ಹುಳಿಯಾರು ಹೋಬಳಿ ಯಳನಡು ಗ್ರಾಮದ ಹಾರನಹಳ್ಳಿ ಕೆರೆಯಲ್ಲಿ ಚಿರತೆಯೊಂದು ಅನುಮಾನಾಸ್ಪದವಾಗಿ ಸಾವನಫ್ಫಿರುವುದು ಬುಧವಾರದಂದು ಬೆಳಕಿಗೆ ಬಂದಿದ್ದು, ಸಾರ್ವಜನಿಕರಲ್ಲಿ ಕೌತುಕವನ್ನುಂಟುಮಾಡಿದೆ.
ಹುಳಿಯಾರು ಹೋಬಳಿ ಯಳನಡು ಸಮೀಪದ ಹಾರನಹಳ್ಳಿ ಕೆರೆಯಲ್ಲಿ ಬುಧವಾರ ಕಂಡುಬಂದ ಸಾವನಪ್ಪಿರುವ ಚಿರತೆ ಶವ. |
ಮೃತ ಚಿರತೆಯು ಸುಮಾರು ಒಂದೂವರೆಯಿಂದ ಎರಡು ವರ್ಷ ವಯಸ್ಸಿನ ಹೆಣ್ಣು ಚಿರತೆಯಾಗಿದ್ದು, ಕೆರೆಯ ಅಂಗಳದಲ್ಲಿ ಕುರಿ ಮೇಯಿಸುತ್ತಿದ್ದ ಕುರಿಗಾಹಿಗಳು ಚಿರತೆಯ ಮೃತದೇಹವನ್ನು ನೋಡಿದ್ದಾರೆ. ನಂತರ ಆರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಆರಣ್ಯ ಇಲಾಖೆಯ ಸಿಬ್ಬಂದಿಯವರು ಸ್ಥಳಕ್ಕೆ ಆಗಮಿಸಿದ್ದರು.
ಚಿರತೆಯ ಮೃತ ದೇಹ ಈಗಾಗಲೇ ವಾಸನೆ ಬರುತ್ತಿದ್ದು ಹಾಗೂ ನೋಣಗಳು ಮುತ್ತಿಕೊಂಡಿರುವುದನ್ನು ಗಮನಿಸಿದರೆ ಇದು ಸಾವನಪ್ಪಿ ಎರಡು ದಿನಗಳು ಕಳೆದಿವೆ, ಯಾವ ಕಾರಣದಿಂದ ಸತ್ತಿದೆ ಎಂಬುದು ಶವಪರೀಕ್ಷೆಯ ನಂತರ ತಿಳಿದು ಬರಲಿದೆ ಎಂದು ಸ್ಥಳದಲ್ಲಿದ್ದ ವನಪಾಲಕ ಬಸವರಾಜು ತಿಳಿಸಿದರು. ಸಿಬ್ಬಂದಿಗಳಾದ ರಂಗನಾಥ್, ಉಮೇಶ್ ಸ್ಥಳದಲ್ಲಿದ್ದರು.
ಯಳನಡು ಸುತ್ತಮುತ್ತಲ ಗ್ರಾಮಗಳಲ್ಲಿ ಇತ್ತೀಚೆಗೆ ಕುರಿ,ಮೇಕೆಗಳು ಮಾಯವಾಗುತ್ತಿದ್ದು ಕುರಿಗಾಹಿಗಳಲ್ಲಿ ಆತಂಕಕ್ಕೀಡು ಮಾಡಿತ್ತು. ಕೆರೆ ಮುಳ್ಳು ಜಾಲಿಯಿಂದ ಆವೃತವಾಗಿದ್ದು ಯಾವೊಂದ ಪ್ರಾಣಿಯ ಇರುವು ತಿಳಿದು ಬರುತ್ತಿರಲಿಲ್ಲ. ಕುರಿಗಾಹಿಗಳು ಕೆಲ ಬಾರಿ ಚಿರತೆಯನ್ನು ಕಂಡಿರುವುದಾಗಿ ತಿಳಿಸಿದ್ದರೂ ಸಹ ಚಿರತೆ ಇರುವಿಕೆಯ ಬಗ್ಗೆ ಯಾವೊಂದು ಕುರುಹು ಪತ್ತೆಯಾಗಿರಲಿಲ್ಲ. ಸದ್ಯ ಕೆರೆ ಅಂಗಳದಲಿರುವ ಗುಂಡಿಯಲ್ಲಿರುವ ನೀರನ್ನು ಕುಡಿಯಲು ಬಂದಿರುವ ಚಿರತೆಗೆ ವಿಷ ಪ್ರಾಶನ ಮಾಡಿರಬಹುದು ಅಥವಾ ಕಾಡುಹಂದಿ ಎಂದು ಗುಂಡಿಟ್ಟು ಕೊಂದಿರಬಹುದೆಂಬ ಶಂಕೆ ಗ್ರಾಮಸ್ಥರಲ್ಲಿ ವ್ಯಕ್ತವಾಗಿದೆ. ಚಿರತೆ ಸತ್ತಿರುವ ವಿಷಯ ತಿಳಿದ ಗ್ರಾಮಸ್ಥರು ಚಿರತೆ ಬಿದಿದ್ದಲ್ಲಿಗೆ ಹೋಗಿ ಕುತೂಹಲದಿಂದ ವೀಕ್ಷಿಸುತ್ತಿದ್ದು ಇದುವರೆಗು ಇಲ್ಲಿ ಚಿರತೆಯೊಂದು ಇತ್ತೆಂಬುದೇ ಪ್ರತಿಯೊಬ್ಬರಿಗೂ ಬೆರಗಿನ ವಿಚಾರವಾಗಿದೆ.ಸತ್ತಚಿರತೆಯ ಕಳೆಬರಹ ನೋಡಲು ತಂಡೋಪತಂಡವಾಗಿ ಜನ ಆಗಮಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ