ಇಲ್ಲಿನ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ ಗುರುವಾರದಂದು ಹನುಮಜಯಂತಿ ಆಚರಣೆ ಹಾಗೂ ಮಹಾರಥೋತ್ಸವ ಅಪಾರ ಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ವೈಭವಯುತವಾಗಿ ಜರುಗಿತು.
ಹುಳಿಯಾರಿನ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವ ಅಪಾರಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ನಡೆಯಿತು. |
ಹನುಮಜಯಂತಿ ಅಂಗವಾಗಿ ಗ್ರಾಮದೇವತೆಗಳಾದ ಹುಳಿಯಾರಮ್ಮ ಹಾಗೂ ದುರ್ಗಮ್ಮನವರನ್ನು ಸಮ್ಮುಖದಲ್ಲಿ ಗುರುವಾರ ಮುಂಜಾನೆ ಆಂಜನೇಯಸ್ವಾಮಿಗೆ ಅಭಿಷೇಕ,ಅರ್ಚನೆ ಸೇರಿದಂತೆ ವಿವಿಧ ಪೂಜೆಗಳನ್ನು ನಡೆಸಲಾಯಿತು. ಬಗೆಬಗೆಯ ಪುಷ್ಪ ಹಾಗೂ ಬೆಳ್ಳಿ ಕವಚಗಳಿಂದ ಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.ರಾಮಚಂದ್ರಭಟ್ಟರ ಪೌರೋಹಿತ್ಯದಲ್ಲಿ ಪವಮಾನ ಹೋಮ ನಡೆದು,ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನಡೆಯಿತು. ರಥಕ್ಕೆ ಪುಣ್ಯಾಹ, ದಿಗ್ಬಲಿ ಸೇರಿದಂತೆ ಪೂಜೆ ಸಲ್ಲಿಸಿ, ಗ್ರಾಮದೇವತೆಗಳನ್ನು ಹಾಗೂ ಉತ್ಸವ ಮೂರ್ತಿಯನ್ನು ಸಕಲ ವಾದ್ಯಗಳೊಂದಿಗೆ ಸ್ವಾಮಿಯನ್ನು ಅಲಂಕೃತ ರಥದಲ್ಲಿ ಕುಳ್ಳಿರಿಸಿ, ಭಕ್ತಾಧಿಗಳ ಉದ್ಘೋಷದೊಂದಿಗೆ ರಥವನ್ನೆಳೆಯಲಾಯಿತು. ದೇವಾಲಯದ ಮುಂಭಾಗದಿಂದ ರಾಂಗೋಪಾಲ್ ಸರ್ಕಲ್ ವರೆಗೂ ಹುಳಿಯಾರಮ್ಮ ಹಾಗೂ ದುರ್ಗಮ್ಮನವರನ್ನು ಮದಾಸಿಯಲ್ಲಿ ಕುಣಿಸುತ್ತಾ ಭಕ್ತರು ರಥವನ್ನೆಳೆದರು. ನಂತರ ಭಕ್ತರು ರಥದ ಮೇಲಿದ್ದ ಸ್ವಾಮಿಗೆ ಹಣ್ಣುಕಾಯಿ ಮಾಡಿಸಿದರು.
ಸಮಿತಿಯಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಈ ವೇಳೆ ಶ್ರೀ ಆಂಜನೇಯಸ್ವಾಮಿ ದೇವಾಲಯ ಸಮಿತಿ, ಜಿರ್ಣೋದ್ಧಾರ ಸಮಿತಿ, ಶ್ರೀ ಮಾರುತಿ ಯುವ ಛಾರಿಟಬಲ್ ಟ್ರಸ್ಟ್ ಹಾಗೂ ಕೆ.ಎಂ.ಎಲ್ ಗ್ರೋಪ್ ನ ಎಲ್ಲಾ ಪದಾಧಿಕಾರಿಗಳು ಉಪಸ್ಠಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ