ಹುಳಿಯಾರು ಪಟ್ಟಣದಲ್ಲಿ ಹನುಮಜಯಂತಿ ಅಂಗವಾಗಿ ಶುಕ್ರವಾರ ಸಂಜೆ ಶ್ರೀಆಂಜನೇಯಸ್ವಾಮಿಯ ಭವ್ಯ ಮೆರವಣಿಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ವೈಭವಯುತವಾಗಿ ನಡೆಯಿತು.
ಹುಳಿಯಾರಿನಲ್ಲಿ ಹನುಮಜಯಂತಿ ಅಂಗವಾಗಿ ಆಂಜನೇಯಸ್ವಾಮಿ ವೈಭವಯುತ ಮೆರವಣಿಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ನಡೆಯಿತು. |
ಉತ್ಸವದಲ್ಲಿ ಸಾಂಸ್ಕೃತಿಕ ಕಲಾತಂಡಗಳಾದ ದಾವಣಗೆರೆಯ ಬಸವಲೋಕ ತಂಡದ ನಂದಿಕೋಲು ಕುಣಿತ, ರಾಜ್ಯಪ್ರಶಸ್ತಿ ವಿಜೇತ ಗಿರಿಡರ ಶೆಟ್ಟಿ ಬೊಂಬೆ ಕುಣಿತ, ಚಿಕ್ಕಮಗಳೂರು ಜಿಲ್ಲೆಯ ಹುಲಿಹಳ್ಳಿಯ ಶ್ರೀಬಸವಜ್ಯೋತಿ ಮಹಿಳಾ ವೀರಗಾಸೆ ಕುಣಿತ, ಮಂಡ್ಯದ ಸವಿತಾ ಮಹಿಳಾ ತಂಡದವರಿಂದ ಪೂಜಾ ಕುಣಿತ, ಮೈಸೂರು ದಸರಾ ಪ್ರಶಸ್ತಿ ವಿಜೇತ ತಮಟೆ ನಗಾರಿ, ಮಂಡ್ಯದ ಮಹಿಳಾ ಪಟ ಕುಣಿತ, ಚಂಡೇವಾದ್ಯ, ಬೆಂಗಳೂರಿನ ಅಣ್ಣಮ್ಮದೇವಿ ತಮಟೆ ಸೇರಿದಂತೆ ಇನ್ನಿತರ ಕಲಾ ತಂಡಗಳ ಪ್ರದರ್ಶನ ನೋಡುಗರ ಮನಸೂರೆಗುಳ್ಳುವಂತೆ ಮಾಡಿತ್ತು. ಆಂಜನೇಯಸ್ವಾಮಿ ದೇವಾಲಯದಿಂದ ಪ್ರಾರಂಭವಾದ ಮೆರವಣಿಗೆ ರಾಂಗೊಪಾಲ್ ಸರ್ಕಲ್, ಬಿ.ಎಚ್.ರಸ್ತೆ ಮೂಲಕ ರಾಜ್ ಕುಮಾರ್ ರಸ್ತೆ ಹಾಗೂ ರಂಗನಾಥಸ್ವಾಮಿ ದೇವಾಲಯ ರಸ್ತೆ ಮೂಲಕ ವಾಪಸ್ಸ್ ದೇವಾಲಯವನ್ನು ತಲುಪಿತು. ಮೆರವಣಿಗೆಯುದ್ದಕ್ಕೂ ಯುವಕರು ತಂಡೋಪ ತಂಡವಾಗಿ ಹೆಜ್ಜೆ ಹಾಕುತ್ತಾ ಮೈಮರೆತ್ತಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ