ಸರ್ಕಾರದವತಿಯಿಂದ ರೈತರ ಏಳ್ಗೆ ಹಾಗೂ ಬರಗಾಲ ಪೀಡಿತ ಪ್ರದೇಶದಲ್ಲಿ ನೀರಿನ ಸದ್ಬಳಕೆಗಾಗಿ ವಿನೂತ ಪ್ರಯತ್ನವಾಗಿ ಕೃಷಿಭಾಗ್ಯ ಯೋಜನೆಯನ್ನು ರೂಪಿಸಿ, ಅರ್ಹಫಲಾನುಭವಿಗಳ ಆಯ್ಕೆ ಮಾಡಿದೆ. ಇಂತಹ ನೂತನ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ನೋಡೆಲ್ ಅಧಿಕಾರಿ ಗುರುಶಾಂತಸ್ವಾಮಿ ತಿಳಿಸಿದರು.
ಹುಳಿಯಾರಿನಲ್ಲಿ ಕೃಷಿ ಇಲಾಖೆವತಿಯಿಂದ ನಡೆದ ತರಬೇತಿ ಕಾರ್ಯಕ್ರಮದಲ್ಲಿ ನೋಡೆಲ್ ಅಧಿಕಾರಿ ಗುರುಶಾಂತಸ್ವಾಮಿ ರೈತರಿಗೆ ಮಾಹಿತಿ ನೀಡಿದರು. |
ಹೋಬಳಿ ವ್ಯಾಪ್ತಿಯಲ್ಲಿ ಕೃಷಿಭಾಗ್ಯ ಯೋಜನೆಯಡಿ ಆಯ್ಕೆಯಾದ ಅರ್ಹಫಲಾನುಭವಿಗಳಿಗೆ ಕೃಷಿ ಇಲಾಖೆವತಿಯಿಂದ ಪಟ್ಟಣದ ಗಾಂಧಿಭವನದಲ್ಲಿ ಶುಕ್ರವಾರ ತರಬೇತಿ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ಈ ಯೋಜನೆಯಲ್ಲಿ ಕೃಷಿಹೊಂಡ, ಹೊಲದಲ್ಲಿ ಉದಿಬದು ಸೇರಿದಂತೆ ತೋಟಗಾರಿಕೆ,ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ ಸೇರಿದಂತೆ ಇನ್ನಿತರ ಕೃಷಿಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಸಾಮಾನ್ಯ ರೈತರು ಶೇ.೨೦ ರಷ್ಟು ಹಾಗೂ ಹಿಂದುಳಿದ ವರ್ಗದವರು ಶೇ.೧೦ರಷ್ಟು ಹಣ ತೊಡಗಿಸಬೇಕಿದೆ. ಇನ್ನುಳಿದ ಹಣವನ್ನು ಸರ್ಕಾರ ಸಬ್ಸಿಡಿ ರೀತಿಯಲ್ಲಿ ಬರಿಸಲಿದೆ ಎಂದರು. ಈ ಯೋಜನೆಯನ್ನು ರೈತರು ತಮಗಾಗೆ ಮಾಡಿಕೊಳ್ಳುತ್ತಿದ್ದೇವೆ ಎಂಬ ಮನೋಭಾವಹೊಂದಿ ಮಾಡಿದಾಗ ಮಾತ್ರ ಯೋಜನೆ ಯಶಸ್ವಿಯಾಗಲಿದೆ. ಕೃಷಿ ಇಲಾಖೆಯಿಂದ ಹೇಗೋ ಹಣಬರುತ್ತದೆ ಎಂಬ ಉದಾಸೀನತೆಯಿಂದ ಯಾವುದೇ ಕಾರ್ಯಗಳನ್ನು ಮಾಡಬೇಡಿ ಎಂದರು. ಕೃಷಿಭಾಗ್ಯ ಯೋಜನೆಯಡಿಯ ಕೆಲಸಗಳನ್ನು ಉತ್ತಮವಾಗಿ ನಡೆಸುವ ಮೂಲಕ ಕ್ರಾಂತಿಯನ್ನುಂಟುಮಾಡಬೇಕು ಅದಕ್ಕಾಗಿ ಬೇಕಾದ ಸಂಪೂರ್ಣ ಸಹಕಾರವನ್ನು ಕೃಷಿ ಇಲಾಖೆ ಕಲ್ಪಿಸಲಿದೆ ಎಂಬ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಡಿಎ ಹೊನದಾಸೇಗೌಡ, ಜಿ.ಪಂ.ಸದಸ್ಯೆ ಮಂಜುಳಾ, ಕೃಷಿ ಇಲಾಖೆಯ ನೂರುಲ್ಲಾ, ತಿಪ್ಪೇಸ್ವಾಮಿ, ಶಿವಣ್ಣ, ಕೃಷಿಕ ಸಮಾಜ ಕಾರ್ಯದರ್ಶಿ ರಂಗನಕೆರೆ ಮಹೇಶ್, ಎಪಿಎಂಸಿಯ ಸಿದ್ದರಾಮಯ್ಯ ಸೇರಿದಂತೆ ಹೋಬಳಿಯ ಹಳ್ಳಿಗಳ ರೈತರು ಉಪಸ್ಥಿತರಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ