ಲೈಂಗಿಕ ಸುರಕ್ಷಾ ಸಪ್ತಾಹದ ಅಂಗವಾಗಿ ಪಟ್ಟಣದ ವಿವಿಧ ಶಾಲೆಗಳ ಮಕ್ಕಳು ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಹುಳಿಯಾರಿನ ವಾಸವಿ ಶಾಲಾ ಮಕ್ಕಳು ಲೈಂಗಿಕ ಸುರಕ್ಷಾ ಸಪ್ತಾಹದ ಅಂಗವಾಗಿ ಜಾಥಾ ನಡೆಸಿದರು. |
ಅಪ್ರಾಪ್ತ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರದ ವಿಷಯಗಳು ನಿತ್ಯ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದರೂ ಸಹ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಈ ಬಗ್ಗೆ ಸರ್ಕಾರ ಎಚ್ಚೆತ್ತು ಕೊಳ್ಳಬೇಕಿದೆ ಹಾಗೂ ಇಂತಹ ಕೃತ್ಯ ಎಸಗುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕಿದೆ ಅಲ್ಲದೆ ಸಾರ್ವಜನಿಕರನ್ನು ಈ ಬಗ್ಗೆ ಎಚ್ಚರಿಸುವ ನಿಟ್ಟಿನಲ್ಲಿ ಈ ಜಾಥಾ ನಡೆಸುತ್ತಿರುವುದಾಗಿ ಮುಖ್ಯ ಶಿಕ್ಷಕ ಮಹೇಶ್ ತಿಳಿಸುದರು.
ಶಾಲೆಯಿಂದ ಬಸ್ ನಿಲ್ದಾಣ , ಮಾರುತಿ ನಗರ, ರಾಂ ಗೋಪಾಲ್ ಸರ್ಕಲ್ ಹಾಗೂ ಬಿ.ಎಚ್ ರಸ್ತೆಯಲ್ಲಿ ಸಾಗಿದ ಜಾಥಾದಲ್ಲಿ ಹೆಣ್ಣು ಮಕ್ಕಳ ಮೇಲೆ ಇಂದಿನ ದಿನದಲ್ಲಿ ಆಗುತ್ತಿರುವ ಶೋಷಣೆಯ ವಿರುದ್ದ ಘೋಷಣೆ ಕೂಗುತ್ತಿದ್ದ ಮಕ್ಕಳು ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಸಾರ್ವಜನಿಕರಿಗೆ ತಿಳಿಸುತ್ತಿದ್ದರು. ಪಟ್ಟಣದ ವಾಸವಿ ಆಂಗ್ಲಶಾಲೆ, ಟಿಎಸ್.ಆರ್. ಶಾಲೆ, ಎಂಪಿಎಸ್ ಶಾಲೆ, ಕನಕದಾಸ ಸೇರಿದಂತೆ ವಿವಿಧ ಶಾಲಾ ಮಕ್ಕಳು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ