ಹುಳಿಯಾರು ಪಟ್ಟಣದ ಟಿಪ್ಪುಸುಲ್ತಾನ್ ಪತ್ತಿನ ಸಹಕಾರ ಸಂಘದವತಿಯಿಂದ ನೂತನ ೨೦೧೫ರ ಕ್ಯಾಲೆಂಡರನ್ನು ಸಂಘದ ಕಛೇರಿಯಲ್ಲಿ ಅಧ್ಯಕ್ಷ ಫಯಾಜ್ ಮಂಗಳವಾರ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು ಟಿಪ್ಪು ಸುಲ್ತಾನ್ ಸಂಘದಿಂದ ಹಿಂದುಳಿದ ವರ್ಗದವರಿಗೆ ಸಾಲಸೌಲಭ್ಯ ನೀಡುತ್ತಿದ್ದು ಇದರಿಂದ ಹೆಚ್ಚಿನ ಅನುಕೂಲವಾಗಿದೆ ಎಂದರು. ಪ್ರಾರಂಭದಿಂದ ಇದುವರೆಗೂ ಸಂಘ ಉತ್ತಮವಾಗಿ ,ಲಾಭದಾಯಕವಾಗಿ ವಹಿವಾಟು ನಡೆಸುತ್ತಿದೆ ಎಂದರು.
ಹುಳಿಯಾರಿನ ಟಿಪ್ಪುಸುಲ್ತಾನ್ ಪತ್ತಿನ ಸಹಕಾರ ಸಂಘದವತಿಯಿಂದ ನೂತನ ೨೦೧೫ರ ಕ್ಯಾಲೆಂಡರನ್ನು ಸಂಘದ ಕಛೇರಿಯಲ್ಲಿ ಅಧ್ಯಕ್ಷ ಫಯಾಜ್ ಮಂಗಳವಾರ ಬಿಡುಗಡೆ ಮಾಡಿದರು. |
ಸಂಘದ ನಿರ್ದೇಶಕ ಇಮ್ರಾಜ್ ಮಾತನಾಡಿ, ಸಂಘದವತಿಯಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದು ಸಾಲ ಪಡೆದವರು ನಿಗದಿತ ಸಮಯದಲ್ಲಿ ಮರುಪಾವತಿಸಿದರೆ ಪುನ: ಸಾಲ ನೀಡಲು ಅನುಕೂಲವಾಗುತ್ತದೆ ಎಂದರು. ಮುಂದಿನ ವರ್ಷದಿಂದ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರಕಾರದ ವತಿಯಿಂದಲೇ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿರುವುದು ಹರ್ಷದ ಸಂಗತಿಯಾಗಿದ್ದು, ಮುಸ್ಲಿಂ ಸಮುದಾಯದವರ ಬಹುದಿನದ ಬೇಡಿಕೆಯನ್ನು ಮನಗಂಡ ಸರ್ಕಾರ ಇದೀಗ ಇಂತಹ ತೀರ್ಮಾನ ಕೈಗೊಂಡಿರುವುದು ನಮ್ಮ ಬೇಡಿಕೆಗೆ ಸಂದ ಪ್ರತಿಫಲವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಅಪ್ಸರ್,ನಿರ್ದೇಶಕರಾದ ನಯಾಜ್,ಇರ್ಪಾನ್, ಕಾರ್ಯದರ್ಶಿ ಮುಬಾರಕ್,ಸಿಬ್ಬಂದಿವರ್ಗದ ರಷೀದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ