯ ಪ್ರಾರಂಭವಾಗಿದ್ದು , ಶನಿವಾರ ವಳಗೆರೆಹಳ್ಳಿಯ ಸುತ್ತಮುತ್ತಲ ಕೆರೆ ಅಂಗಳದಲ್ಲಿದ್ದ ತೆಂಗಿನ ತೋಟಗಳಲ್ಲಿನ ಫಸಲು ಭರಿತ ತೆಂಗಿನ ಮರಗಳನ್ನು ಉರುಳಿಸುವ ಮೂಲಕ ಲಕ್ಷಾಂತರ ರೂ ಬೆಲೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ನರಸಿಂಹರಾವ್ ಹನುಂತರಾವ್ ಅವರಿಗೆ ಸೇರಿದ ೨೫ ತೆಂಗಿನ ಗಿಡ,ಲಿಂಗರಾಜ್ ಅವರ ೪ ತೆಂಗಿನಗಿಡ, ನರಸಣ್ಣ ೧೮,ಉಪ್ಪಿರಗಯ್ಯ ಅವರ ೬೦ ತೆಂಗಿನ ಮರಗಳನ್ನು ಧರೆಗುರುಳಿಸಲಾಯಿತು.೪೮೦ ಎಕರೆ ವಿಸ್ತೀರ್ಣವಿರುವ ಕೆರೆಯಲ್ಲಿ ೩ ಜೆಸಿಬಿ ಯಂತ್ರಗಳನ್ನು ಬಳಸಿ ಒತ್ತುವರಿ ತೆರವು ಮಾಡಲಾಗುತ್ತಿದೆ. ತಾಲ್ಲೂಕು ಸರ್ವೆಯರ್ ಬಸವರಾಜು,ಲಕ್ಷ್ಮಿನರಸಿಂಹಯ್ಯ, ಗ್ರಾಮ ಲೆಖ್ಖಿಗರಾದ ಸುಬ್ಬರಾಯಪ್ಪ, ಶ್ರೀನಿವಾಸ್ , ಕುಲಕರ್ಣಿ, ಜಕಣಾಚಾರಿ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಯವರಿದ್ದರು.

ಕನ್ನಡ ನಾಡು-ನುಡಿ ರಕ್ಷಣೆಗೆ ವಿದ್ಯಾರ್ಥಿಗಳು ಮುಂದಾಗಬೇಕು: ಸಾಹಿತಿಗಳಾದ ಬಿಳಿಗೆರೆ ಕೃಷ್ಣಮೂರ್ತಿ

ಕರ್ನಾಟಕದಲ್ಲಿ ಶ್ರೀಮಂತ ಭಾಷೆಯಾಗಿರುವ ಕನ್ನಡ ಇತರೆ ಭಾಷೆಗಳ ಹಾವಳಿ ಹಾಗೂ ನಮ್ಮ ಭಾಷೆಯ ಮೇಲೆ ಕನ್ನಡಿಗರ ನಿರಾಸಕ್ತಿಯಿಂದ ಕನ್ನಡದ ಬಳಕೆ ಕ್ಷೀಣಿಸುತ್ತಿದ್ದು ಕನ್ನಡ ನಾಡುನುಡಿಯನ್ನು ಕಟ್ಟಿಬೆಳೆಸಬೇಕಾಗಿದ್ದು ಅದು ಇಂದಿನ ವಿದ್ಯಾರ್ಥಿಗಳಿಂದ ಸಾಧ್ಯ ಎಂದು ಬಿಎಂಎಸ್ ಕಾಲೇಜಿನ ಪ್ರಾಚಾರ್ಯ ಹಾಗೂ ಸಾಹಿತಿಗಳಾದ ಬಿಳಿಗೆರೆ ಕೃಷ್ಣಮೂರ್ತಿಯವರು ತಿಳಿಸಿದರು. ಹುಳಿಯಾರು-ಕೆಂಕೆರೆ ಪದವಿಪೂರ್ವ ಕಾಲೇಜಿನಲ್ಲಿ ಹೋಬಳಿ ಕಸಾಪ ವತಿಯಿಂದ ಆಯೋಜಿಸಿದ್ದ ಕನ್ನಡನುಡಿಹಬ್ಬದಲ್ಲಿ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಉಪನ್ಯಾಸ ನೀಡಿದರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಸ್ಮರಣೆ ಅಂಗವಾಗಿ ಹುಳಿಯಾರು ಹೋಬಳಿ ಕಸಾಪ ವತಿಯಿಂದ ಹುಳಿಯಾರು-ಕೆಂಕೆರೆ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ನುಡಿಹಬ್ಬ ಕಾರ್ಯಕ್ರಮದಲ್ಲಿ ಕನ್ನಡನಾಡು ಕುರಿತು ಉಪನ್ಯಾಸ ನೀಡಿದರು. ಪ್ರಸ್ತುತದಲ್ಲಿ ಕನ್ನಡವನ್ನು ಉಳಿಸಿ ಎಂದು ಹೇಳುತ್ತಾ ಹಲವಾರು ಸಂಘಟನೆಗಳನ್ನು ಕಟ್ಟಿಕೊಂಡಿರುವ ಪ್ರಮುಖರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸದೆ ಖಾಸಗಿ ಶಾಲೆಗೆ ಕಳುಹಿಸುತ್ತಿದ್ದಾರೆ ಎಂದು ವಿಷಾದಿಸಿದರು. ಕನ್ನಡದ ರಕ್ಷಣೆ ಎಂದರೆ ಕನ್ನಡ ಭಾಷೆಯ ರಕ್ಷಣೆ ಮಾತ್ರವಲ್ಲ ಅದು ಕರ್ನಾಟಕದ ನೆಲ,ಜಲ,ಮರ ಎಲ್ಲವನ್ನು ರಕ್ಷಿಸುವುದಾಗಬೇಕು ಎಂದರು. ಕನ್ನಡಸಾಹಿತ್ಯಕ್ಕೆ ಸಾವಿರಾರು ವರ್ಷದ ಇತಿಹಾಸವಿದ್ದರೂ ಸಹ ಅ

ತಾ.೨೦ ಕನ್ನಡ ನುಡಿ ಹಬ್ಬ

ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಸ್ಮರಣೆ ಅಂಗವಾಗಿ ಇಂದು ಶನಿವಾರ ಬೆಳಿಗ್ಗೆ ಹುಳಿಯಾರು-ಕೆಂಕೆರೆ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ನುಡಿಹಬ್ಬ ಕಾರ್ಯಕ್ರಮ ನಡೆಯಲಿದೆ. ಚಿಕ್ಕನಾಯಕನಹಳ್ಳಿಯ ನಿವೃತ್ತ ಕನ್ನಡ ಉಪನ್ಯಾಸಕ ಮಾ.ಚಿ.ಕೈಲಾಸನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಾಂಶುಪಾಲ ನಟರಾಜ್ ಅಧ್ಯಕ್ಷತೆವಹಿಸುವರು. ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನ ಸದಸ್ಯರು ಹಾಗೂ ಸಾಹಿತಿಗಳು ಆದ ತ.ಶಿ.ಬಸವಮೂರ್ತಿಯವರು ಗಮಕವಾಚನ ಮಾಡಲಿದ್ದು, ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹಾಗೂ ಸಾಹಿತಿಗಳು ಆದ ಬಿಳಿಗೆರೆಕೃಷ್ಣಮೂರ್ತಿ ಅವರು ಕನ್ನಡ ನಾಡುನುಡಿ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ೨೦೧೪ನೇ ಸಾಲಿನ ಹತ್ತನೇ ತರಗತಿ ಹಾಗೂ ಪಿಯುಸಿಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ನಡೆಯಲಿದೆ.

ಕಾಲಭೈರವೇಶ್ವರ ಸ್ವಾಮಿಯ ಮಂಡಲಪೂಜೆ

ಹುಳಿಯಾರು: ಸಮೀಪದ ಕಂದಿಕೆರೆ ಹೋಬಳಿಯ ತಿಮ್ಮನಹಳ್ಳಿಯ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯದಲ್ಲಿ ತಾ.೨೦ರ ಶನಿವಾರ ಹಾಗೂ ತಾ.೨೧ರ ಭಾನುವಾರ ದಂದು ಎರಡು ದಿನಗಳ ಕಾಲ ಉತ್ಸವಮೂರ್ತಿಯ ಮಂಡಲಪೂಜೆ,ನಾಗಪ್ರತಿಷ್ಠೆ ಸೇರಿದಂತೆ ವಿವಿಧ ಪೂಜಾಕೈಂಕರ್ಯಗಳು ನಡೆಯಲಿವೆ. ತಾ.೨೦ರ ಶನಿವಾರ ಸಂಜೆ ಗಂಗಾಪೂಜೆ,ಪುಣ್ಯಾಹ,ನಾಂದಿ,ಅಂಕುರಾರ್ಪಣೆ,ಪಂಚಕಳಸ ಸ್ಥಾಪನೆ ಹಾಗೂ ಹೋಮ ನಡೆಯಲಿದೆ. ತಾ.೨೧ರ ಭಾನುವಾರ ಬೆಳಿಗ್ಗೆ ನಾಗಪ್ರತಿಷ್ಠೆ, ದೀಕ್ಷಾ ವಿವಾಹ ಕರ್ಯ ನಡೆದು ನಂತರ ಹೋಮಕ್ಕೆ ಪೂರ್ಣಾಹುತಿ ಅರ್ಪಣೆ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಇದೇದಿನ ಸ್ವಾಮಿಪೆ ವಿಶೇಷ ಅಲಂಕಾರ ಸಹ ಮಾಡಲಿದ್ದು ,ಆಗಮಿಸಿದ ಭಕ್ತರಿಗಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವಂತೆ ಶ್ರೀಕಾಲಭೈರವೇಶ್ವರ ಸೇವಾಸಮಿತಿಯವರು ಕೋರಿದ್ದಾರೆ.

ತಮಟೆ ಸ್ಪರ್ಧೆ ೨೧ಕ್ಕೆ

ತಾಲ್ಲೂಕು ದಲಿತ ಸಹಾಯವಾಣಿ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದಡಿಯಲ್ಲಿ ಇದೇ ೨೧ರಂದು ಅಂಬೇಡ್ಕರ್ ಪರಿನಿರ್ವಾಣದ ದಿನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳೀಗೆ ಪುರಸ್ಕಾರ ಹಾಗೂ ತಮಟೆ ಸ್ಪರ್ಧೆ ನಡೆಯಲಿದೆ.          ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು ವಿವಿಧ ದಲಿತ ಮುಖಂಡರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.ಇದೇ ವೇಳೆ ಪರಿಶಿಷ್ಟ ಜಾತಿ ಮತ್ತು ವರ್ಗಗಳ ೨೦೧೩-೧೪ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಹೆಸರು ನೊಂದಾಯಿಸಿಕೊಳ್ಳಬಹುದು. ಅಲ್ಲದೆ ತಾಲ್ಲೂಕು ಮಟ್ಟದ ತಮಟೆಸ್ಪರ್ಧೆ ಕೂಡ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೯೯೦೧೫೯೩೨೪೫ ಸಂಪರ್ಕಿಸಬಹುದಾಗಿದೆ ಎಂದು ಕಾರ್ಯದರ್ಶಿ ಹಾಗಲವಾಡಿ ಚಿಕ್ಕಣ ತಿಳಿಸಿದ್ದಾರೆ.

ಹುಳಿಯಾರು ಕೆರೆ ಒತ್ತುವರಿ ತೆರವಿಗೆ ಚಾಲನೆ

ಹುಳಿಯಾರು : ಪಟ್ಟಣದ ಕೆರೆ ತೆರವು ಕಾರ್ಯಾಚರಣೆ ಶುಕ್ರವಾರದಂದು ಪ್ರಾರಂಭವಾಗಿದ್ದು ವಳಗೇರಹಳ್ಳಿ ಭಾಗದಿಂದ ಕಾರ್ಯಾಚರಣೆ ನಡೆಯುತ್ತಿದೆ. ಸುಮಾರು ೪೩೮ ಎಕರೆ ವಿಸ್ತಾರವುಳ್ಳ ಹುಳಿಯಾರು ಕೆರೆ ಕೇಶವಾಪುರ, ವಳಗೆರೆಹಳ್ಳಿ, ವೈ.ಎಸ್.ಪಾಳ್ಯ ಹಾಗೂ ಪಟ್ಟಣದ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿದ್ದು, ಈ ಭಾಗದಲ್ಲಿನ ಹೆಚ್ಚಿನ ಜಾಗ ಒತ್ತುವರಿಯಾಗಿದೆ. ಈಗ ಸದ್ಯ ವಳಗೇರಹಳ್ಳಿ ಹಾಗೂ ಕೇಶವಾಪುರದ ಕಡೆಯಿಂದ ತೆರವು ಕಾರ್ಯ ನಡೆಯುತ್ತಿದ್ದು ಜೆಸಿಬಿಯಿಂದ ಗಡಿ ಗುರ್ತಿಸಲಾಗುತ್ತಿದೆ. ಇದೇ ವೇಳೆ ಕೆರೆ ಅಂಗಳದಲ್ಲಿದ್ದ ತೆಂಗಿನ ಮರಗಳನ್ನು ಕಂದಾಯ ಇಲಾಖೆ ಅಧಿಕಾರಿಗಳ ಸಕ್ಷಮದಲ್ಲಿ ಧರೆಗುರುಳಿಸಲಾಯಿತು. ಹುಳಿಯಾರು ಕೆರೆ ಅಂಗಳ ಎಕರೆಗಟ್ಟಲೆ ಒತ್ತುವರಿಯಾಗಿದ್ದು ಸಂಪೂರ್ಣ ಸರ್ವೆ ಆದ ಬಳಿಕ ಎಷ್ಟು ಒತ್ತುವರಿಯಾಗಿದೆ ಎಂಬುದರ ಲೆಖ್ಖಸಿಗಲಿದೆ ಎಂದು ಕಂದಾಯ ತನಿಕಾಧಿಕಾರಿ ಹನುಮಂತನಾಯಕ್ ತಿಳಿಸಿದರು. ಒತ್ತುವರಿ ತೆರವಿನ ಕಾರ್ಯಾಚರಣೆಯಲ್ಲಿ ಗ್ರಾಮಲೆಖ್ಖಿಗ ಶ್ರೀನಿವಾಸ್, ತಾಲ್ಲೂಕು ಸರ್ವೆಯರ್ ಬಸವರಾಜು, ಲಕ್ಷ್ಮಣ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಯವರಿದ್ದರು.