ಉದ್ಯೋಗಖಾತ್ರಿ ಯೋಜನೆಯಡಿ ನಿರ್ಮಿಸಿದ್ದ ಶೌಚಾಲಯ ಹಾಗೂ ಇತರೆ ಕಾಮಗಾರಿಗಳ ಬಾಕಿ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಶುಕ್ರವಾರದಂದು ಯಳನಡು ಗ್ರಾ.ಪಂ. ಕಛೇರಿ ಎದುರು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಧರಣಿ ನಡೆಸಿದರು.
![]() |
ಹುಳಿಯಾರು ಹೋಬಳಿ ಯಳನಡು ಗ್ರಾಮದಲ್ಲಿ ಉದ್ಯೋಗಖಾತ್ರಿ ಯೋಜನೆಯ ಬಾಕಿ ಹಣ ಮಂಜೂರು ಮಾಡುವಂತೆ ಒತ್ತಾಯಿಸಿ ಗ್ರಾ.ಪಂ.ಸದಸ್ಯರು ಹಾಗೂ ಸಾರ್ವಜನಿಕರು ಗ್ರಾ.ಪಂ.ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. |
೨೦೧೩-೧೪ ನೇ ಸಾಲಿನಲ್ಲಿ ಯಳನಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಮಂಜೂರಾದ ಶೌಚಾಲಯ ಹಾಗೂ ವಿವಿಧ ಕಾಮಗಾರಿಗಳು ನಡೆದಿದ್ದು ಇದುವರೆಗೂ ಆ ಕಾಮಗಾರಿಗಳಿಗೆ ಖರ್ಚು ಮಾಡಿದ್ದ ಹಣವನ್ನು ಮಂಜೂರಾಗಿಲ್ಲವೆಂದು ಧರಣಿ ನಿರತರು ತಿಳಿಸಿದರು. ಈ ಭಾಗರ ರೈತರು ಈ ಯೋಜನೆಯಡಿ ಅನೇಕ ಕಾಮಗಾರಿಗಳನ್ನು ಸಂಪೂರ್ಣವಾಗಿ ಮಾಡಿದ್ದರೂ ಸಹ ಇಲಾಖೆಯವರು ಹಣ ನೀಡದೆ ಸತಾಯಿಸುತ್ತಿದ್ದಾರೆ ಸಾಲ ಮಾಡಿ ಕಾಮಗಾರಿ ನಡೆಸಿದ ಅನೇಕ ರೈತರು ಕೈಸುಟ್ಟುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ . ಈ ಬಗ್ಗೆ ಗ್ರಾ.ಪಂ. ಅಧಿಕಾರಿಗಳನ್ನು ಕೇಳೊಣವೆಂದರೆ ಅವರು ಸಹ ಕಛೇರಿಗೆ ಬರುವುದೆ ಕಡಿಮೆ ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ತಾಲ್ಲೂಕು ಪಂಚಾಯ್ತಿಯಲ್ಲಿಗೆ ಹೋಗಿ ತಮ್ಮ ಅಳಲನ್ನು ತಿಳಿಸಿದ್ದರೂ ಯಾವೊಬ್ಬ ಅಧಿಕಾರಿಗಳು ಈ ಬಗ್ಗೆ ಚಕಾರವೆತ್ತಿಲ್ಲ.ಇದರಿಂದ ನೂರಾರು ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ರೈತಸಂಘದ ಮುಖಂಡ ತಮ್ಮಡಿಹಳ್ಳಿ ಮಲ್ಲಿಕಣ್ಣ ದೂರಿದರು.
ಹಣ ಬಿಡುಗಡೆ ಮಾಡುತ್ತಾರೆಂದು ಇಷ್ಟು ದಿನ ಕಾದಿದ್ದೇವೆ ಇನ್ನು ಮುಂದೆ ಆಗುವುದಿಲ್ಲ ನಾವು ಮಾಡಿರುವ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗುವ್ವರೆಗೆ ಧರಣಿ ಮುಂದುವರಿಸುವುದಾಗಿ ಅವರು ತಿಳಿಸಿದರು. ಶುಕ್ರವಾರ ಸಂಜೆ ಕಳೆದರೂ ಸಂಬಂಧಪಟ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದ ಕಾರಣ ಆಹೋರಾತ್ರಿ ಧರಣಿ ಮುಂದುವರೆದಿತ್ತು. ಧರಣಿಯಲ್ಲಿ ರೈತಸಂಘದ ಮುಖಂಡ ಕೆಂಕೆರೆ ಸತೀಶ್ ಸೇರಿದಂತೆ ಗ್ರಾ.ಪಂ.ಅಧ್ಯಕ್ಷೆ ಜಯಮ್ಮ,ಉಪಾಧ್ಯಕ್ಷೆ ಗಂಗಮ್ಮ,ಸದಸ್ಯರಾದ ಸಿದ್ದು,ಶಿವಣ್ಣ,ಉಮೇಶ್,ಗುರುಪ್ರಸಾದ್, ರಾಮಚಂದ್ರಯ್ಯ,ಮುಖಂಡರಾದ ಬಂಡಿಸಿದ್ರಾಮಯ್ಯ,ಸಿದ್ದರಾಮಯ್ಯ,ಲೋಕೇಶ್ ಇತರರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ