ಹುಳಿಯಾರು : ಪಟ್ಟಣದ ಕೆರೆ ತೆರವು ಕಾರ್ಯಾಚರಣೆ ಶುಕ್ರವಾರದಂದು ಪ್ರಾರಂಭವಾಗಿದ್ದು ವಳಗೇರಹಳ್ಳಿ ಭಾಗದಿಂದ ಕಾರ್ಯಾಚರಣೆ ನಡೆಯುತ್ತಿದೆ.
ಸುಮಾರು ೪೩೮ ಎಕರೆ ವಿಸ್ತಾರವುಳ್ಳ ಹುಳಿಯಾರು ಕೆರೆ ಕೇಶವಾಪುರ, ವಳಗೆರೆಹಳ್ಳಿ, ವೈ.ಎಸ್.ಪಾಳ್ಯ ಹಾಗೂ ಪಟ್ಟಣದ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿದ್ದು, ಈ ಭಾಗದಲ್ಲಿನ ಹೆಚ್ಚಿನ ಜಾಗ ಒತ್ತುವರಿಯಾಗಿದೆ. ಈಗ ಸದ್ಯ ವಳಗೇರಹಳ್ಳಿ ಹಾಗೂ ಕೇಶವಾಪುರದ ಕಡೆಯಿಂದ ತೆರವು ಕಾರ್ಯ ನಡೆಯುತ್ತಿದ್ದು ಜೆಸಿಬಿಯಿಂದ ಗಡಿ ಗುರ್ತಿಸಲಾಗುತ್ತಿದೆ. ಇದೇ ವೇಳೆ ಕೆರೆ ಅಂಗಳದಲ್ಲಿದ್ದ ತೆಂಗಿನ ಮರಗಳನ್ನು ಕಂದಾಯ ಇಲಾಖೆ ಅಧಿಕಾರಿಗಳ ಸಕ್ಷಮದಲ್ಲಿ ಧರೆಗುರುಳಿಸಲಾಯಿತು. ಹುಳಿಯಾರು ಕೆರೆ ಅಂಗಳ ಎಕರೆಗಟ್ಟಲೆ ಒತ್ತುವರಿಯಾಗಿದ್ದು ಸಂಪೂರ್ಣ ಸರ್ವೆ ಆದ ಬಳಿಕ ಎಷ್ಟು ಒತ್ತುವರಿಯಾಗಿದೆ ಎಂಬುದರ ಲೆಖ್ಖಸಿಗಲಿದೆ ಎಂದು ಕಂದಾಯ ತನಿಕಾಧಿಕಾರಿ ಹನುಮಂತನಾಯಕ್ ತಿಳಿಸಿದರು.
ಒತ್ತುವರಿ ತೆರವಿನ ಕಾರ್ಯಾಚರಣೆಯಲ್ಲಿ ಗ್ರಾಮಲೆಖ್ಖಿಗ ಶ್ರೀನಿವಾಸ್, ತಾಲ್ಲೂಕು ಸರ್ವೆಯರ್ ಬಸವರಾಜು, ಲಕ್ಷ್ಮಣ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಯವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ