ದೇಶದೆಲ್ಲೆಡೆ ನರೇಂದ್ರ ಮೋದಿಯವರ ಸ್ವಚ್ಚ ಭಾರತ ಅಭಿಯಾನ ನಡೆಯುತ್ತಾ ಸ್ವಚ್ಚತಾ ಕಾರ್ಯಗಳು ಸಾಗುತ್ತಿದ್ದರೆ ಹೋಬಳಿಯ ಗಾಣಧಾಳು ಗ್ರಾ.ಪಂ.ವ್ಯಾಪ್ತಿಯ ಹೆಚ್.ಮೇಲನಹಳ್ಳಿ ಮಾತ್ರ ಇದಕ್ಕೆ ಹೊರತಾಗಿ ಯಾವುದೇ ರೀತಿಯ ಸ್ವಚ್ಚತಾಕಾರ್ಯ ಕಾಣದೆ ಬಣಗುಡುತ್ತಿದೆ.
ಹುಳಿಯಾರು ಹೋಬಳಿ ಹೆಚ್.ಮೇಲನಹಳ್ಳಿ ಗ್ರಾಮದಲ್ಲಿ ಹೂಳು ತುಂಬಿರುವ ಚರಂಡಿ. |
ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಸಿಸ್ಟನ್ ಸುತ್ತ ನೀರು ನಿಂತ್ತು ಕೆಸರಾಗಿರುವುದು. |
ಗ್ರಾಮದಲ್ಲಿನ ಐದಾರು ಬೀದಿಗಳಿದ್ದು ಅಲ್ಲಿನ ಚರಂಡಿಗಳ ತುಂಬೆಲ್ಲಾ ಹೂಳು ತುಂಬಿಕೊಂಡು ತಿಂಗಳುಗಳೇ ಕಳೆದರೂ ಈ ಬಗ್ಗೆ ಗ್ರಾ.ಪಂ.ಸದಸ್ಯರಾಗಲಿ ಗಮನಮಾಡಿಲ್ಲ. ಅಲ್ಲದೆ ಕುಡಿಯುವ ನೀರು ಸರಬರಾಜಿನ ಸಿಸ್ಟನ್ ನಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸೋರಿಕೆಯಾಗಿ ಸಿಸ್ಟನ್ ಸುತ್ತಮುತ್ತ ಕೆಸರುಂಟಾಗಿದ್ದು ಅದರ ನಡುವೆಯೇ ನೀರು ಹಿಡಿದು ತರುವಂತಹ ದುಸ್ಥಿತಿ ಇಲ್ಲಿನ ನಿವಾಸಿಗಳದ್ದಾಗಿದೆ. ಚರಂಡಿಯಲ್ಲಿ ನೀರು ಹರಿಯದೆ ನಿಂತಿರುವುದು ಸೊಳ್ಳೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಈ ಬಗ್ಗೆ ಗ್ರಾ.ಪಂ. ಅಧಿಕಾರಿಗಳಿಗೆ ತಿಳಿಸಿದರು ಅವರು ಸಹ ಕ್ರಮಕೈಗೊಂಡಿಲ್ಲದಿರುವುದು ನಿವಾಸಿಗಳಲ್ಲಿ ಅಸಮಾಧಾನ ಮೂಡಿಸಿದೆ.
ಜಿಲ್ಲೆಯ ಗಡಿಭಾಗದಲ್ಲಿರುವ ಈ ಗ್ರಾಮದಲ್ಲಿ ಸುಮಾರು ೩೫೦ಕ್ಕೂ ಹೆಚ್ಚು ಮನೆಗಳಿದ್ದು ಮೂವರು ಗ್ರಾ.ಪಂ.ಸದಸ್ಯರಿದ್ದಾರೆ .ಆದರೂ ಸಹ ಗ್ರಾಮದ ಸ್ವಚ್ಚತೆ ಬಗ್ಗೆ ತಿರುಗಿನೋಡಿಲ್ಲ. ಈ ಹಿಂದೆ ಇದೇ ಗ್ರಾಮದಲ್ಲಿ ಡೆಂಗ್ಯೂ ಕಾಣಿಸಿಕೊಂಡು ಹಲವರು ಜ್ವರದಿಂದ ಬಳಲಿದ್ದು ಆಗ ಮಾತ್ರ ಧಾವಿಸಿ ಬಂದ ಗ್ರಾ.ಪಂ.ಯವರು ಅಲ್ಪಸ್ವಲ್ಪ ಸ್ವಚ್ಚತೆ ಮಾಡಿದ್ದು ಬಿಟ್ಟರೆ ಇದುವರೆಗೂ ಇತ್ತ ತಲೆಹಾಕದಿರುವುದು ನಿವಾಸಿಗಳಲ್ಲಿ ಆಕ್ರೋಶವನ್ನುಂಟುಮಾಡಿದೆ. ಪಂಚಾಯ್ತಿಗೆ ಬರುವ ಕಾಮಗಾರಿಗಳನ್ನು ಮಾಡಿಸಲು ತಾನು ಮೊದಲು ಎಂದು ಮುಂದಾಗುವ ಸದಸ್ಯರುಗಳು ತಮ್ಮ ವ್ಯಾಪ್ತಿಯ ಗ್ರಾಮಗಳ ಸ್ವಚ್ಚತೆ ಮಾಡಿಸಲು ಮಾತ್ರ ಹಿಂದೇಟಾಕುತ್ತಾರೆ ಎಂಬುದು ಇಲ್ಲಿನ ನಿವಾಸಿಗಳ ಪ್ರಶ್ನೆಯಾಗಿದೆ.
ಇನ್ನಾದರೂ ಸ್ವಚ್ಚತಾ ಕಾರ್ಯ ನಡೆಯದೇ ಹೋದರೆ ಆನೈರ್ಮಲ್ಯದಿಂದ ಕೀಟಗಳ ಪ್ರಮಾಣ ಅಧಿಕವಾಗಿ ಮಾರಕ ರೋಗಗಳು ಉಲ್ಭಟಿಸುವ ಮೊದಲೇ ಸ್ಥಳೀಯ ಆಡಳಿತದವರು ಎಚ್ಚೆತ್ತು ಸ್ವಚ್ಚತಾಕಾರ್ಯ ಮಾಡಿಸಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ