ಹೋಬಳಿಯ ಕಾರೇಹಳ್ಳಿ ರಂಗನಾಥಸ್ವಾಮಿ ದೇವಾಲಯದ ಗೋಪುರ ನಿರ್ಮಾಣದ ಸಹಾಯಾರ್ಥ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಒಂದು ಲಕ್ಷರೂನ ಚೆಕನ್ನು ಯೋಜನ ನಿರ್ದೇಶಕ ರೋಹಿತಾಕ್ಷ ವಿತರಿಸಿದರು.
ನಂತರ ಮಾತನಾಡಿ ಶ್ರೀಕ್ಷೇತ್ರದವತಿಯಿಂದ ಈಗಾಗಲೇ ಹಲವಾರು ದೇವಾಲಯಗಳಾ ಜೀರ್ಣೋದ್ಧಾರ ಹಾಗೂ ನೂತನ ದೇವಾಲಯ ನಿರ್ಮಾಣಕ್ಕೆ ಧನ ಸಹಾಯ ಮಾಡಲಾಗುತ್ತಿದೆ. ಇದರ ಕಾರ್ಯ ವ್ಯಾಪ್ತಿ ದೇವಾಲಯಗಳಿಗಷ್ಟೆ ಸೀಮಿತವಾಗದೆ ರೈತರಿಗೆ ನೆರವಾಗುವಂತ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ ಎಂದರು.ಫೆಬ್ರವರಿ ೫ ರಿಂದ ೭ ರವರೆಗೆ ತಿಪಟೂರು ನಗರದಲ್ಲಿ ಶ್ರೀಕ್ಷೇತ್ರ ಯೋಜನೆಯಿಂದ ರಾಜ್ಯಮಟ್ಟದ ಕೃಷಿಮೇಳ ಆಯೋಜಿಸಲಾಗಿದೆ ಖುದ್ದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರಹೆಗ್ಗಡೆಯವರು ನೇತೃತ್ವವಹಿಸಲಿದ್ದಾರೆ. ಈಭಾಗದ ರೈತರು ಮೇಳಕ್ಕೆ ಆಗಮಿಸಿ ಪ್ರಯೋಜನ ಪಡೆಯುವಂತೆ ಕರೆ ನೀಡಿದರು.
ರಂಗನಾಥಸ್ವಾಮಿ ದೇವಾಲಯದ ಗೋಪುರ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಸಂಘದವತಿಯಿಂದ ಒಂದು ಲಕ್ಷರೂನ ಚೆಕ್ ವಿತರಿಸಲಾಯಿತು.
|
ಈ ವೇಳೆ ಮುಖಂಡ ವೈ.ಕೆ.ರಾಮಯ್ಯ , ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಆರ್.ರಂಗಸ್ವಾಮಿ,ಕಾರ್ಯದರ್ಶಿ ಜಿ.ಸಿ.ದೊಡ್ಡಯ್ಯ, ಧರ್ಮದರ್ಶಿಗಳಾದ ಮುದ್ದರಂಗಪ್ಪ, ಸಣ್ಣರಂಗಪ್ಪ, ಜಿ.ಎಂ.ನೀಲಕಂಠಯ್ಯ,ಜಿ.ಎಸ್.ಸಿದ್ದರಾಮಯ್ಯ,ಬಡಕೆಗುಡ್ಲು ರಂಗನಾಥ್,ಗ.ಕರಿಯಪ್ಪ, ಶ್ರೀಕ್ಷೇತ್ರ ಯೋಜನೆಯ ಸುರೇಶ್.ನಿವೃತ್ತ ಶಿಕ್ಷಕ ಸಿದ್ದಪ್ಪ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ