ಶ್ರೀವಾಸವಿದೇವಿಯ ನಿಜಪಾದ ಹೊತ್ತ ಸುವರ್ಣರಥವು ಭಾನುವಾರ ಸಂಜೆ ಹುಳಿಯಾರಿಗೆ ಆಗಮಿಸಿದ್ದು, ಆರ್ಯವೈಶ್ಯ ಸಮುದಾಯದವರು ಪೂರ್ಣಾಕುಂಭ ಸ್ವಾಗತಿ ನೀಡಿ, ಸೋಮವಾರ ಬೆಳಿಗ್ಗೆ ಪಾದುಕೆಯನ್ನು ಕನ್ನಿಕಾಪರಮೇಶ್ವರಿಯ ಸಮ್ಮುಖದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.
ಹುಳಿಯಾರು ಪಟ್ಟಣಕ್ಕೆ ಆಗಮಿಸಿದ್ದ ವಾಸವಿ ದೇವಿಯ ನಿಜಪಾದುಕೆಗಳ ಮೆರವಣಿಗೆ ನಡೆಸಲಾಯಿತು. |
ಭಾನುವಾರ ಸಂಜೆ ಆಗಮಿಸಿದ ಪಾದುಕೆಯನ್ನು ಪಟ್ಟಣದ ಎಪಿಎಂಸಿ ಹತ್ತಿರ ಸ್ವಾಗತಿಸಿ ನಂತರ ಕನ್ನಿಕಾಪರವೇಶ್ವರಿ ದೇವಾಲಯದಲ್ಲಿಗೆ ಕರೆದೊಯ್ದು ವಿಶೇಷ ಪೂಜೆ ಸಲ್ಲಿಸಿದರು.ಸೋಮವಾರ ಬೆಳಿಗ್ಗೆ ಹಾಲಿನ ಅಭಿಷೇಕ,ಅರ್ಚನೆ ನಡೆದು ವಿವಿಧ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ನಿಜಪಾದ ಹೊತ್ತ ಸುವರ್ಣರಥವನ್ನು ಸಮುದಾಯದವರೆಲ್ಲಾ ಸೇರಿ ಅಲಂಕರಿಸಿ ಪಟ್ಟಣದ ರಾಮ್ ಗೋಪಾಲ್ ಸರ್ಕಲ್, ಬಿ.ಎಚ್.ರಸ್ತೆ,ರಾಜ್ ಕುಮಾರ್ ರಸ್ತೆ ,ಬಸ್ ನಿಲ್ದಾಣದ ಮೂಲಕ ಮೆರವಣಿಗೆ ನಡೆಸಿದರು. ಮಹಿಳಾ ಡೊಳ್ಳುಕುಣಿತ ಹಾಗೂ ವೀರಗಾಸೆ ನೃತ್ಯ ಮೆರವಣಿಗೆಗೆ ರಂಗು ತಂದಿದ್ದವು.
ಈ ವೇಳೆ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎಂ.ಎಸ್.ನಟರಾಜ್ ಮಾತನಾಡಿ, ಆರ್ಯವೈಶ್ಯರ ಪುಣ್ಯ ಕ್ಷೇತ್ರ ಹಾಗೂ ವಾಸವಿ ಮಾತೆಯ ಜನ್ಮ ಸ್ಥಳವೂ ಆಗಿರುವ ಆಂಧ್ರಪ್ರದೇಶದ ಗೋದಾವರಿ ಜೆಲ್ಲೆಯ ಪೆನುಗೊಂಡ ಕ್ಷೇತ್ರದಲ್ಲಿ ೧೪೫ ಅಡಿ ಎತ್ತರದ ಭವ್ಯವಾದ ವಾಸವಿ ಋಷಿಗೋತ್ರ ಸುವರ್ಣ ಮಂದಿರ ನಿರ್ಮಾಣವಾಗುತ್ತಿದ್ದು, ಆ ಮಂದಿರದಲ್ಲಿ ೯೦ ಅಡಿ ಎತ್ತರದ ಸುಮಾರು ೪೫ ಟನ್ ತೂಕದ ವಾಸವಿ ಮಾತೆಯ ಪಂಚಲೋಹ ವಿಗ್ರಹ ಪ್ರತಿಷ್ಠಾಪಿಸಲಾಗುತ್ತದೆ ಆನಿಟ್ಟಿನಲ್ಲಿ ಅಖಿಲ ಭಾರತ್ ಶ್ರೀವಾಸವಿ ಪೆನುಗೊಂಡ ಟ್ರಸ್ಟ್ ಮತ್ತು ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಸಂಯುಕ್ತಾಶ್ರಯದಲ್ಲಿ ಸುಮಾರು ೧೨೦ ದಿನಗಳ ಕಾಲ ಶ್ರೀವಾಸವಿ ನಿಜಪಾದಯಾತ್ರೆಯು ಕರ್ನಾಟಕದಾದ್ಯಂತ ಸಂಚರಿಸುತ್ತಿದ್ದು, ವಿಶ್ವದ ಅತ್ಯಂತ ಎತ್ತರದ ಪಂಚಲೋಹದ ವಿಗ್ರಹವಾಗಿರುವ ಇದನ್ನು ಪ್ರತಿಷ್ಠಾಪನೆಗೂ ಮುನ್ನಾ ಆರ್ಯವೈಶ್ಯ ಸಮುದಾಯದವರಿಗೆ ವಾಸವಿಮಾತೆಯ ಪಾದುಕೆಗಳ ದರ್ಶನ ಮಾಡಿಸುವ ಅಂಗವಾಗಿ ಈ ನಿಜಪಾದುಕೆಗಳ ಯಾತ್ರೆ ನಡೆಯುತ್ತಿರುವುದಾಗಿ ತಿಳಿಸಿದರು.
ರಥಯಾತ್ರೆಯಲ್ಲಿ ಕರ್ನಾಟಕ ಆರ್ಯವೈಶ್ಯ ಮಂಡಳಿ ಜಿಲ್ಲಾಧ್ಯಕ್ಷ ಬಾಗೇಪಲ್ಲಿ ನಟರಾಜ್ , ಜಿಲ್ಲಾಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್, ನಿರ್ದೇಶಕರಾದ ದ್ವಾರಕನಾಥ್, ಎಸ್.ಎಲ್.ಆರ್.ಗೋವಿಂದರಾಜ್ , ಸಂಪಂಗ್ಗಿ ಕೃಷ್ಣಯ್ಯ ಶೆಟ್ಟಿ ,ಕಾರ್ಯದರ್ಶಿ ಟಿ.ಆರ್.ರಾಮಮೂರ್ತಿ, ಸೇರಿದಂತೆ ಇತರರಿದ್ದರು. ಆರ್ಯವೈಶ್ಯ ಮಹಿಳಾಮಂಡಳಿ, ವಾಸವಿ ಯುವಜನ ಸಂಘದ ಪದಾಧಿಕಾರಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಸಾಗಿದ ಪಾದುಕೆಗಳನ್ನು ಪಟ್ಟಣದ ಶ್ರೀನಿವಾಸ ಶೆಟ್ಟಿ, ಗೋವಿಂದರಾಜ್, ನಟರಾಜ್,ಗುರುನಾಥ್, ರಂಗನಾಥ್, ನಾಗಭೂಷಣ್, ಪ್ರದೀಪ್ ಅವರುಗಳು ತಮ್ಮ ಮನೆಗೆ ಕರೆದೊಯ್ದು, ಅಭಿಷೇಕ ನಡೆಸಿ ಪೂಜೆಸಿ ಮಡಿಲಕ್ಕಿ ಹಾಕಿದರು. ಆಗಮಿಸಿದ ಭಕ್ತರಿಗಾಗಿ ಪ್ರಸಾದವಿನಿಯೋಗ ಏರ್ಪಡಿಸಿದ್ದರು. ಮೆರವಣಿಗೆಯ ನಂತರ ನಿಜಪಾದುಕೆಹೊತ್ತ ಸುವರ್ಣರತಥ ದಸೂಡಿ ಗ್ರಾಮಕ್ಕೆ ತೆರಳಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ